Advertisement

“ತರಗತಿ ನಿರ್ವಹಣೆಯೇ ಸುಸಜ್ಜಿತ ಸಮಾಜದ ಬುನಾದಿ’

12:09 AM May 16, 2019 | sudhir |

ಕಾರ್ಕಳ: ತರಗತಿಯನ್ನು ಉತ್ತಮವಾಗಿ ನಿರ್ವಹಿಸಬಲ್ಲ ಶಿಕ್ಷಕರು ಪರಿಣಾಮಕಾರಿಯಾಗಿ ಮಕ್ಕಳ ಮೇಲೆ ಪ್ರಭಾವ ಬೀರಬಲ್ಲರು. ತರಗತಿ ನಿರ್ವಹಣೆ ಒಂದು ಕಲೆಯಾಗಿದ್ದು, ತಯಾರಿಯಷ್ಟೇ ನಿರ್ವಹಣೆಯೂ ಮುಖ್ಯಎಂದು ಮಡಿಕೇರಿ ಸೆಂಟ್ರಲ್‌ ಸ್ಕೂಲ್‌ನ ಪ್ರಾಂಶುಪಾಲ ಲತೀಶ್‌ ಆರ್‌. ಅಭಿಪ್ರಾಯಪಟ್ಟರು.

Advertisement

ಕಾಂತಾವರದ ಪ್ರಕೃತಿ ನ್ಯಾಶನಲ್‌ ಸ್ಕೂಲ್‌ನಲ್ಲಿ 2 ದಿನಗಳ ಕಾಲ ನಡೆದ ಶಿಕ್ಷಕರ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಕಾಸರಗೋಡು ಎಂ.ಪಿ. ಇಂಟರ್‌ನ್ಯಾಶನಲ್‌ ಸ್ಕೂಲ್‌ನ ಪ್ರಾಂಶುಪಾಲ ಅಬ್ದುಲ್‌ ಜಲೀಲ್‌ ಚಟುವಟಿಕೆ ಆಧಾರಿತ ತರಗತಿ ನಿರ್ವಹಣೆ ಕುರಿತು ಮಾತನಾಡಿದರು. ಪ್ರಕೃತಿ ನ್ಯಾಶನಲ್‌ ಸ್ಕೂಲ್‌ನ ಪ್ರಾಂಶುಪಾಲ ರಾಕಿ ಮಥಾಯಿ ಆ್ಯಂಟನಿ ಅವರು ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕೇಂದ್ರೀಯ ಶಿಕ್ಷಣ ಸಂಸ್ಥೆಗಳ ಒಟ್ಟು 64 ಶಿಕ್ಷಕರು ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next