Advertisement

ಸಿಬಿಐ ನಿರ್ದೇಶಕ ವರ್ಮಾ ಭವಿಷ್ಯ ತೀರ್ಮಾನಿಸುವ ಮಂಡಳಿಗೆ ಜ. ಸಿಕ್ರಿ

10:24 AM Jan 09, 2019 | Team Udayavani |

ಹೊಸದಿಲ್ಲಿ : ಸಿಬಿಐ ನಿರ್ದೇಶಕ ಆಲೋಕ್‌ ಕುಮಾರ್‌ ವರ್ಮಾ ಅವರ ಭವಿಷ್ಯವನ್ನು ತೀರ್ಮಾನಿಸುವ ಉನ್ನತಾಧಿಕಾರದ ಆಯ್ಕೆ ಸಮಿತಿಯ ಭಾಗವಾಗಿ ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರು ತಮ್ಮ ಅನಂತರದ ಅತ್ಯಂತ ಸೇವಾ ಹಿರಿತನ ಹೊಂದಿರುವ ಜಸ್ಟಿಸ್‌ ಎ ಕೆ ಸಿಕ್ರಿ ಅವರನ್ನು ನಾಮಕರಣ ಮಾಡಿದ್ದಾರೆ. 

Advertisement

ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಳಗೊಂಡ ಆಯ್ಕೆ ಸಮಿತಿಯಲ್ಲಿ ಜಸ್ಟಿಸ್‌ ಸಿಕ್ರಿ ಅವರೂ ಓರ್ವ ಸದಸ್ಯರಾಗಿ ಇರುತ್ತಾರೆ.

ಆಯ್ಕೆ ಸಮಿತಿಯು ಪ್ರಧಾನ ಮಂತ್ರಿ, ಸಿಜೆಐ ಮತ್ತು ಸಂಸತ್ತಿನ ಅತೀ ದೊಡ್ಡ ವಿರೋಧ ಪಕ್ಷದ ನಾಯಕ ಅವರನ್ನು ಒಳಗೊಂಡಿರುತ್ತದೆ. 

ಸಿಬಿಐ ನಿರ್ದೇಶಕ ಆಲೋಕ್‌ ಕುಮಾರ್‌ ವರ್ಮಾ ಅವರ ಅಧಿಕಾರಾವಧಿಯು ಇದೇ ಜನವರಿ 31ರಂದು ಮುಗಿಯುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next