Advertisement
ಪಟ್ಟಣದ ಪುರಸಭೆ ಎದುರು ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಆಗದಿದ್ದರಿಂದ ಪಟ್ಟಣದ ಜನತೆ ಹಣ ನೀಡಿ ಖಾಸಗಿಯವರಿಂದ ಕುಡಿಯುವ ನೀರನ್ನು ಖರೀದಿಸುವ ದುಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಬೇಸಿಗೆ ದಿನಗಳಲ್ಲಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವುದು ಪುರಸಭೆ ಹೊಣೆ. ಆದರೆ, ಘಟಕ ಎರಡು ತಿಂಗಳಿಂದ ಸ್ಥಗಿತ ಗೊಂಡಿ ದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಪಟ್ಟಣದ ಜನತೆ ಘಟಕದ ಬಳಿಗೆ ಆಗಮಿಸಿ ನಿರುತ್ಸಾಹದಿಂದ ಹಿಂತಿ ರುಗುತ್ತಿದ್ದಾರೆ. ಈಗಾಗಲೇ ಪಟ್ಟಣದ ಹಲವೆಡೆ ಸ್ವಚ್ಛತೆ ಇಲ್ಲದೆ ಹಲವಾರು ಜನರಿಗೆ ಜ್ವರ ಕಾಣಿಸಿಕೊಂಡು ಆಸ್ಪತ್ರೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಕೋಟೆ ನಿವಾಸಿ ಆರ್.ವೆಂಕಟೇಶ್ ಮಾತನಾಡಿ, ಪಟ್ಟಣದ ಬಹುತೇಕ ವಾರ್ಡ್ ಜನರು ಪುರಸಭೆ ಮುಂಭಾಗ ಇರುವ ಶುದ್ಧ ನೀರಿಗೆ ಅವ ಲಂಬಿತವಾಗಿದ್ದು ಕಳೆದ 2 ತಿಂಗಳಿಂದ ಘಟಕದಲ್ಲಿ ನೀರು ಬರುತ್ತಿಲ್ಲ. ಪುರಸಭೆಗೆ ಚುನಾಯಿತ ಪ್ರತಿನಿಧಿಗಳು ಇಲ್ಲವಾಗಿರುವುದರಿಂದ ಈ ಅವ್ಯವಸ್ಥೆ ಯಾಗಿದ್ದು ಅಧಿಕಾರಿಗಳು ಜನರ ಹಿತ ಕಾಪಾಡಲು ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.
‘ಉದಯವಾಣಿ’ಗೆ ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಉಮೇಶ್ ಶುದ್ಧ ನೀರಿನ ಘಟಕ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದೆ. ರಿಪೇರಿ ಮಾಡಿಸಲು ಕೆಲವು ಸಾಮಗ್ರಿಗಳು ಸ್ಥಳೀಯ ವಾಗಿ ಸಿಗುವುದಿಲ್ಲ. ಘಟಕದ ರಿಪೇರಿಯನ್ನು ಬಳ್ಳಾರಿ ಹಾಗೂ ಹುಬ್ಬಳಿ ನಗರಗಳಿಂದ ನುರಿತ ಕೆಲಸಗಾರರನ್ನು ಕರೆಸಿ ಮಾಡಿಸ ಬೇಕಾಗಿದೆ. ಅಲ್ಲದೇ, ಶುದ್ಧ ನೀರಿನ ಘಟಕದಲ್ಲಿ ಮೇನೋರಿಯಂ ಹಾಗೂ ಸಿಲಿಂಡರ್‌ನಲ್ಲಿ ದೋಷ ಕಾಣಿಸಿದ್ದು ಈಗಾಗಲೇ ರಿಪೇರಿಗೆ ಕ್ರಮ ಕೈಗೊಳ್ಳ ಲಾಗಿದೆ. ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಪುರಸಭೆ ಬದ್ಧವಾಗಿದೆ ಎಂದರು.
● ಡಿ.ಬಿ.ಮೋಹನ್‌ಕುಮಾರ್