Advertisement

‘ದುಃಸ್ವಪ್ನ’ ಬಿದ್ದ ಮೇಲೆ ಕದ್ದ ದೇವಸ್ಥಾನದ 14 ವಿಗ್ರಹಗಳನ್ನು ಹಿಂದಿರುಗಿಸಿದ ಕಳ್ಳರು

02:44 PM May 16, 2022 | Team Udayavani |

ಚಿತ್ರಕೂಟ: ಮಧ್ಯಪ್ರದೇಶದ ಪುರಾತನ ಬಾಲಾಜಿ ದೇವಸ್ಥಾನವೊಂದರಲ್ಲಿ ಕದ್ದಿದ್ದ 14 ‘ಅಷ್ಟಧಾತು’ ವಿಗ್ರಹಗಳನ್ನು ಕಳ್ಳರು ರಹಸ್ಯವಾಗಿ ಹಿಂದೆ ತಂದಿಟ್ಟಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

Advertisement

“ಮೇ 9 ರಂದು ರಾತ್ರಿ ತರೌನ್ಹಾದಲ್ಲಿರುವ ಪುರಾತನ ಬಾಲಾಜಿ ದೇವಸ್ಥಾನದಿಂದ ಹಲವಾರು ಕೋಟಿ ಮೌಲ್ಯದ 16 ಅಷ್ಟಧಾತು ವಿಗ್ರಹಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ, ಮಹಂತ್ ರಾಮಬಾಲಕ್ ಅಪರಿಚಿತ ಕಳ್ಳರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು ಎಂದು ,ಸದರ್ ಕೊತ್ವಾಲಿ ಕಾರ್ವಿಯ ಸ್ಟೇಷನ್ ಹೌಸ್ ಆಫೀಸರ್ ರಾಜೀವ್ ಕುಮಾರ್ ಸಿಂಗ್ ಹೇಳಿದ್ದಾರೆ.

ಕದ್ದ 16 ವಿಗ್ರಹಗಳ ಪೈಕಿ 14 ವಿಗ್ರಹಗಳು ಭಾನುವಾರ ಮಹಂತ್ ರಾಂಬಾಲಕ್ ಅವರ ನಿವಾಸದ ಬಳಿ ಗೋಣಿಚೀಲದಲ್ಲಿ ನಿಗೂಢವಾಗಿ ಪತ್ತೆಯಾಗಿವೆ ಎಂದು ಅವರು ಹೇಳಿದ್ದು, ರಾತ್ರಿ ವೇಳೆ ಭಯಾನಕ ಕನಸುಗಳನ್ನು ಕಾಣುತ್ತಿದ್ದೇವೆ ಎಂದು ಕಳ್ಳರು ಬರೆದಿರುವ ಪತ್ರದ ಬಗ್ಗೆ ಹೇಳಿ ಭಯದ ಕಾರಣದಿಂದ ಅವರು ವಿಗ್ರಹಗಳನ್ನು ಹಿಂತಿರುಗಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಸ್ತುತ ಎಲ್ಲಾ 14 ‘ಅಷ್ಟಧಾತು’ (ಎಂಟು ಲೋಹಗಳಿಂದ ಮಾಡಲ್ಪಟ್ಟಿದೆ) ವಿಗ್ರಹಗಳನ್ನು ಕೊತ್ವಾಲಿಯಲ್ಲಿ ಇಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next