Advertisement

ವಿದ್ಯಾರ್ಥಿಗಳ ಕಿತ್ತಾಟ: ಪೋಷಕರ ಹೊಡೆದಾಟ

11:57 PM Feb 22, 2019 | |

ಬೆಂಗಳೂರು: ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ಹೆಣ್ಣು- ಗಂಡು ಜತೆಗಿರುವ ಕುರಿತ ಚಿತ್ರ ಬಿಡಿಸಿ ತೋರಿಸುವಂತೆ ಸಹಪಾಠಿ ವಿದ್ಯಾರ್ಥಿನಿಗೆ ಹೇಳಿರುವ ವಿಚಾರ ಪೋಷಕರ ಹೊಡೆದಾಟಕ್ಕೆ ಕಾರಣವಾಗಿರುವ ಘಟನೆ ನಗರದಲ್ಲಿ ನಡೆದಿದೆ.

Advertisement

 ಈ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪೋಷಕರು ಪರಸ್ಪರ ಹೊಡೆದಾಡಿಕೊಂಡಿದ್ದು,
ಆರೋಪ ಪ್ರತ್ಯಾರೋಪಗಳ ಅನ್ವಯ ಪೂರ್ವವಿಭಾಗದ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಫೆ.19ರಂದು ಸಹಪಾಠಿ ವಿದ್ಯಾರ್ಥಿ, ಲೈಂಗಿಕ ಕ್ರಿಯೆ ನಡೆಸುವ ಚಿತ್ರವನ್ನು ಬರೆದು ತೋರಿಸುವಂತೆ ತರಗತಿಯಲ್ಲಿ ಕಿರುಕುಳ ನೀಡಿದ್ದಾನೆ ಎಂದು ಮಗಳು ಶಾಲೆ ಮುಗಿಸಿಕೊಂಡು ಬಂದಾಗ ತಿಳಿಸಿ ಅಳುತ್ತಿದ್ದಳು. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯ ಮನೆಗೆ ತೆರಳಿದ ವಿದ್ಯಾರ್ಥಿನಿ ತಾಯಿ, ಅವರ ಪೋಷಕರಿಗೆ ಮಾಹಿತಿ ನೀಡಿ ಮಗನಿಗೆ ಬುದ್ಧಿವಾದ ಹೇಳುವಂತೆ ಸೂಚಿಸಿದರು.

ಆ ವೇಳೆ ವಿದ್ಯಾರ್ಥಿನಿ ತಾಯಿ ಹಾಗೂ ವಿದ್ಯಾರ್ಥಿಯ ಪೋಷಕರ ನಡುವೆ ಮಾತಿನ ಚಕಮಕಿ
ನಡೆಯಿತು. ಬಳಿಕ, ಕೆಟ್ಟ ಪದಗಳಲ್ಲಿ ನಿಂದಿಸಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿನಿ
ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ. ವಿದ್ಯಾರ್ಥಿಯ ಪೋಷಕರು ನೀಡಿರುವ ದೂರಿನಲ್ಲಿ “”ವಿದ್ಯಾರ್ಥಿನಿ
ತಾಯಿ ಏಕಾಏಕಿ ಮನೆಗೆ ನುಗ್ಗಿ ಹಲ್ಲೆ ನಡೆಸಿ ಚಪ್ಪಲಿಯಿಂದ ಹೊಡೆದು ಪ್ರಾಣಬೆದರಿಕೆ ಹಾಕಿದ್ದಾರೆ”
ಎಂದು ಆರೋಪಿಸಿದ್ದಾರೆ. ಎರಡೂ ದೂರುಗಳನ್ನು ಪರಿಶೀಲಿಸಿದ್ದು ತನಿಖೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next