ಕರಾಚಿ: ಪಾಕಿಸ್ಥಾನದಲ್ಲಿ. ರಾಜಕೀಯ ಅರಾಜಕತೆಯ ಬೆನ್ನಲ್ಲೇ ಹಿಂಸಾಚಾರ ಸ್ಪೋಟವಾಗಿದೆ. ಸಿಂಧ್ ಪೊಲೀಸ್ ಮುಖ್ಯಸ್ಥ ಮುಷ್ಟಾಕ್ ಅಹಮದ್ ಮುಹರ್ ರನ್ನು ಪಾಕಿಸ್ಥಾನ ಸೇನೆ ಅಪಹರಿಸಿದೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಕರಾಚಿಯಲ್ಲಿ ಆತಂಕದ ಪರಿಸ್ಥಿತಿ ಮನೆ ಮಾಡಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಅಳಿಯ ಸಫ್ದರ್ ಅವನ್ ಅವರನ್ನು ಬಂಧಿಸುವಂತೆ ಕರಾಚಿ ಪೊಲೀಸರ ಮೇಲೆ ಒತ್ತಡ ಹೇರುವ ಸಲುವಾಗಿ ಸಿಂಧ್ ಪೊಲೀಸ್ ಮುಖ್ಯಸ್ಥರನ್ನು ಪಾಕಿಸ್ತಾನ ಸೇನಾ ಪಡೆಗಳು ಅಪಹರಿಸಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದೆ. ಈ ಬಗ್ಗೆ ಪಾಕಿಸ್ಥಾನ ಸೇನಾ ಪಡೆ ಮುಖ್ಯಸ್ಥ ಖ್ವಮಾರ್ ಜಾವೇದ್ ಬಾಜ್ವಾ ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಇಮ್ರಾನ್ ವಿರುದ್ಧ ನವಾಜ್ ಪುತ್ರಿ ವಾಗ್ದಾಳಿ: ಕರಾಚಿ ಪೊಲೀಸರಿಂದ ಮರಿಯಮ್ ಪತಿ ಬಂಧನ
ಪಾಕಿಸ್ಥಾನದ ಹಣಕಾಸಿನ ರಾಜಧಾನಿ ಎಂದೇ ಖ್ಯಾತವಾದ ಕರಾಚಿಯಲ್ಲಿ ಮಂಗಳವಾರ ರಾತ್ರಿ ನಡೆದ ಸಂಘರ್ಷದಲ್ಲಿ ಹತ್ತು ಮಂದಿ ಪೊಲೀಸರನ್ನು ಹತ್ಯೆ ಮಾಡಲಾಗಿದೆ. ಸೇನೆ ಮತ್ತು ಪೊಲೀಸರ ನಡುವಿನ ಸಂಘರ್ಷದಿಂದ ನಾಗರಿಕ ಯುದ್ಧ ಆರಂಭವಾಗಿದೆ ಎಂದು ಇಂಟರ್ ನ್ಯಾಶನಲ್ ಹೆರಾಲ್ಡ್ ವರದಿ ಮಾಡಿದೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ ಮರಿಯಮ್ ನವಾಜ್ ಪತಿ ಕ್ಯಾಪ್ಟನ್ ಸಫ್ದಾರ್ ಅವಾನ್ ಅವರನ್ನು ಕರಾಚಿ ಪೊಲೀಸರು ಸೋಮವಾರ ಬಂಧಿಸಿದ್ದರು. ಈ ಘಟನೆಯಿಂದ ಪಾಕಿಸ್ಥಾನದ ಮಹತ್ತರ ಬೆಳವಣಿಗೆಗೆಳು ನಡೆಯುತ್ತಿದೆ.
ಮಂಗಳವಾರ ರಾತ್ರಿ ನಡೆದ ಘಟನೆಯನ್ನು ಪ್ರಸಾರ ಮಾಡದಂತೆ ಚಾನೆಲ್ ಗಳು, ರೇಡಿಯೋ, ಪತ್ರಿಕೆಗಳಿಗೆ ಪಾಕ್ ಸೇನೆ ಆದೇಶಿಸಿದೆ ಎನ್ನಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ವಿಚಾರ ದೇಶದೆಲ್ಲೆಡೆ ಹಬ್ಬಿದೆ.