Advertisement

ನಾಗರಿಕ ಸೇವಾ ಪರೀಕ್ಷೆಗಳಿಗೆ ಪೂರ್ವಯೋಜಿತ ಸಿದ್ಧತೆ ಇರಲಿ

02:59 PM Mar 03, 2021 | Team Udayavani |

ಚಾಮರಾಜನಗರ: ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಸ್ವ ಪ್ರಯತ್ನ, ಸಾಮರ್ಥ್ಯ ಪರಿಶ್ರಮದಿಂದ ಅಗಾಧ ಸಾಧನೆ ಮಾಡಬೇಕು. ಅನಗತ್ಯ ಸಂಗತಿಗಳ ಬಗ್ಗೆ ಗಮನ ಹರಿಸಬಾರದು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಕಿವಿಮಾತು ಹೇಳಿದರು.

Advertisement

ನಗರದ ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಕುರಿತು ಜಿನಿವಾದ ವಿಶ್ವ ವ್ಯಾಪಾರ ಸಂಘಟನೆಯ ಭಾರತದ ಕಾಯಂ ಪ್ರತಿನಿಧಿಯಾಗಿರುವ ಭಾರತೀಯ ವಿದೇಶಾಂಗ ಸೇವೆಯ ಹಿರಿಯ ಅಧಿಕಾರಿ ಪಿ.ಎಸ್‌. ಗಂಗಾಧರ್‌ ಅವರ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಗರಿಕ ಸೇವಾ ಪರೀಕ್ಷೆಗಳಿಗೆ ಪೂರ್ವ ಯೋಜಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಅಧ್ಯಯನದ ಮೇಲೆ ಏಕಾಗ್ರತೆ ಇರಬೇಕು.ಆತ್ಮಸ್ಥೈರ್ಯದಿಂದ ನಿಮ್ಮಲ್ಲಿ ಅಂತರ್ಗತವಾಗಿರುವ ವಿದ್ವತ್ತಿನ ಮೇಲೆ ನಂಬಿಕೆಯಿಟ್ಟು ಮುನ್ನಡೆದರೆಸಾಧನೆ ಮಾಡಬಹುದೆಂದರು.

ಸಾಧಕರ ಸಾಧನೆಗಳು ಅನುಭವಗಳು ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿ ಗಳಿಗೆ ನೆರವಾಗಬೇಕು. ಈ ಉದ್ದೇಶಕ್ಕಾಗಿಯೇಚಾಮರಾಜನಗರ ಜಿಲ್ಲೆಯವರೇ ಆದ ಜಿನಿವಾದವಿಶ್ವ ವ್ಯಾಪಾರ ಸಂಘಟನೆಯ ಭಾರತದ ಉಪಕಾಯಂ ಪ್ರತಿನಿಧಿಯಾಗಿರುವ ಭಾರತೀಯವಿದೇಶಾಂಗ ಸೇವೆಯ ಅಧಿಕಾರಿ ಪಿ.ಎಸ್‌.ಗಂಗಾಧರ್‌ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಅಭ್ಯರ್ಥಿಗಳಿಗೆನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಂದೆಯೂ ನಿರಂತರವಾಗಿ ಸಲಹೆ ಮಾರ್ಗದರ್ಶನ ಅಗತ್ಯವಿದೆ. ಹೀಗಾಗಿ ಆನ್‌ಲೈನ್‌ ಮೂಲಕ ಜಿಲ್ಲೆಯ ಯುವಜನರೊಂದಿಗೆ ಸಂಪರ್ಕ ಸಾಧಿಸಿ ಪರೀಕ್ಷೆಗೆ ಮಾರ್ಗದರ್ಶನ ಮಾಡುವವೆಬ್‌ಸೈಟ್‌ ಪೋರ್ಟಲ್‌ ಸ್ಥಾಪಿಸಿದ್ದಲ್ಲಿ ಜಿಲ್ಲಾಡಳಿತ ದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಜಿನಿವಾದ ವಿಶ್ವವ್ಯಾಪಾರ ಸಂಘಟನೆಯ ಭಾರತದ ಉಪ ಕಾಯಂ ಪ್ರತಿನಿಧಿಯಾಗಿರುವ ಭಾರತೀಯ ವಿದೇಶಾಂಗಸೇವೆಯ ಅಧಿಕಾರಿ ಪಿ.ಎಸ್‌. ಗಂಗಾಧರ್‌,ನಾಗರಿಕ ಸೇವಾ ಪರೀಕ್ಷೆ ಬರೆಯಲು ಯಾವುದೇ ಅಂಜಿಕೆ ಬೇಡ. ನಿಮ್ಮ ಗುರಿ ಉದ್ದೇಶಉನ್ನತವಾಗಿರಲಿ. ನಿಮ್ಮಲ್ಲಿರುವ ಸಾಮರ್ಥ್ಯದ ಬಗ್ಗೆ ಅಪನಂಬಿಕೆ ಬಿಟ್ಟು ಮನಸ್ಥಿತಿಯ ಅಡೆತಡೆಗಳನ್ನು ಭೇದಿಸಿ ಹೊರಬಂದರೆ ಉನ್ನತ ಹುದ್ದೆ ಅಲಂಕರಿಸಬಹುದು ಎಂದರು.

Advertisement

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕೃಷ್ಣಮೂರ್ತಿ ಹನೂರು, ಡಾ.ಬಿ.ಆರ್‌. ಅಂಬೇಡ್ಕರ್‌ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪೊ›. ಶಿವಬಸವಯ್ಯ ಇತರರು ಹಾಜರಿದ್ದರು.

 ಯಶಸ್ಸು ಕೈಗೆ ಸಿಗದ ವಸ್ತುವೇನಲ್ಲ :

ನಾನೂ ಸಹ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದೇನೆ. ನಿಮ್ಮಂತೆಯೇ ವಿದ್ಯಾರ್ಥಿ ಜೀವನ ಕಳೆದಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸುಕೈಗೆ ಸಿಗದ ವಸ್ತುವೇನಲ್ಲ. ಸರಿಯಾದ ಮಾರ್ಗದರ್ಶನ, ಓದಿನೆಡೆಗೆ ಆಸಕ್ತಿ, ವಿಷಯಗಳಆಯ್ಕೆ, ಕೇಂದ್ರೀಕೃತ ಗಮನವಿದ್ದಲ್ಲಿ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು ಎಂದು ವಿದೇಶಾಂಗ ಸೇವೆಯ ಅಧಿಕಾರಿ ಪಿ.ಎಸ್‌. ಗಂಗಾಧರ್‌ ಸಲಹೆ ಮಾಡಿದರು. ಇದೇ ವೇಳೆನಾಗರಿಕ ಸೇವಾ ಪರೀಕ್ಷೆಗಾಗಿ ಜಿಲ್ಲೆಯ ಅಭ್ಯರ್ಥಿಗಳಿಗಾಗಿ ಮಾರ್ಗದರ್ಶನ ಮಾಡುವ ಸದುದ್ದೇಶದ ಕಾರ.ಗಳಿಗೆ ತಾವು ಸಕ್ರಿಯವಾಗಿ ತೊಗಿಕೊಳ್ಳಲು ಸಿದ್ಧರಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next