Advertisement

ವಿರೂಪಾಕ್ಷಿ ದೇಗುಲದಲ್ಲಿ ಜಿಲ್ಲೆ, ತಾ. ಅಧಿಕಾರಿಗಳಿಂದ ಸ್ವಚ್ಛತಾ ಕಾರ್ಯ

03:06 PM Dec 08, 2020 | Suhan S |

ಮುಳಬಾಗಿಲು: ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಯಾವುದೇ ರೀತಿಯ ಮೇಲು ಕೀಳು ಮನೋಭಾವನೆಯಿಂದ ಇತರೆ ಸಿಬ್ಬಂದಿ ವರ್ಗದವರನ್ನು ಕಾಣದೆ ಸಮಾನ ರೀತಿಯಲ್ಲಿ ಕಂಡಾಗ ಪ್ರತಿ ಕಾರ್ಯ ಸುಲಭವಾಗಿ ನಡೆಯುತ್ತದೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದರು.

Advertisement

ತಾಲೂಕಿನ ವಿರೂಪಾಕ್ಷಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿದೇವಾಲಯದಲ್ಲಿ ಏರ್ಪಡಿಸಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸ್ನೇಹ ಸಂಬಂಧವಿರಲಿ: ಅಧಿಕಾರದಿಂದ ದರ್ಪ ತೋರಿಸಿದರೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ, ಬದಲಿಗೆ ನಮ್ಮ ಸಿಬ್ಬಂದಿ ಜತೆಗೆ ಸ್ನೇಹ ಸಂಬಂಧ ಬೆಳೆಸಿಕೊಂಡು ಕೆಲಸ ನಿರ್ವಹಿಸಿದರೆ ಎಂತಹ ‌ ಕಠಿಣ ಸಮಸ್ಯೆ ಬಂದರೂ ಸುಲಭವಾಗಿ ಎದುರಿಸಬಹುದು ಎಂದರು.

ಗಾಂಧೀಜಿ ಕಂಡಂತಹ ಸ್ವಚ್ಛ ಭಾರತ ಕನಸು ನನಸಾಗಿಸಲು ಮತ್ತು ಉತ್ತಮ ಪರಿಸರಕ್ಕಾಗಿ, ಕಸ ರಹಿತ ಮಾಲಿನ್ಯ ರಹಿತ ಸ್ವಚ್ಛ ಗ್ರಾಮಗಳನ್ನಾಗಿ ರೂಪಿಸಲು ಪ್ರತಿಯೊಬ್ಬರೂ ಪಣತೊಡಬೇಕೆಂದರು.

ಒಗ್ಗಟ್ಟಿರಲಿ: ‌ತಹಶೀಲ್ದಾರ್‌ ರಾಜಶೇಖರ್‌ ಮಾತ ನಾಡಿ, ತಾಲೂಕು ಆಡಳಿತದೊಂದಿಗೆತಾಲೂ ಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈಗಾಗಲೇ ಕೊರೊನಾ ಹರಡುವಿಕೆ ತಡೆಗಟ್ಟಲು ತುಂಬಾ ಅನುಕೂಲವಾಗಿ ತಾಲೂಕಿನ ಒಗ್ಗಟ್ಟನ್ನು ಪ್ರದರ್ಶಿಸಲಾಗಿದೆ ಎಂದರು.

Advertisement

ತಾಪಂ ಇಒ ಶ್ರೀನಿವಾಸ್‌ ಮಾತನಾಡಿ, ತಾಲೂಕಿನ 30 ಗ್ರಾಪಂಗಳ ಪಿಡಿಒ ಮತ್ತು ಜಲಗಾರರನ್ನು ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯ ಶ್ರಮದಾನಕ್ಕೆ ಕರೆಸಿ ಕೊಳ್ಳಲಾಗಿದೆ. ಈ ಕಾರ್ಯಕ್ರಮದಿಂದ ಮುಂದಿನ ದಿನಗಳಲ್ಲಿ ಎಲ್ಲರಲ್ಲಿಯೂಐಕ್ಯತಾ ಮನೋಭಾವ ಬೆಳೆದು ಸರ್ಕಾರಿ ಕೆಲಸ ಕಾರ್ಯ ಮಾಡಲು ಒಬ್ಬರಿಂದ ಮತ್ತೂಬ್ಬರಲ್ಲಿ ಉತ್ತಮ ಒಡಂಬಡಿಕೆ ಮಾಡಲು ಅನುಕೂಲವಾಯಿತು ಎಂದರು.

ಜಿಪಂ ಉಪ ಕಾರ್ಯದರ್ಶಿ ಹನುಮಂತಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ವಿಜಯಕುಮಾರ್‌, ಸಿಪಿಐ ಗಣೇಶ ನಾಯ್ಕ,ಪೌರಾಯುಕ್ತ ಶ್ರೀನಿವಾಸಮೂರ್ತಿ, ಬಿಇಒ ಗಿರಿಜೇಶ್ವರಿ ದೇವಿ, ಪಿಎಸ್‌ಐ ಪ್ರದೀಪ್‌ಸಿಂಗ್‌, ಡಾ. ವರ್ಣಶ್ರೀ, ರಾಜಸ್ವ ನಿರೀಕ್ಷಕ ಸುಬ್ರಮಣಿ, ತಾಪಂ ಎಡಿ ನರೇಗಾ ಎ.ಡಿ.ರವಿಚಂದ್ರ, ಇ.ಚಂದ್ರಪ್ಪ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಎಲ್ಲಾ ಇಲಾಖೆ, ಪೊಲೀಸ್‌, ನಗರಸಭೆ ಅಧಿಕಾರಿಗಳು ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next