ಬೇಕೋ ಎಂಬ ಕುರಿತೇ ದೊಡ್ಡ ಚರ್ಚೆ ನಡೆಯಿತು. ಬಂದ 2 ಕೋ. ರೂ. ಅನುದಾನ ಬಳೆಕೆಯಾಗದೆ ವಾಪಸು ಹೋಗಿದೆ. ಪ್ರಾಚೀನ ಹಸ್ತಪ್ರತಿಗಳನ್ನು ಸಂರಕ್ಷಿಸಬೇಕು ಎಂದು ಸ್ಕ್ಯಾನಿಂಗ್ ಯಂತ್ರವನ್ನು 70 ಲ.ರೂ. ವೆಚ್ಚದಲ್ಲಿ ತಂದರು. ಯಾವ ಸ್ಕ್ಯಾನಿಂಗ್ ಕೂಡ ನಡೆಯಲಿಲ್ಲ. ಕನ್ನಡ ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿ ರಾಮಕೃಷ್ಣ ಮತ್ತು ಹಿರಿಯ ಭಾಷಾ ತಜ್ಞ, ಭಾಷಾಂತರ ತಜ್ಞ ಡಾ|ಪ್ರಧಾನ ಗುರುದತ್ ಅವರು ಜತೆಯಾಗಿ ಹೋಗಿ ಯಾವ ಯಾವ ಹಂತಗಳಲ್ಲಿ ಏನೇನು ಕೆಲಸ ಮಾಡಬೇಕು? ಅನುದಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಅಧ್ಯಯನ ನಡೆಸಿದ್ದರು. ಈಗ ಹಣವನ್ನು ಮೈಸೂರು ವಿ.ವಿ.ಗೆ ಕೊಡಬೇಕೋ? ಬೆಂಗಳೂರು ವಿ.ವಿ.ಗೆ ಕೊಡಬೇಕೋ ಎಂಬಿತ್ಯಾದಿ ರಾಜಕೀಯ ಜಿಜ್ಞಾಸೆ ನಡೆಯುತ್ತಿದೆ.
Advertisement
– ಮಟಪಾಡಿ ಕುಮಾರಸ್ವಾಮಿ
ಪ್ರಪಂಚದ ಇತರ ಪ್ರಧಾನ ಭಾಷಿಕರಾದ ಚೀನಿಯರು ಅಮೆರಿಕದಲ್ಲಿ ನೆಲೆಸಿದರೂ ಇಂಗ್ಲಿಷ್ ಮೂಲಕವೇ ಕಾರ್ಯವಿಸ್ತಾರ ಮಾಡುತ್ತಿರುವ ಕಾರಣ ಸದ್ಯದಲ್ಲಿ ಇಂಗ್ಲಿಷ್ ಪ್ರಾಬಲ್ಯ ಅಬಾಧಿತವಾಗಿ ಮುಂದು ವರಿಯುತ್ತದೆ. ಫ್ರಾನ್ಸ್‌ನಲ್ಲಿ ಇಂಗ್ಲಿಷ್‌ಗೆ ಸ್ಥಾನ ಅಷ್ಟಕ್ಕಷ್ಟೆ ಇತ್ತು. ಈಗ ಬದಲಾಗಿದೆ. ಇಂಗ್ಲಿಷ್ ಈ ಮಟ್ಟದಲ್ಲಿ ಬೆಳೆಯಲು ಕಾರಣವೆಂದರೆ ಇಂಗ್ಲಿಷ್‌ನ ಈಗಿರುವ ಶೇ. 83 ಶಬ್ದಗಳು ಬೇರೆ ಭಾಷೆಗಳವು, ಶೇ. 17 ಮಾತ್ರ ಮೂಲದವು. ಕನ್ನಡದಿಂದಲೂ ಸುಮಾರು 2,000 ಶಬ್ದಗಳು ಇಂಗ್ಲಿಷ್‌ನಲ್ಲಿ ಸೇರಿಕೊಂಡಿವೆ. ಇಡ್ಲಿ, ದೋಸೆ, ಚಟ್ನಿಗಳೂ ಸೇರಿಕೊಂಡಿವೆ. ಸುಮಾರು 80 ವರ್ಷಗಳ ಹಿಂದೆ ದಿ ರಾಯಲ್ ಸೊಸೈಟಿ ಆಫ್ ಗ್ರೇಟ್ ಬ್ರಿಟನ್ ಈ ಕುರಿತು ನಿಯಮಾವಳಿಗಳನ್ನು ಹಾಕಿಕೊಟ್ಟಿತು. ಆದರೆ ಜಗತ್ತಿನ ಇತರ ಯಾವುದೇ ದೇಶಗಳೂ ತಮ್ಮ ಭಾಷಾ ಉನ್ನತಿಗೆ ಈ ತೆರನಾಗಿ ಪ್ರಯತ್ನಿಸಲಿಲ್ಲ.
