ವಿಟ್ಲ ಶ್ರೀ ಭಗವತಿ ದೇವಸ್ಥಾನದಲ್ಲಿ ಸ್ವರ ಸಿಂಚನ ಸಂಗೀತ ಶಾಲಾ ವಿಧ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತೋತ್ಸವ ಸವಿತಾ ಕೋಡಂದೂರು ನಿರ್ದೇಶನದಲ್ಲಿ ಅಮ್ಮ ಆನಂದ ದಾಯಿನಿ, ಪದವರ್ಣ , ಗಂಭೀರ ನಾಠ ರಾಗ, ಆದಿತಾಳ, ಡಾ| ಬಾಲಮುರಳಿ ಕೃಷ್ಣ ವಿರಚಿತ ಹಾಡಿನೊಂದಿಗೆ ಪ್ರಾರಂಭಗೊಂಡು ದೇವಿ ಸ್ತುತಿ, ಭಗವತಿ ದೇವಿ ಸ್ತುತಿ, ಸುಮಧುರ ಹಾಡುಗಳ ಸುರಿಮಳೆ ಒಂದಕ್ಕಿಂತ ಒಂದು ಚೆನ್ನ. ಇವರು ಹಾಡೋ ಭಕ್ತಿ ಗೀತೆಗಳನ್ನು ಕೇಳುವುದೆ ಚಂದ ವಾತಾಪಿ ಗಣಪತಿಂ, ಗಣೇಶ ಸ್ತುತಿ, ಶ್ರೀ ಗುರುಂ, ನಾದ ನಿನಾದದ ಕನಸು ಕಂಗಳ ಅಪೂರ್ವ ರಾಗದಲ್ಲಿ ರಂಜಿಸಿದರು.
ವಿದ್ಯಾರ್ಥಿಗಳು ನಿನ್ನ ಕೋರಿ, ಶ್ರೀ ಗುರುಗುಹ, ಕಾಗದ ಬಂದಿದೆ, ಪಾಹಿಶಿವೆ, ನಾರಸಿಂಹನೆಂಬೋ, ಗೋವರ್ಧನ, ಮಾಯಾತೀತ, ಹಾಡುಗಳನ್ನು ಹಾಡಿ ಪ್ರೇಕ್ಷಕರ ಗಮನ ಸೆಳೆದರು. ಶ್ಯಾಮಲೆ ಮೀನಾಕ್ಷಿ, ಕುಂದ ಗೌರ, ರಾರ ವೇಣು, ವರಲೀಲ ಗಾನಲೋಲ, ಉತ್ತಮ ಕಂಠ ಸಿರಿಯಲ್ಲಿ ಸುಮಧುರ ಗಾಯನ ನೀಡಿದರು.
ಶ್ರೀ ಗಣನಾತ, ಗರುಡಗಮನ ತವ, ಕಮಲಸುಲೋಚನ, ಶಕ್ತಿ ಸಹಿತ, ಪಾಹಿ ಪರ್ವತ, ನಾದು ಪೈ ಮುಂತಾದ ಸುಮಧುರ ಹಾಡುಗಳಿಗೆ ಧ್ವನಿಯಾಗಿ ಹಾಡುಗಳ ರಸದೌತಣ ಉಣಿಸಿದರು. ಕಲ್ಯಾಣ ರಾಮ ಹಾಗೂ ತಿಲ್ಲಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಪಕ್ಕವಾದ್ಯದಲ್ಲಿ ಡಾ| ಎ.ವಿ. ನಾರಾಯಣ್, ಪ್ರಕಾಶ್ ಕ್ಯಾಲಿಕಟ್ ಮೃದಂಗ ವಾದಕರಾಗಿ,ವಯಲಿನ್‌ನಲ್ಲಿ ಶ್ರೀಪ್ರಿಯ ಪರಕ್ಕಜೆ ಸಾಥ್‌ನೀಡಿದರು.
ಸೌಮ್ಯಾ ಪೆರ್ನಾಜೆ