ಚಿತ್ರದುರ್ಗ: ದೇವಸ್ಥಾನದ ಬಳಿ ಪ್ರಸಾದ ಮತ್ತು ದಕ್ಷಿಣೆ ಸ್ವೀಕಾರ ವಿಚಾರದಲ್ಲಿ ಗಲಾಟೆ ನಡೆದು ದೇವಸ್ಥಾನದ ದಾಸಯ್ಯನ ಮೇಲೆ ಪೂಜಾರಿಯೊಬ್ಬರು ಮಚ್ಚಿನಿಂದ ಹೊಡೆದು ಹಲ್ಲೆ ಮಾಡಿದ ಘಟನೆ ತೋಪಿನ ಗೊಲ್ಲಹಳ್ಳಿಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ತೋಪಿನ ಗೊಲ್ಲಹಳ್ಳಿ ಗ್ರಾಮದ ಗೊಲ್ಲಾಳಮ್ಮ ದೇಗುಲ ಬಳಿ ಈ ಘಟನೆ ನಡೆದಿದೆ.
ಪೂಜಾರಿಗಳು ಮತ್ತು ದಾಸಯ್ಯಗಳ ನಡುವೆ ಪ್ರಸಾದ ಮತ್ತು ದಕ್ಷಿಣೆ ಸ್ವೀಕಾರ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ಕಲಹದಲ್ಲಿ ದಾಸಯ್ಯಗಳ ವಿರುದ್ಧ ಪೂಜಾರಿ ಕಾಯಿ ಕೊಚ್ಚುವ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಮತ ನೀಡದಿದ್ದರೆ ನೀರು, ವಿದ್ಯುತ್ ಏನೂ ಕೊಡಲ್ಲ.. ಮತದಾರರಿಗೆ ಸಚಿವರ ಬೆದರಿಕೆ
ಗಾಯಗೊಂಡಿರುವ ದಾಸಯ್ಯ ಶೇಖರ್ (34) ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪೂಜಾರಿ ಭರತ್, ಪುಂಡಲೀಕ ಮತ್ತಿತರರ ವಿರುದ್ಧ ಹಲ್ಲೆ ಆರೋಪ ಮಾಡಲಾಗಿದೆ.
ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದ ಒಳಗೆ ನೇಣು ಬಿಗಿದು ಯುವಕ ಆತ್ಮಹತ್ಯೆ!