Related Articles
1970ರ ದಶಕದಲ್ಲಿ “ದಿ ಪ್ರೊಡಕ್ಷನ್ ಆಫ್ ಟೆಕ್ಸ್ಟ್ ಬುಕ್ಸ್ ಇನ್ ರೀಜನಲ್ ಲ್ಯಾಂಗ್ವೇಜಸ್’ ಯೋಜನೆಯನ್ನು ಕೇಂದ್ರ ಸರಕಾರ ಹಾಕಿಕೊಂಡಿತು. ಸುಮಾರು 10 ವರ್ಷ ಪ್ರತಿ ಭಾಷೆಗೆ 2 ಕೋ.ರೂ. ಅನುದಾನ ದೊರಕಿತ್ತು. ಅನಂತರ ಯೋಜನೆಯೇ ನಿಂತು ಹೋಯಿತು.
Advertisement
ಭಾಷಾಂತರ: ನಿರೀಕ್ಷಿತವಾಗಿಲ್ಲಭಾಷಾಂತರ ಅಕಾಡೆಮಿ, ಬಳಿಕ ವಿಕಾಸಗೊಂಡ ಕುವೆಂಪು ಭಾಷಾ ಭಾರತೀ ಪ್ರಾಧಿಕಾರದಿಂದ ಬಹಳಷ್ಟು ಕೆಲಸಗಳು ನಡೆಯಬೇಕಿತ್ತಾದರೂ ಅದೂ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಕನ್ನಡದಿಂದ ಇಂಗ್ಲಿಷ್ ಅಥವ ಇನ್ನಿತರ ಭಾಷೆಗಳಿಗೆ, ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದವಾಗಬೇಕು. ಇಂಗ್ಲಿಷ್‌ನಲ್ಲಿ ಸ್ವತಂತ್ರ ಕೃತಿಗಳು ಹೇಳಿ ಕೊಳ್ಳುವಂಥದ್ದಿಲ್ಲವಾದರೂ ಇಂಗ್ಲಿಷ್ ಈ ಮಟ್ಟದಲ್ಲಿ ಬೆಳೆಯಲು ಇದುವೇ ಕಾರಣ. ಕನ್ನಡದ ಸಾಹಿತಿಗಳ ಕೃತಿಗಳು ನಿರೀಕ್ಷಿತ ಮಟ್ಟದಲ್ಲಿ ಭಾಷಾಂತರಗೊಂಡಿಲ್ಲ. ರಾಜಕೀಯಪ್ರೇರಿತವಾಗಿ, ಅವರವರಿಗೆ ಬೇಕಾದಂತಹವರ ಕೃತಿಗಳು ಮಾತ್ರ ಭಾಷಾಂತರಗೊಂಡಿವೆ. ನಮ್ಮ ಎಷ್ಟೋ ಗ್ರಂಥಗಳು ಕೆಟ್ಟ ಭಾಷಾಂತರದಿಂದ ತಿರಸ್ಕೃತ ಗೊಂಡಿವೆ. ಅಮೆರಿಕದ ಸ್ಟಾನ್‌ಫರ್ಡ್ ವಿ.ವಿ. ಕುಮಾರವ್ಯಾಸನ ಭಾರತವನ್ನು ಭಾಷಾಂತರಿಸುತ್ತಿದೆ. ವೀರಪ್ಪ ಮೊಲಿಯವರ ರಾಮಾಯಣ ಮಹಾನ್ವೇಷಣಂ, ಎಸ್.ಎಲ್. ಭೈರಪ್ಪನವರ ಕೃತಿಗಳು ಹಿಂದಿ, ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ. ಕ್ರೈಸ್ತರ ಉದ್ದೇಶವೇ ಧರ್ಮಪ್ರಸಾರವಾದ ಕಾರಣ ಬೈಬಲ್‌ನಷ್ಟು ಭಾಷಾಂತರ ಇತರ ಧರ್ಮಗ್ರಂಥಗಳು ಆಗಲಿಲ್ಲ. ವೇದ: ಶ್ಲಾಘನೆ
ವೇದದ ದೊಡ್ಡತನವನ್ನು ವೇದವನ್ನು ಭಾಷಾಂತರಿಸಿದ ಮ್ಯಾಕ್ಸ್ ಮುಲ್ಲರ್ ಶ್ಲಾ ಸಿದ್ದಾದರೂ “ಭಾರತೀಯ ಸಂಸ್ಕೃತಿ, ಸಾಹಿತ್ಯದ ಪ್ರಾಚೀನತೆಯನ್ನು ಉಲ್ಲೇಖೀ ಸಬಾರದು, ಉಲ್ಲೇಖೀಸಿದರೆ ಅದು ಬೈಬಲ್‌ಗಿಂತ ಮೊದಲಿನದ್ದು ಎಂದು ಗೊತ್ತಾಗುತ್ತದೆ’ ಎಂದು ಬಂಧುವೊಬ್ಬರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದನ್ನು ತೆಲುಗಿನ ಪತ್ರಕರ್ತರೊಬ್ಬರು ಪುಸ್ತಕದಲ್ಲಿ ಉಲ್ಲೇ ಖೀಸಿದ್ದಾರೆ.