ಬೆಂಗಳೂರು: ವಿಧಾನಸಭೆ ಅಧಿವೇಶನವು ಫೆ. 12ರಿಂದ ಆರಂಭ ವಾಗಲಿದ್ದು, ಅಧಿವೇಶನದಲ್ಲೇ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ ಯನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ ದ್ದಾರೆ. ಕನ್ನಡ ಬಳಕೆ ಕಡ್ಡಾಯದ ಬಗ್ಗೆ ಅಧ್ಯಾದೇಶಕ್ಕೆ ಅಂಕಿತ ಹಾಕಲು ಮಾನ್ಯ ರಾಜ್ಯಪಾಲರಿಗೆ ಕಳಿಸಲಾಗಿತ್ತು. ಅದಕ್ಕೆ ರಾಜ್ಯಪಾಲರು ಅಂಕಿತ ಹಾಕುವ ಮುನ್ನವೇ ಅಧಿವೇಶನ ಕರೆದ ಕಾರಣ ರಾಜ್ಯಪಾಲರು ಸಹಿ ಮಾಡದೆ ವಾಪಸ್ ಕಳಿಸಿದ್ದಾರೆ ಮುಖ್ಯಮಂತ್ರಿ ಹೇಳಿದರು.
ಈ ವಿಚಾರ ಸಂಬಂಧ ರಾಜಭವನ ಹಾಗೂ ಮುಖ್ಯಮಂತ್ರಿ ಕಚೇರಿ ಯಿಂದಲೇ ಸ್ಪಷ್ಟನೆ ನೀಡಲಾಗಿದೆ. ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎನ್ನುವುದು ಸ್ಪಷ್ಟನೆಯ ಮುಖ್ಯ ಅಂಶ.
ಕೆಲವು ಪತ್ರಿಕಾ ವರದಿಗಳಲ್ಲಿ ರಾಜ್ಯ ಪಾಲರು ಅಧ್ಯಾದೇಶ ತಿರಸ್ಕರಿಸಿ ದ್ದಾರೆಂದು ಪ್ರಕಟವಾದ ಹಿನ್ನೆಲೆಯಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದಾರೆ. “ರಾಜ್ಯಪಾಲರು ಅಧ್ಯಾದೇಶ ತಿರಸ್ಕರಿಸಿಲ್ಲ.
ಈ ಅಧ್ಯಾದೇಶವನ್ನು ರಾಜ್ಯಪಾಲರು ರಾಜಕೀಯ ಕಾರಣಕ್ಕಾಗಿ ವಾಪಸ್ ಕಳುಹಿಸಿಲ್ಲ. ಮಸೂದೆಗೆ ಯಾರಿಂದಲೂ ವಿರೋಧವಿಲ್ಲ. ನಾವು ಜ. 5ರಂದೇ ಅಧ್ಯಾದೇಶವನ್ನು ರಾಜಭವನಕ್ಕೆ ಕಳುಹಿಸಿದ್ದೆವು. ಆದರೆ ಅನಾರೋಗ್ಯ ಹಾಗೂ ಪ್ರವಾಸ ಹಿನ್ನೆಲೆಯಲ್ಲಿ ಸಹಿ ಹಾಕಲು ಸಾಧ್ಯವಾಗಿರಲಿಲ್ಲ. ಈಗ ಅಧಿವೇಶನ ಕರೆದಿರುವುದರಿಂದ ಉಭಯ ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಿರಿ ಎಂದು ವಾಪಸ್ ಕಳಿಸಿದ್ದಾರೆ.
- ಶಿವರಾಜ್ ತಂಗಡಗಿ, ಕನ್ನಡ -ಸಂಸ್ಕೃತಿ ಸಚಿವರು