Advertisement

ಶುದ್ದ ಕುಡಿಯುವ ನೀರಿನ ಕಾಮಗಾರಿ ಕಳಪೆ: ರಂಗನೂರ

11:55 AM Nov 18, 2021 | Team Udayavani |

ಚಿಂಚೋಳಿ: ತಾಲೂಕಿನ ಗಡಿಕೇಶ್ವಾರ ಗ್ರಾಮದ ಜನರಿಗೆ ಶುದ್ಧ ನೀರು ಪೂರೈಕೆ ಯೋಜನೆ ಸಂಪೂರ್ಣ ಕಳಪೆಮಟ್ಟದಿಂದ ಕೂಡಿದ್ದರಿಂದ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಬೇಕಾಗಿದೆ ಎಂದು ಬಿಜೆಪಿ ಯುವ ಮುಖಂಡ ಅರುಣಕುಮಾರ ರಂಗನೂರ ದೂರಿದ್ದಾರೆ.

Advertisement

ಗಡಿಕೇಶ್ವಾರ ಗ್ರಾಮದ ಜನತೆಗೆ ಶುದ್ಧ ನೀರು ಪೂರೈಸಲು ಸರ್ಕಾರದಿಂದ ಬಹುಗ್ರಾಮ ಯೋಜನೆ ಅಡಿಯಲ್ಲಿ 2017-18ನೇ ಸಾಲಿನಲ್ಲಿ 5 ಕೋಟಿ ರೂ. ಗಳನ್ನು ಕೆ.ಕೆ.ಆರ್‌.ಡಿ ಮೂಲಕ ಮಂಜೂರಿ ಮಾಡಲಾಗಿದೆ. ಸೇಡಂ ತಾಲೂಕಿನ ಕಾಗಿಣಾ ನದಿಯಿಂದ ಚಿಂತಪಳ್ಳಿ, ಭೂತಪೂರ, ರಾಯಕೋಡ, ರುದನೂರ, ಗಡಿಕೇಶ್ವಾರ ಗ್ರಾಮಗಳಿಗೆ ನೀರು ಪೊರೈಸಲು ಯೋಜನೆಯನ್ನು ಆಗಿನ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಂಜೂರಿ ಮಾಡಿದ್ದರು ಎಂದು ವಿವರಿಸಿದ್ದಾರೆ.

ಗಡಿಕೇಶ್ವಾರ ಗ್ರಾಮದ ನಿವಾಸಿಗಳಿಗೋಸ್ಕರ ಒಂದು ಕಿ.ಮೀ ದೂರದಲ್ಲಿ ಅಡವಿಯಲ್ಲಿ ಕುಡಿಯುವ ನೀರಿನ ಸಲುವಾಗಿ ಕೆರೋಳಿ ರಸ್ತೆ ಮಾರ್ಗದಲ್ಲಿ ಆರ್‌.ಒ ಪ್ಲಾಂಟ್‌ ಮಾಡಲಾಗಿದೆ. ಆದರೆ ಗ್ರಾಮದ ಜನರು ಮಾತ್ರ ನೀರು ಬಳಕೆ ಮಾಡದೇ ಇರುವುದರಿಂದ ಹಾಳಾಗಿ ಹೋಗಿದೆ. ಆದರೆ ಕಾಮಗಾರಿ ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರ ಕಾಮಗಾರಿಯನ್ನು ಪೂರ್ಣಗೊಳಿಸದೇ ಶುದ್ಧ ನೀರು ಪೋರೈಕೆ ಯೋಜನೆ ಸ್ಥಗಿತಗೊಳಿಸಿದ್ದರಿಂದ ಕಾಮಗಾರಿಯಲ್ಲಿ ಕೈಗೊಂಡಿರುವ ಸಾಮಗ್ರಿಗಳು ಸಂಪೂರ್ಣ ಹಾಳಾಗಿವೆ.

ಇದರ ಬಗ್ಗೆ ತಾಪಂ ಅಧಿಕಾರಿಗಳಿಗೆ ಮತ್ತು ಪಿಡಿಒ, ಕಾರ್ಯದರ್ಶಿಗಳಿಗೆ ತಿಳಿಸಿದ್ದರೂ ಪ್ರಯೋಜನ ಆಗಿಲ್ಲವೆಂದು ದೂರಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಗಮನಹರಿಸಿ ಶುದ್ಧ ನೀರು ಪೂರೈಕೆ ಯೋಜನೆ ಪೂರ್ಣಗೊಳಿಸಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಗೊಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next