Advertisement
ತಾಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆ, ತುಮಕೂರು ವಿಶ್ವವಿದ್ಯಾಲಯದ ಸಹ ಯೋಗದೊಂದಿಗೆ ಮಿಡಿಗೇಶಿಯ ಪ್ರಥಮ ದರ್ಜೆ ಕಾಲೇಜು ನೇತೃತ್ವದಲ್ಲಿ ನಡೆದ ಪ್ರಥಮ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
Related Articles
Advertisement
ಶಿಬಿರಾರ್ಥಿಗಳು ದೇಶದ ಆಸ್ತಿ: ಸಮಾಜ ತಿದ್ದುವ ನಾವುಗಳು ಮೊದಲು ಪರಿಪೂರ್ಣ ವಾಗಿರಬೇಕು. 32ನೇ ವಯಸ್ಸಿಗೆ ವಿಶ್ವಕ್ಕೆ ಭಾರತದ ಸಂಸ್ಕೃತಿ ತಿಳಿಸಿಕೊಟ್ಟ ಮಹಾಜ್ಞಾನಿ ಸ್ವಾಮಿ ವಿವೇಕಾನಂದರು. ಜಗತ್ತಿನಲ್ಲಿ ತನನಾಗಿ ಬದುಕಿದವರು ಅಳಿದು ಹೋಗುತ್ತಾರೆ.
ಆದರೆ, ಸಮಾಜಕ್ಕಾಗಿ ಬದುಕಿದವರು ಎಂದಿಗೂ ಚಿರಸ್ಥಾಯಿಯಾಗಿರುತ್ತಾರೆ. ಆದ್ದ ರಿಂದ ಇಂಥ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಲ್ಲಿ ಭಾಗವಹಿಸುವ ನೀವುಗಳು ನಿಜವಾಗಿ ದೇಶದ ಆಸ್ತಿಗಳು. ನೀವೆಲ್ಲ ಶಿಸ್ತು, ಸಂಯಮ ಹಾಗೂ ಏಕಾಗ್ರತೆಯಿಂದ ಶಿಕ್ಷಣ ಪಡೆದು ಸಮಾಜಕ್ಕೆ ಆಸ್ತಿಯಾಗಬೇಕೆಂದು ಶುಭ ಕೋರಿದರು.
ಸ್ವಚ್ಛತೆಯ ಕಡೆ ಗಮನ ಹರಿಸಿ: ಮಲ್ಲಸಂದ್ರದ ಕುವೆಂಪು ಕಾಲೇಜಿನ ಪ್ರಾಚಾರ್ಯ ಕುಮಾರ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸುವ ವಿದ್ಯಾರ್ಥಿ ಗಳ ಬದುಕು ಉಜ್ವಲವಾಗಿರುತ್ತದೆ. ಇಲ್ಲಿ ಕಲಿತ ಶಿಕ್ಷಣವನ್ನು ನಿಜವಾಗಿ ಜೀವನದಲ್ಲಿ ಅಳವಡಿಸಿಕೊಂಡರೆ ಭವಿಷ್ಯದ ನಾಯಕರಾಗಲಿದ್ದಾರೆ.
ಗ್ರಾಮೀಣ ಭಾಗದಲ್ಲಿ ಪ್ರತಿಭಾ ವಂತ ವಿದ್ಯಾರ್ಥಿಗಳು ಇರುತ್ತಾರೆ. ಕಾನ್ವೆಂಟ್ ಮಕ್ಕಳಿಗಿಂತ ಹೆಚ್ಚಾಗಿ ಭಾಷೆಯ ಮೇಲೆ ಹಿಡಿತವನ್ನು ಸಾಧಿಸಿರುತ್ತಾರೆ. ಕೀಳರಿಮೆ ಬಿಟ್ಟು ಗ್ರಾಮದ ಸ್ವಚ್ಛತೆಯ ಕಡೆ ಗಮನ ಹರಿಸಿ ಎಂದರು.
ವಿಶ್ವಕ್ಕೆ ಗುರು: ಸಂಪನ್ಮೂಲ ವ್ಯಕ್ತಿಯಾದ ಕುಂಚಿಟಿಗರ ನೌಕರರ ಸಂಘದ ಅಧ್ಯಕ್ಷ ಕರೇಗೌಡ ಮಾತನಾಡಿ, ಗ್ರಾಮಗಳ ಅಭಿವೃದ್ಧಿ ಯಲ್ಲಿ ಯುವಶಕ್ತಿಯ ಪಾತ್ರ ಬಹಳ ಹಿರಿದು. ಈ ಶಕ್ತಿ ಪೂರ್ಣ ಪ್ರಮಾಣದಲ್ಲಿ ವಿನಿಯೋಗ ವಾದರೆ ಭಾರತವು ವಿಶ್ವಕ್ಕೆ ಗುರುವಾಗಲಿದೆ.
ಗ್ರಾಮೀಣ ಭಾಗದ ಮಕ್ಕಳು ಪುಟಿದೆದ್ದರೆ ದೇಶ ಆಳಬಲ್ಲರು. ಅದಕ್ಕೆ ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಹಾಗೂ ಮಾಜಿ ಪ್ರಧಾನಿ ದೇವೇಗೌಡರೇ ಸಾಕ್ಷಿಗಳು ಎಂದರು. ನೀವೆಲ್ಲ ಆತ್ಮವಿಶ್ವಾಸದ ಗಣಿಗಳಂತೆ. ಜೇನು ನೊಣ ಹಲವು ಹೂವಿಂದ ಮಕರಂದ ಹೀರಿ ಗೂಡು ಕಟ್ಟುತ್ತದೆ. ಅದರಂತೆ ನೀವು ಹಲವು ಸಾಧಕರ ಮಾರ್ಗದರ್ಶನದಲ್ಲಿ ಉತ್ತಮವಾದ ಭವಿಷ್ಯ ಕಟ್ಟಿಕೊಂಡು ದೇಶದ ಸದೃಢ ನಾಯಕರಾಗಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಟಿ.ಎನ್.ನರಸಿಂಹಮೂರ್ತಿ, ರಾಷ್ಟ್ರೀಯ ಸೇವಾ ಯೋಜನಾ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಬದಲಾವಣೆ ತರುವ ಶಕ್ತಿವಂತರಾಗಿರುತ್ತಾರೆ. ಇಲ್ಲಿ ಸ್ನೇಹ, ಸಹಬಾಳ್ವೆ ಹಾಗೂ ನಾಯಕತ್ವದ ಗುಣ ಕಲಿಸಲಾಗುತ್ತದೆ. ಇದು ನಿಮ್ಮ ಬದುಕನ್ನು ಮಾದರಿಯಾಗಿಸಲಿದೆ ಎಂದರು.
ಈ ಸಂದರ್ಭದಲ್ಲಿ ಕಸಾಪ ನಿರ್ದೇಶಕ ನರಸೇಗೌಡ, ರೆಡ್ಡಿಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಾಗರಾಜು, ಮುಖಂಡ ರಾದ ಲಕ್ಷ್ಮೀಕುಮಾರ್, ಸಿದ್ದರಾಜು, ಶಿಬಿರಾಧಿಕಾರಿ ಮುನಿರಾಜು, ಸಿರಿಗೆಜ್ಜೆ ರಮೇಶ್, ಸಹ ಪ್ರಾಧ್ಯಾಪಕ ಸತೀಶ್, ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.