Advertisement
ನಗರಗಳ ನಡುವೆ ಸ್ವಚ್ಛತೆ ಕುರಿತಂತೆ ಸ್ಪರ್ಧೆ ಏರ್ಪಡಿಸಿ ಸ್ವಚ್ಛ ನಗರಗಳನ್ನು ಸೃಷ್ಟಿಸುವ ಸ್ವಚ್ಛ ಸರ್ವೇಕ್ಷಣಾ ಅಭಿಯಾನ ದಲ್ಲಿ ಈವರೆಗೆ ಬೆಂಗಳೂರು ಕಳಪೆ ಪ್ರದರ್ಶನ ನೀಡಿದೆ. 2016ರಿಂದ ನಡೆಯು ತ್ತಿರುವ ಅಭಿಯಾನದಲ್ಲಿ ಬೆಂಗಳೂರು ಈವ ರೆಗೂ ಉತ್ತಮ ಸ್ಥಾನ ಪಡೆದಿಲ್ಲ. ಅದ ರಲ್ಲೂ ಈ ಬಾರಿ ಬೆಂಗಳೂರು ಸ್ಪರ್ಧಿ ಸಿದ್ದ ವಿಭಾಗ ದಲ್ಲಿದ್ದ 45 ನಗರಗಳ ಪೈಕಿ 43ನೇ ರ್‍ಯಾಂಕ್ ಪಡೆದಿದೆ.
Related Articles
Advertisement
ಸದ್ಯ ಇರುವ 7 ಸಂಸ್ಕರಣಾ ಘಟಕಗಳ ಪೈಕಿ 5 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಿಂದ 1 ಸಾವಿರ ಟನ್‌ಗೂ ಹೆಚ್ಚಿನ ತ್ಯಾಜ್ಯ ಸಂಸ್ಕರಿಸಲಾ ಗುತ್ತಿದೆ. ಉಳಿದ ಎರಡು ಘಟಕಗಳನ್ನೂ ಕಾರ್ಯನಿರ್ವಹಣೆ ಮಾಡುವಂತೆ ಮಾಡಿ 1,500 ಟನ್‌ಗೂ ಹೆಚ್ಚಿನ ಹಸಿ ತ್ಯಾಜ್ಯ ಸಂಸ್ಕರಣೆಯಾಗುವಂತೆ ಮಾಡುವ ಬಗ್ಗೆ ಚರ್ಚಿಸಲಾಗಿದೆ. ಅದರ ಜತೆಗೆ ವಾರ್ಡ್ ಮಟ್ಟದಲ್ಲಿಯೇ ತ್ಯಾಜ್ಯ ಸಂಸ್ಕರಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.
ಜಾಗೃತಿ ಮೂಡಿಸಲು 10 ಕೋಟಿ ರೂ. ವೆಚ್ಚ: ಬಿಬಿಎಂಪಿ ಕ್ರಮಗಳ ಜತೆಗೆ ಜನರಿಂದ ವ್ಯಕ್ತವಾಗುವ ಅಭಿಪ್ರಾಯವೂ ಮುಖ್ಯವಾದದ್ದಾಗಿದೆ. ಪ್ರತಿಬಾರಿಯೂ ಜನರು ಬೆಂಗಳೂರಿನ ಸ್ವಚ್ಛತೆ ಬಗ್ಗೆ ಸೂಚಿಸುವ ಅಭಿಪ್ರಾಯದಿಂದ ಕಡಿಮೆ ಅಂಕಗಳು ಬರುತ್ತಿವೆ. ಆದ್ದರಿಂದ ಈ ಬಾರಿ ಜನರಲ್ಲಿ ಜಾಗೃತಿ ಮೂಡಿಸಲು ಹಲವು ವಿಧಾನಗಳನ್ನು ಅಳವಡಿಸಲು ಬಿಬಿಎಂಪಿ ಮುಂದಾಗಿದೆ. ಪ್ರಮುಖವಾಗಿ ಬಿಎಂಟಿಸಿ ಬಸ್ ಸೆರಿ ಇನ್ನಿತರ ಕಡೆ ಪ್ರಚಾರ ಮಾಡುವುದು, ಬೀದಿ ನಾಟಕ ಪ್ರದರ್ಶನ, ಬಿಬಿಎಂಪಿ ಟವರ್‌ಗಳಲ್ಲಿ ಲೈಟಿಂಗ್ ಅಳವಡಿಕೆ, ಶಾಲೆಗಳಲ್ಲಿ ಕಾರ್ಯಾಗಾರ ಆಯೋಜನೆ, ಎಫ್ಎಂ, ಮುದ್ರಣ, ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಎಲ್ಲ ಕಾರ್ಯಗಳಿಗಾಗಿ 10 ಕೋಟಿ ರೂ. ವ್ಯಯಿಸಲಾಗುತ್ತಿದೆ.
43ನೇ ರ್‍ಯಾಂಕ್ ಪಡೆದ ಸಿಲಿಕಾನ್ ಸಿಟಿ : 2022ರ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಜನರು ವಾಸಿಸುವ 45 ನಗರಗಳ ಪೈಕಿ ಬೆಂಗಳೂರು 43ನೇ ಸ್ಥಾನ ಪಡೆದಿದೆ. 2021ರಲ್ಲಿ 28ನೇ ರ್‍ಯಾಂಕ್ ಪಡೆದಿದ್ದ ನಗರ ಈ ಬಾರಿ 15 ಸ್ಥಾನ ಕುಸಿತ ಕಂಡಿತ್ತು. 2023ರ ಸ್ವಚ್ಛ ಸರ್ವೇಕ್ಷಣ ಅಭಿಯಾನಕ್ಕೆ ಈಗಿನಿಂದಲೇ ಸಿದ್ಧತೆ ನಡೆಸಲಾಗುತ್ತಿದೆ. ಪ್ರಮುಖವಾಗಿ ತ್ಯಾಜ್ಯ ಹಾಗೂ ಲಿಚೆಟ್ ಸಂಸ್ಕರಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚೆಯನ್ನೂ ನಡೆಸಲಾಗಿದೆ. ಶೀಘ್ರದಲ್ಲಿ ರೂಪುರೇಷೆ ರೂಪಿಸಿ ಸ್ವಚ್ಛ ನಗರ ಪಟ್ಟ ಪಡೆಯಲು ಎಲ್ಲ ಕ್ರಮ ಕೈಗೊಳ್ಳಲಾಗುವುದು. -ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ
-ಗಿರೀಶ್ ಗರಗ