Advertisement

ಖರೀದಿ ಕೇಂದ್ರಗಳಿಗೆ ಗ್ರಾಮಗಳ ವರ್ಗೀಕರಣ

02:36 PM Jan 04, 2018 | |

ಸಿಂದಗಿ: ಪಟ್ಟಣದಲ್ಲಿನ ಎಪಿಎಂಸಿಯಲ್ಲಿನ ಸಿಂದಗಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತದ ಕಚೇರಿ ಸೇರಿದಂತೆ ತಾಲೂಕಿನ ಆಲಮೇಲ, ದೇವರಹಿಪ್ಪರಗಿ (ಹೊಸೂರ), ಹಿಕ್ಕನಗುತ್ತಿ, ಚಾಂದಕವಠೆ, ಮೋರಟಗಿ, ಗೋಲಗೇರಿ, ಕಲಕೇರಿ, ಕೊಂಡಗೂಳಿ, ಜಾಲವಾದ ತೊಗರಿ ಖರೀದಿ ಕೇಂದ್ರಗಳಲ್ಲಿ ತೊಗರಿ ಬೆಳೆದ ರೈತರ ಹೆಸರು ನೋಂದಾಯಿಸಿಕೊಳ್ಳ ಕಾರ್ಯ ಬುಧವಾರವು ಮುಂದುವರಿದಿದೆ.

Advertisement

ಮಂಗಳವಾರ ಹೆಸರು ನೋಂದಾಯಿಸಲು ಚೀಟಿ ಸಿಗದ ಮಹಿಳೆಯರು ಸೇರಿದಂತೆ ಸಾವಿರಾರು ರೈತರು ಬುಧವಾರ
ಸರದಿ ಹಚ್ಚಿದ್ದರು. ಸಿಬ್ಬಂದಿಗಳು ಹೆಸರು ನೋಂದಾಯಿಸಲು ಪ್ರಾರಂಭಿಸಿದರು. ಮುನ್ನೆಚ್ಚರಿಕೆಯಾಗಿ ಯಾವುದೇ ರೀತಿಯಲ್ಲಿ ಗದ್ದಲವಾಗಬಾರದು ಎಂದು ಪೋಲಿಸರು ಬಂದೋಬಸ್ತ್ ಮಾಡಿದ್ದರು.

ತೊಗರಿ ಬೆಳೆದ ರೈತರಿಗೆ ಹೆಸರು ನೋಂದಾಯಿಸಲು ಸುಲಭವಾಗಲಿ ಎಂದು ಸಿಂದಗಿ ಪಟ್ಟಣ ಸೇರಿದಂತೆ 10 ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಕೇಂದ್ರದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿನ ಗ್ರಾಮಗಳನ್ನು ಆಯಾ ಕೇಂದ್ರಗಳಿಗೆ ಸೇರಿಸಲಾಗಿದೆ. ಇದರಿಂದ ರೈತರಿಗೆ ಹೆಸರು ನೋಂದಾಯಿಸಲು ಅನಕೂಲಕರವಾಗುತ್ತದೆ ಎಂದು ತಹಶೀಲ್ದಾರ್‌ ವೀರೇಶ ಬಿರಾದಾರ ಉದಯವಾಣಿಗೆ ತಿಳಿಸಿದ್ದಾರೆ.

ಸಿಂದಗಿ ಕೇಂದ್ರ: ಸೋಂಪುರ, ಬಂದಾಳ, ಚಿಕ್ಕಸಿಂದಗಿ, ಬ್ಯಾಕೋಡ, ಮಾಡಬಾಳ, ಅಂತರರಗಂಗಿ, ಮನ್ನಾಪುರ, ಬನ್ನಟ್ಟಿ ಪಿ.ಎ., ಯರಗಲ್‌ ಬಿ.ಕೆ., ಯರಗಲ್‌ ಕೆ.ಡಿ., ಬಂಕಲಗಿ, ಬೋರಗಿ, ಪುರದಾಳ, ಗುತ್ತರಗಿ, ಗುತ್ತರಗಿ ಎಲ್‌.ಟಿ., ಬ್ಯಾಲಿಹಾಳ ಗ್ರಾಮಗಳ ರೈತರು ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಬೇಕು.

ಆಲಮೇಲ ಕೇಂದ್ರ: ಆಲಮೇಲ, ಕಡಣಿ, ತಾರಾಪುರ, ತಾವರಖೇಡ, ಮಡ್ನಳ್ಳಿ, ದೇವಣಗಾಂವ, ಬ್ಯಾಡಗಿಹಾಳ, ಕುರಬತಹಳ್ಳಿ, ಕಡ್ಲೆವಾಡ ಪಿ.ಎ., ಶಂಬೇವಾಡ, ಬೊಮ್ಮನಳ್ಳಿ, ಗುಂದಗಿ, ದೇವರನಾವದಗಿ, ಕುಮಸಗಿ, ಅಲಹಳ್ಳಿ, ಕೋರಳ್ಳಿ, ಉಚಿತನಾವದಗಿ, ಹೂವಿನಳ್ಳಿ, ಮದರಿ, ತೊಂಟಾಪೂರ, ವಿಭೂತಿಹಳ್ಳಿ, ಗುಡ್ಡಳ್ಳಿ. ರಾಮನಳ್ಳಿ ಗ್ರಾಮದ ರೈತರು ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಬೇಕು.

