Advertisement

ಒಗ್ಗಟ್ಟಿನಿಂದ ಹಕ್ಕು ಪಡೆಯಲು ಸಾಧ್ಯ; ಜೆ. ಭಾರದ್ವಾಜ್‌

05:47 PM Nov 02, 2022 | Team Udayavani |

ಗಂಗಾವತಿ: ಕಾರ್ಮಿಕರ ಒಗ್ಗಟ್ಟಿನಿಂದ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಹಿರಿಯ ಕಾರ್ಮಿಕ ಮುಖಂಡ ಜೆ. ಭಾರದ್ವಾಜ್‌ ಹೇಳಿದರು. ಅವರು ನಗರದ ಜಗಜೀವನರಾಂ ವೃತ್ತದಲ್ಲಿ ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಪಂಗಳಲ್ಲಿ ಹಲವಾರು ವರ್ಷಗಳಿಂದ ಕನಿಷ್ಟ 53 ಸಾವಿರ ಜನ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುತ್ತಾರೆ.

Advertisement

ಇದರಲ್ಲಿ ಬಹುಪಾಲು ಕಾರ್ಮಿಕರು ದಲಿತ, ಶೋಷಿತ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಅದರಲ್ಲಿ ಶೇ. 90ರಷ್ಟು ಮಹಿಳಾ ಕಾರ್ಮಿಕರಿದ್ದಾರೆ. ಸರ್ಕಾರ 2-3 ಸುತ್ತಿನ ಮಾತುಕತೆ ಮಾಡುವುದರ ಮೂಲಕ ಕೆಲ ತೀರ್ಮಾನ ತೆಗೆದುಕೊಂಡಿದೆ. ಸರ್ಕಾರ 11 ಸಾವಿರ ಕಾರ್ಮಿಕರನ್ನು ಕಾಯಂ ಮಾಡಲು ಮುಂದಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಎಲ್ಲರನ್ನು ಕಾಯಂ ಮಾಡಬೇಕು. ತ್ಯಾಜ್ಯ ಸಾಗಿಸುವ ವಾಹನ ಚಾಲಕರನ್ನು, ಒಂದಿಷ್ಟು ಕಾರ್ಮಿಕರನ್ನು ಒಳಗೊಂಡಂತೆ ತಾರತಮ್ಯ ಮಾಡುತ್ತಿರುವ ಬಗ್ಗೆ ವಾಗ್ಧಾಳಿ ನಡೆಸಿದರು.

ಸಿಪಿಐಎಂಎಲ್‌ ಲಿಬರೇಷನ್‌ ರಾಜ್ಯ ಸಮಿತಿ ಸದಸ್ಯ ಪಿ.ಆರ್‌.ಎಫ್‌ ಮಣಿ ಅವರು ಮಾತನಾಡಿ, ಮಕ್ಕಳಿಗೆ ಶಿಕ್ಷಣ, ಉತ್ತಮ ಆರೋಗ್ಯ, ಕಾರ್ಮಿಕರಿಗೆ ಮನೆ ಸೌಲಭ್ಯ ಒದಗಿಸಲು ಸರ್ಕಾರ ವಿಫಲವಾಗಿದೆ. ನಮ್ಮ ಹೋರಾಟ ಘನತೆಯುತ ಜೀವನ ಉತ್ತಮ ಜೀವನದೆಡೆಗೆ ಇರಬೇಕು. ಜಾತಿಯಾಧಾರಿತ ಕೆಲಸ ತೊಲಗಿಸಿ, ಜಾತಿ ಕೊನೆಗಾಣಿಸಲು ನಾವು ಹೋರಾಡಬೇಕೆಂದರು.

ಪತ್ರಕರ್ತ ಕೆ. ನಿಂಗಜ್ಜ, ಆನಂದ ಭಂಡಾರಿ, ವಿಜಯ್‌, ನಾಗರಾಜ ಪೂಜಾರ್‌, ಬಾಲರಾಜ್‌, ಶಿವಯ್ಯ, ಚಂದ್ರು, ರಂಗಪ್ಪ ಅಗಡೆ, ಕೇಶವ ನಾಯಕ್‌, ಪರಶುರಾಮ, ಗಿಡ್ಡಪ್ಪ, ಬಾಬರ್‌, ಆಲಂಸಾಬ್‌, ಮರಿಯಮ್ಮ, ಮಂಜು, ರತ್ನಮ್ಮ, ನಾಗಲಕ್ಷ್ಮೀ, ಮಂಜುಳಾ, ಇಂದ್ರಮ್ಮ, ಪಾರ್ವತಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next