ಚಿಕ್ಕಮಗಳೂರು: ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರು ಸೈಕಲ್ ಏರಿ ವಿದ್ಯಾರ್ಥಿಗಳೊಂದಿಗೆ ನಗರ ಪ್ರದಕ್ಷಿಣೆ ಮಾಡಿದರು.
ಸೋಮವಾರ ನಗರದ ನಗರಸಭೆ ಆವರಣದಲ್ಲಿ ಸ್ವಚ್ಛ ಭಾರತ್ ಮಿಷನ್ ಸ್ವಚ್ಛ ಸರ್ವೇಕ್ಷಣ್-2021 ಅಂಗವಾಗಿ ಆಯೋಜಿಸಿದ್ದ ಸೈಕ್ಲೋಥಾನ್ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ನಗರಸಭೆ ಪೌರಾಯುಕ್ತ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೊಂದಿಗೆ ಸೈಕಲ್ ಏರಿದ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರು ಬೋಳರಾಮೇಶ್ವರ ದೇವಸ್ಥಾನ,ತೊಗರಿ ಹಂಕಲ್ ಸರ್ಕಲ್, ಐ.ಜಿ. ರಸ್ತೆಮೂಲಕ ಹನುಮಂತಪ್ಪ ವೈತ್ತದವರೆಗೂಸೈಕಲ್‌ನಲ್ಲಿ ತೆರಳಿ ಸಾರ್ವಜನಿಕರ ಗಮನ ಸೆಳೆದರು.
ಈ ವೇಳೆ ನಗರದಲ್ಲಿ ಸ್ವಚ್ಛತೆ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸ್ವಚ್ಛತೆ ಕುರಿತ ಭಿತ್ತಿಪತ್ರಗಳನ್ನು ವಿತರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜನತೆಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ನಗರಸಭೆ ನೌಕರರು ಮತ್ತು ವಿದ್ಯಾರ್ಥಿಗಳು ಮುಂದೆ ಬಂದಿರುವುದು ಅಭಿನಂದನೀಯ. ತಮ್ಮ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛ ವಾಗಿಟ್ಟುಕೊಳ್ಳಬೇಕು ಹಾಗೂ ತಮ್ಮ ಕುಟುಂಬಸ್ಥರು, ಸ್ನೇಹಿತರಲ್ಲೂ ಅರಿವು ಮೂಡಿಸಿ ನಗರವನ್ನು ಸ್ವಚ್ಛ ನಗರವಾಗಿಸಬೇಕು ಎಂದು ಹೇಳಿದರು.
ನಗರಸಭೆ ಆಯುಕ್ತ ಬಸವರಾಜ್ ಮಾತನಾಡಿ, ಸ್ವತ್ಛತಾ ಕಾರ್ಯಕ್ರಮದಲ್ಲಿಸಾರ್ವಜನಿಕರು ಕೈಜೋಡಿಸಬೇಕೆಂದು ಅರಿವು ಮೂಡಿಸುವುದು ಸೈಕಲ್ ಜಾಥಾ ಮಾಡುವುದರ ಉದ್ದೇಶವಾಗಿದೆ ಎಂದರು. ನಗರದ ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಥಮದರ್ಜೆಕಾಲೇಜು ಹಾಗೂ ಸರ್ಕಾರಿ ಕಿರಿಯ ಪಪೂಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರುಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದರು. ಸಹಾಯಕ ಕಾರ್ಯಪಾಲಕ ಪರಿಸರಅಭಿಯಂತರ ಮಧು ಮನೋಹರ್,ವ್ಯವಸ್ಥಾಪಕ ಮಂಜುನಾಥ್, ಆರೋಗ್ಯನಿರೀಕ್ಷಕ ವೆಂಕಟೇಶ್, ಹಿರಿಯ ಆರೋಗ್ಯನಿರೀಕ್ಷಕ ರಂಗಪ್ಪ, ಶ್ರೀನಿವಾಸ್, ಈಶ್ವರ್,ಪರಿಸರ ಅಭಿಯಂತರ ಮಧು, ಸ್ಯಾನಿಟರಿ ಸೂಪರ್‌ವೈಸರ್ ಅಣ್ಣಯ್ಯ, ಸುನೀಲ್, ಮಂಜುನಾಥ್ ಇದ್ದರು.