Advertisement

ದೇವರಹಿಪ್ಪರಗಿ (ಹೊಸೂರ): ದೇವರಹಿಪ್ಪರಗಿ, ಬಮ್ಮನಜೋಗಿ, ಶಾಂತಿನಗರ, ಕನ್ನೊಳ್ಳಿ, ಕಡ್ಲೆವಾಡ ಪಿ.ಸಿ.ಎಚ್‌., ಮುಳಸಾವಳಗಿ, ನಿವಾಳಖೇಡ, ಹರನಾಳ, ಇಂಗಳಗಿ, ದೇವೂರ, ಪಡಗಾನೂರ ಗ್ರಾಮಗಳ ರೈತರು ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಬೇಕು.

ಹಿಕ್ಕಣಗುತ್ತಿ ಕೇಂದ್ರ: ಹಿಕ್ಕಣಗುತ್ತಿ, ರಾಂಪೂರ ಪಿ.ಎ., ಪಾಂಪೂರ ಎಲ್‌.ಟಿ., ಬೆನಕೊಟಗಿ, ಬೆನಕೊಟಗಿ ಎಲ್‌.ಟಿ., ಗಣಿಹಾರ, ಬಳಗಾನೂರ, ಬಬಲೇಶ್ವರ, ಕಲಹಳ್ಳಿ, ನಾಗರಹಳ್ಳಿ ಗ್ರಾಮಗಳ ರೈತರು ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಬೇಕು. ಚಾಂದಕವಠೆ ಕೇಂದ್ರ: ಚಾಂದಕವಠೆ, ಚಟ್ಟರಕಿ, ಹಚ್ಯಾಳ, ಹಿಟ್ನಳ್ಳಿ, ಗಂಗನಳ್ಳಿ, ಹಿಟ್ನಳ್ಳಿ ತಾಂಡಾ (ಚಂದಾನಗರ), ಚಿಕ್ಕರೂಗಿ, ಓತಿಹಾಳ, ಬೂದಿಹಾಳ ಪಿ.ಎಚ್‌., ಸುರಗಿಹಳ್ಳಿ ಗ್ರಾಮಗಳ ರೈತರು ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಬೇಕು. 

ಮೋರಟಗಿ ಕೇಂದ್ರ: ಮೋರಟಗಿ, ಬಗಲೂರ,ಸಿರಸಗಿ, ಕುಳೇಕುಮಟಗಿ, ಚಿಕ್ಕಹಾವಳಗಿ, ಹಂಚಿನಾಳ, ಮಲಘಾಣ, ಸೋಮಜಾಳ, ಆಸಂಗಿಹಾಳ, ಮಂಗರೂಳ, ಕೆರೂರ, ಆಹೇರಿ, ಬಿಸನಾಳ, ಗಬಸಾವಳಗಿ, ಜಟ್ನಾಳ, ಕಕ್ಕಳಮೇಲಿ, ಕಕ್ಕಳಮೇಲಿ ತಾಂಡಾ (ಬಸವನಗರ), ಬಂಟನೂರ, ನಾಗಾವಿ ಕೆ.ಡಿ., ಗೋರವಗುಂಡಗಿ ಗ್ರಾಮಗಳ ರೈತರು ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಬೇಕು.

ಗೋಲಗೇರಿ ಕೇಂದ್ರ: ಗೋಲಗೇರಿ, ಆನಿಮಡು,ಖಾನಾಪೂರ, ಯಂಕಂಚಿ, ಖೈನೂರ, ಸುಂಗಠಾಂಣ, ಮುರಡಿ, ನಂದಗೇರಿ,
ಗೋಲಗೇರಿ, ಸಾಸಾಬಾಳ, ಚಿಕ್ಕಅಲ್ಲಾಪುರ, ಡಂಬಳ, ಢವಳಾರ, ಗುಬ್ಬೇವಾಡ, ಹಡಗಿನಾಳ, ಕಣ್ಣಗುಡ್ಡಿಹಾಳ, ಬಸ್ತಿಹಾಳ, ಹೊನ್ನಳ್ಳಿ, ಬ್ರಹ್ಮದೇವನಮಡು, ಕರವಿನಾಳ, ಕರವಿನಾಳ ಎಲ್‌.ಟಿ., ವಂದಾಲ, ಕದರಾಪೂರ ಗ್ರಾಮಗಳ ರೈತರು ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಬೇಕು.

