ಮುಂಡಗೋಡ: ತಾಲೂಕಿನಾದ್ಯಂತ ವಿದ್ಯಾಗಮ ನಿರಂತರ ಕಲಿಕಾ ಯೋಜನೆ ಅನುಷ್ಠಾನಗೊಂಡಿದ್ದು, ಶಿಕ್ಷಕರು ವಾರ್ಡ್ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಆರಂಭಿಸಿದ್ದಾರೆ. ಕೋವಿಡ್ ವೈರಸ್‌ನ ಮುಂಜಾಗೃತ ಕ್ರಮವಾಗಿ ಶಾಲೆಗಳು ಆರಂಭವಾಗದ ಹಿನ್ನೆಲೆಯಲ್ಲಿ ಮಕ್ಕಳು ಶಿಕ್ಷಣದಿಂದ ದೂರ ಉಳಿಯಬಾರದು ಎಂಬ ಉದ್ದೇಶದಿಂದ ಪ್ರತಿ ವಾರ್ಡ್ ಮಟ್ಟದಲ್ಲಿ ಒಬ್ಬ ಶಿಕ್ಷಕರಿಗೆ ನೇಮಿಸಿ ಆ ಭಾಗದ ವಿದ್ಯಾರ್ಥಿಗಳಿಗೆ ದೇವಸ್ಥಾನ ಅಥವಾ ಸಮುದಾಯ ಭವನಗಳಲ್ಲಿ ವಾರಕ್ಕೆ ಒಂದು ಅಥವಾ ಎರಡು ದಿನ ಪಾಠ ಮಾಡಿ ಹೋಂ ವರ್ಕ್ ನೀಡಲಾಗುತ್ತಿದೆ. ಒಂದು ವಾರದ ನಂತರ ವಿದ್ಯಾರ್ಥಿಗಳು ಮಾಡಿದ ಹೋಂ ವರ್ಕ್‌ಗಳನ್ನು ಶಿಕ್ಷಕರು ತಪಾಸಣೆ ನಡೆಸುತ್ತಾರೆ. ಮುಂದಿನ ಹೋಂ ವರ್ಕ್ ನ್ನು ವಿದ್ಯಾರ್ಥಿಗಳಿಗೆ ನೀಡುತ್ತಾರೆ. ಒಂದು ವೇಳೆ
ವಿದ್ಯಾರ್ಥಿಗಳು ಹೋಂ ವರ್ಕ್ ಮಾಡದಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಮತ್ತೂಮ್ಮೆ ಅವಕಾಶ ನೀಡಲಾಗುತ್ತಿದೆ.
ಆನ್‌ಲೈನ್‌ನಲ್ಲಿ ಶಿಕ್ಷಣ: ಕೆಲ ಶಾಲೆಯವರು ವಾಟ್ಸ್ ಆ್ಯಪ್ ಗ್ರೂಪ್ ಗಳನ್ನು ಮಾಡಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡುತ್ತಿದ್ದಾರೆ. ಹೋಂ ವರ್ಕ್ ಮಾಡಿದ ವಿದ್ಯಾರ್ಥಿಗಳು ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ತಾವೂ ಮಾಡಿದ ಹೋಂ ವರ್ಕ್ ಹಾಕಬೇಕು. ಮೊಬೈಲ್ ಇಲ್ಲದ ವಿದ್ಯಾರ್ಥಿಗಳು ತಮ್ಮ ಸನಿಹದಲ್ಲಿನ ವಿದ್ಯಾರ್ಥಿಯೊಂದಿಗೆ ಸೇರಿ ಆನ್‌ಲೈನ್ ಶಿಕ್ಷಣ
ಪಡೆಯುವಂತೆ ಸೂಚಿಸಲಾಗುತ್ತಿದೆ.
ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮ ನಮ್ಮ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಈ ಅವಧಿಯಲ್ಲಿ ಕಾರ್ಯಕ್ರಮದಿಂದ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ.
– ವಿ.ಎಸ್. ಪಟಗಾರ, ಬಿಇಒ