Advertisement

ವಿದ್ಯಾರ್ಥಿಗಳಲ್ಲಿ ದೇಶದ ಅಭಿವೃದ್ಧಿಯ ಹೊಣೆಗಾರಿಕೆ ಇರಲಿ: ದಯಾನಂದ ಶೆಟ್ಟಿ

12:11 PM Oct 23, 2021 | Team Udayavani |

ಥಾಣೆ: ಸ್ವಚ್ಛತೆಯಿಂದ ಜೀವನದಲ್ಲಿ ಆರೋಗ್ಯ ಮತ್ತು ಅಭಿವೃದ್ಧಿ ಯನ್ನು ಹೊಂದಬಹುದು. ದೇಶದ ಭವಿಷ್ಯ ಯುವಪೀಳಿಗೆಯ ಮೇಲೆ ಅವಲಂಬಿತವಾಗಿದೆ. ಒಬ್ಬ ನಾಗರಿಕನಾಗಿ, ವಿದ್ಯಾರ್ಥಿಯಾಗಿ ದೇಶದ ಅಭಿವೃದ್ಧಿಯ ಹೊಣೆಗಾರಿಕೆಯನ್ನು ವಹಿಸಲು ನಾವು ಯಾವಾಗಲು ಸಿದ್ಧರಾಗಿರಬೇಕು. ಸ್ವಚ್ಛ ಭಾರತ ಅಭಿಯಾನವು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರಕಾರ ಪ್ರಾರಂಭಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ ಎಂದು ಥಾಣೆ ನವೋದಯ ಕನ್ನಡ ಸಂಘದ ಅಧ್ಯಕ್ಷ ದಯಾನಂದ ಎಸ್‌. ಶೆಟ್ಟಿ  ತಿಳಿಸಿದರು.

Advertisement

ಅ. 2ರಂದು ಗಾಂಧಿ ಜಯಂತಿ ಪ್ರಯುಕ್ತ ಥಾಣೆ ನವೋದಯ ಕನ್ನಡ ಸೇವಾ ಸಂಘ ಸಂಚಾಲಿತ ನವೋದಯ ಇಂಗ್ಲಿಷ್‌ ಹೈಸ್ಕೂಲ್‌ ಮತ್ತು ಜೂನಿಯರ್‌ ಕಾಲೇಜಿನಿಂದ ಆಯೋಜಿಸಲಾಗಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು  ಮಾತನಾಡಿ, ಈ ಅಭಿಯಾನವು ರಾಷ್ಟೀಯ ಮಟ್ಟದಲ್ಲಿ ಸ್ವಚ್ಛತೆಯನ್ನು ಕೇಂದ್ರಿಕರಿಸುವ ಅಭಿಯಾನವಾಗಿದ್ದು, ಯುವ ಜನತೆಯಲ್ಲಿ  ಜಾಗೃತಿಯನ್ನು ಮೂಡಿಸುವ ಸಲುವಾಗಿ ನಮ್ಮ ನವೋದಯ ಕನ್ನಡ ಸೇವಾ ಸಂಘದ ಸಂಚಾಲಕತ್ವದಲ್ಲಿ ನವೋದಯ ಇಂಗ್ಲಿಷ್‌ ಹೈಸ್ಕೂಲ್‌ ಮತ್ತು ಜೂನಿಯರ್‌ ಕಾಲೇಜ್‌ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿ ಯಶಸ್ವಿಯಾಗಿದೆ ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಅಭಿಯಾನದಲ್ಲಿ  ಶಾಲಾ ಆವರಣ, ನಾನಾ ನಾನಿ ಪಾರ್ಕ್‌, ಶಾಲೆಯ ಆಸುಪಾಸಿನ ಸ್ವಚ್ಛತೆಯನ್ನು ಮಾಡಲಾಯಿತು. ಬಳಿಕ ಕ್ಲೀನ್‌ ಇಂಡಿಯಾ ಗ್ರೀನ್‌ ಇಂಡಿಯಾ, ಸ್ವಚ್ಛ ಭಾರತ್‌- ಸುಂದರ್‌ ಭಾರತ್‌ ಇತ್ಯಾದಿ ಸ್ಲೋಗನ್‌ಗಳ ಪತಾಕೆಯೊಂದಿಗೆ ಜಾಗೃತಿ ಅಭಿಯಾನ ರ್ಯಾಲಿಯನ್ನು ನಡೆಸಲಾ ಯಿತು. ಕಾರ್ಯಕ್ರಮವು ಶಾಲಾಡಳಿತ ಮಂಡಳಿ, ಶಾಲಾ ಪ್ರಾಂಶುಪಾಲೆ ಡಾ| ಉಷಾವತಿ ಮೇಡಂ ಇವರ ನೇತೃತ್ವದಲ್ಲಿ

ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳ ಹೆಲ್ಪಿಂಗ್‌ ಹ್ಯಾಂಡ್‌ ಫೌಂಡೇಶನ್‌ ಸದಸ್ಯರ ಸಹಭಾಗಿತ್ವದಲ್ಲಿ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾಯಿನಿಯರು, ಶಿಕ್ಷಕ- ಶಿಕ್ಷಕೇತರ ಸಿಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next