ಕಲಕೇರಿ ಕೇಂದ್ರ: ಕಲಕೇರಿ, ತಿಳಗೂಳ, ಕುದರಗೊಂಡ, ಚಟ್ನಳ್ಳಿ, ಅಸಂತಾಪೂರ, ಸಲಾದಳ್ಳಿ, ಯಲಗೋಡ, ರಾಂಪೂರ ಪಿ.ಟಿ., ಬಿಂಜಲಭಾವಿ, ಬೆಕಿನಾಳ, ವಣಕಿಹಾಳ, ಬೂದಿಹಾಳ ಪಿ.ಟಿ., ತುರಕನಗೇರಿ, ಹಾಳಗುಂಡಕನಾಳ, ಬನ್ನಹಟ್ಟಿ ಪಿ.ಟಿ., ಜಲಪೂರ, ಅಸ್ಕಿ, ನೀರಲಗಿ, ಹುಣಶ್ಯಾಳ, ಆಲಗೂರ ಗ್ರಾಮಗಳ ರೈತರು ಈ ಕೇಂದ್ರದಲ್ಲಿ ಹೆಸರು ನೋದಾಯಿಸಬೇಕು. 

ಕೊಂಡಗೂಳಿ ಕೇಂದ್ರ: ಕೊಂಡಗೂಳಿ, ಬೂದಿಹಾಳ ಡೋಣ, ಬಿ.ಬಿ.ಇಂಗಳಗಿ, ನಾಗರಾಳ ಡೋಣ, ಕೆಸರಟ್ಟಿ, ಅಂಬಳನೂರ, ಹಂಚಲಿ ಗ್ರಾಮಗಳ ರೈತರು ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಬೇಕು.

ಜಾಲವಾದ ಕೇಂದ್ರ: ಜಾಲವಾದ, ಕೋಕಟನೂರ, ಹಂದಿಗನೂರ (ಹಂದಿಗನೂರ ಎಲ್‌.ಟಿ.), ತಿರುಪತಿನಗರ ಕೆರೂಟಗಿ ಎಲ್‌.ಟಿ., ಕೋರವಾರ, ಇಂದಿರಾನಗರ ಕೋರವಾರ ಎಲ್‌ಟಿ., ವರಕನಹಳ್ಳಿ, ಜಾಲವಾದ, ಇಬ್ರಾಹಿಂಪೂರ, ಮಣ್ಣೂರ ಗ್ರಾಮಗಳ ರೈತರು ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಬೇಕು. 

ತೊಗರಿ ಕೇಂದ್ರಕ್ಕೆ ಹೆಸರು ನೋಂದಾಯಿಸಲು ಸರದಿ ಹಚ್ಚಿ ಸಾಕಾಗಿ ಅಡತಿಗೆ ಹಾಕಿದ್ದೇವೆ. ಈ ವರ್ಷನಾದರು ನಮಗೆ ಸರದಿ ಸಿಗುತ್ತದೆ ಎಂದರೇ ಈಗಲೂ ಹೆಸರು ನೋಂದಾಯಿಸಲು ಹರಸಾಹಸ ಮಾಡಬೇಕಾಗುತ್ತದೆ. ಹೆಸರು ನೋಂದಾಯಿಸಿಕೊಳ್ಳುವವರು ರಾತ್ರಿ ವೇಳೆ ಅಕ್ರಮವಾಗಿ ಹೆಸರು ನೋಂದಾಯಿಸಿಕೊಳ್ಳುತ್ತಾರೆ. 
 ಶೇಖರಗೌಡ ಪಾಟೀಲ, ತಿಪ್ಪಣ್ಣ ರಾಠೊಡ, ಸಿಂದಗಿ ರೈತರು

ಸಿಂದಗಿ ತೊಗರಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಣಿ ಕ್ರೀಯೆ ನಿಧಾನವಾಗಿ ಸಾಗುತ್ತಿದೆ. ಹೆಸರು ನೋಂದಣಿ ಮಾಡಿಕೊಳ್ಳುವ ಸಿಸ್ಟಮ್‌ ಹೆಚ್ಚಿಸಬೇಕು. ಇದರಿಂದ ರೈತರಿಗೆ ಅನಕೂಲಕರವಾಗುತ್ತದೆ.
ಆರ್‌.ಪಿ.ಬಿರಾದಾರ, ಸಿಂದಗಿ

ಹೆಸರ ಹಚ್ಚಲಾಕ ದಿನಾ ಬಂದ ಬಂದ ಸಾಕಾಗೈತೆ. ಮೊದಲ 5 ದಿವಸ ಬಂದೇವು ಹೆಸರು ಹಚ್ಚಿಕೊಳ್ಳಲಿಕ್ಕೆ ಯಾರು ಬರಲಿಲ್ಲ. ಎರಡ ದಿನಾ ಆಯ್ತು ಇನ್ನು ಪಾಳೆ ಸಿಕ್ಕಿಲ್ಲ. ಹಿಂಗಾದ್ರ ನಮ್ಮ ಗತಿಯೇನು.  
ಮಹೇಶ ಸಾವಳಸಂಗ, ಬೋರಗಿ ಗ್ರಾಮದ ರೈತ.

Advertisement

Udayavani is now on Telegram. Click here to join our channel and stay updated with the latest news.

Next