ಸೋನಾರ್ಪುರ್ : ಬರ್ತ್ ಡೇ ಪಾರ್ಟಿಗೆ ತೆರಳಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಮೇಲೆ ಆಕೆಯ ನಾಲ್ವರು ಸ್ನೇಹಿತರು ಬರ್ಬರವಾಗಿ ಗ್ಯಾಂಗ್ ರೇಪ್ ಎಸಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಹೇಯ ಘಟನೆ ಪಶ್ಚಿಮಬಗಾಲದ 24 ಪರಗಣ ಜಿಲ್ಲೆಯ ರಥ್ನಾಳಾದಲ್ಲಿ ಬುಧವಾರ ನಡೆದಿದೆ.
ಕೃತ್ಯ ಎಸಗಿದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನೋರ್ವನಿಗಾಗಿ ಶೋಧ ನಡೆಸುತ್ತಿದ್ದಾರೆ.
ತರುಣಿಯನ್ನು ಪ್ರಿಯಕರ ಆಕೆಯ ಮಾವನ ಮನೆಗೆ ಬರ್ತ್ ಡೇ ಪಾರ್ಟಿಗೆ ಕರೆದಿದ್ದು, ಅಲ್ಲಿ ಪಾನಗೋಷ್ಠಿ ನಿರತ ಇತರ ಸ್ನೇಹಿತರೊಂದಿಗೆ ಸೇರಿ ಹೇಯ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಈ ವೇಳೆ ಮನೆಯ ಸದಸ್ಯರ್ಯಾರು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದರು.
ಆರೋಪಿಗಳು ಕೃತ್ಯ ಎಸಗಿದ ಬಳಿಕ ಆಕೆಯನ್ನು ಹತ್ಯೆಗೈಯಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಸಂತ್ರಸ್ತ ತರುಣಿಯನ್ನು ಸಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.