Advertisement

ಸ್ವಚ್ಛತೆಗೆ ವೈಜ್ಞಾನಿಕ ಕಸ ವಿಲೇವಾರಿ ಅವಶ್ಯ

08:29 PM Dec 29, 2021 | Team Udayavani |

ಕಲಬುರಗಿ: ನಮ್ಮ ಸುತ್ತಮುತ್ತಲಿನ ಪರಿಸರ, ವಾತಾವರಣ ಸ್ವತ್ಛತೆಗಾಗಿ ಕಸವನ್ನು ವೈಜ್ಞಾನಿಕ ವಿಲೇವಾರಿ ಮಾಡಬೇಕು ಮತ್ತು ಮನೆಯಲ್ಲೇ ಒಣ ಕಸಿ-ಹಸಿ ಕಸ ವಿಗಂಡಿಸುವುದು ಅಗತ್ಯವಾಗಿದೆ ಎಂದು ಸಹಾಯಕ ಆಯುಕ್ತೆ ಮೋನಾ ರೋತ್‌ ಹೇಳಿದರು.

Advertisement

ನಗರದ ಟೌನ್‌ ಹಾಲ್‌ ಆವರಣದಲ್ಲಿರುವ ಗಾಂಧಿ ಪ್ರತಿಮೆ ಸಮೀಪ ಮಹಿಳಾ ಪ್ರಗತಿಪರ ಚಿಂತಕರ ವೇದಿಕೆ ಹಾಗೂ ಸ್ತ್ರೀಶಕ್ತಿ ಒಕ್ಕೂಟ, ಈಗಲ್ಸ್‌ ಯೂತ್‌ ಕ್ಲಬ್‌ ಸಂಯುಕ್ತಾಶ್ರಯದಲ್ಲಿ ನಡೆದ ಕಸ ವಿಂಗಡಣೆ ಕುರಿತು ಜನರಲ್ಲಿ ಜಾಗೃತಿ ಕಾರ್ಯಕ್ರಮ, ಕ್ರಿಸ್‌ಮಸ್‌ ಅಂಗವಾಗಿ ಪೌರಕಾರ್ಮಿಕರಿಗೆ ಸೀರೆ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವು ನಮ್ಮ ಮನೆಯಲ್ಲಿ ಉತ್ಪತ್ತಿ ಮಾಡುವ ಕಸವನ್ನು ಬೇರೊಬ್ಬರು ಬಂದು ಎತ್ತಬೇಕು ಎನ್ನುವ ಭಾವನೆ ಇಟ್ಟುಕೊಳ್ಳುವುದು ಸರಿಯಲ್ಲ. ಸ್ವತ್ಛತಾ ಕಾರ್ಯಕ್ಕೆ ಪೌರ ಕಾರ್ಮಿಕರು ನಿಯೋಜನೆಗೊಂಡಿದ್ದಾರೆ. ಆದರೆ, ಅವರೊಂದಿಗೆ ಕೈಜೋಡಿಸಿ ಮನೆಯ ಪರಿಸರ ಸ್ವತ್ಛವಾಗಿ ಇಟ್ಟುಕೊಳ್ಳುವುದು ಎಲ್ಲರ ಜವಾಬ್ದಾರಿ ಆಗಬೇಕೆಂದು ಸಲಹೆ ನೀಡಿದರು. ಕಲಬುರಗಿ ನಗರ ಸ್ವತ್ಛತೆಗಾಗಿ ಮಹಾನಗರ ಪಾಲಿಕೆಯಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅವುಗಳ ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಜತೆಗೆ ಪೌರಕಾರ್ಮಿಕರ ಆರೋಗ್ಯ ಕಾಳಜಿ ವಹಿಸುವ ದೃಷ್ಟಿಯಿಂದ ಎಲ್ಲರೂ ಕಸ ವಿಲೇವಾರಿ ಶಿಸ್ತು ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಹಸಿ ಕಸ-ಒಣ ಕಸ ವಿಂಗಡಣೆ ಕಡ್ಡಾಯವಾಗಿ ಮಾಡುವಂತೆ ಆಗಬೇಕು ಎಂದರು. ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕಿ ಡಾ| ಗೀತಾ ಎಸ್‌.ಪಾಟೀಲ, ಜೈನ ಸಮಾಜ ಸಂಘಟನೆ ಅಧ್ಯಕ್ಷೆ ಶೀತಲ್‌ ಕುಲಕರ್ಣಿ, ಗುಲಬರ್ಗಾ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಸಹಾಯಕಿ ಜಾನಕಿ ಎಂ.ಗುದ್ದಿ, ಈಗಲ್ಸ್‌ ಯೂತ್‌ ಕ್ಲಬ್‌ನ ಅಧ್ಯಕ್ಷೆ ಆಯಾ¾ನ್‌ ತಾಜೀನ್‌, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಮಲ್ಲಮ್ಮ ಕಡ್ಲಾ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮಹಿಳಾ ಪ್ರಗತಿಪರ ಚಿಂತಕರ ವೇದಿಕೆ ಅಧ್ಯಕ್ಷೆ ನಾಗರತ್ನಾ ಬಿ.ದೇಶಮಾನೆ ಅಧ್ಯಕ್ಷತೆ ವಹಿಸಿದ್ದರು. ಪೌರ ಕಾರ್ಮಿಕರಿಗೆ ಸೀರೆ ಹಾಗೂ ಬೆಡ್‌ಶೀಟ್‌ ಗಳನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next