Advertisement

ಕೋವಿಡ್ ಪ್ರಕರಣ : ನರೇಗಾ ಕೆಲಸ ಸ್ಥಗಿತ ,ಮೇ 24ರ ವರೆಗೆ ಇಲ್ಲ ಎಂದ ಗ್ರಾ. ಇಲಾಖೆ

12:46 AM May 12, 2021 | Team Udayavani |

ಬೆಂಗಳೂರು : ಹಳ್ಳಿಗಳಿಗೂ ಕೊರೊನಾ ವ್ಯಾಪಿಸುತ್ತಿರುವ ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ನರೇಗಾ ಕೆಲಸವನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.

Advertisement

ಮೇ 10ರಿಂದ ಮೇ 24ರ ವರೆಗೆ ರಾಜ್ಯದಲ್ಲಿ ಕಠಿನ ನಿರ್ಬಂಧಗಳಿದ್ದು, ಹೆಚ್ಚು ಜನರು ಗುಂಪುಗೂಡಬಾರದು ಎಂದು ಸರಕಾರ ಆದೇಶ ಹೊರಡಿಸಿದೆ. ಅಲ್ಲದೆ ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಕ್ಕೆ ಭಾರೀ ಸಂಖ್ಯೆಯಲ್ಲಿ ಜನ ತೆರಳಿದ್ದಾರೆ. ಇವರೂ ನರೇಗಾ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರಿಗೂ ಸೋಂಕು ಹರಡುವ ಭೀತಿ ಇದೆ. ಈ ಕಾರಣದಿಂದಾಗಿ ಮೇ 24ರ ವರೆಗೆ ನರೇಗಾ ಕೆಲಸವನ್ನು ಸ್ಥಗಿತ ಮಾಡಿ ಆದೇಶ ಹೊರಡಿಸಲಾಗಿದೆ.

ಸಾಮಾನ್ಯವಾಗಿ ಎಪ್ರಿಲ್‌ ನಿಂದ ಜೂನ್‌ ವರೆಗೆ ನರೇಗಾದಡಿ ಹೆಚ್ಚು ಕೆಲಸವಿರುತ್ತದೆ. ಈ ಕಾರಣದಿಂದ ಹೆಚ್ಚು ಮಂದಿ ಸೇರುವ ಅಪಾಯವಿದೆ. ಕೂಲಿಕಾರರಲ್ಲಿ ಯಾರಾದರೂ ಒಬ್ಬರಿಗೆ ಸೋಂಕು ತಗುಲಿದರೂ ಅಪಾಯ ಹೆಚ್ಚು. ಗ್ರಾಮೀಣ ಭಾಗದಲ್ಲಿ ಸೋಂಕು ಹರಡಿ ಪ್ರಾಣಾಪಾಯವೂ ಆಗುವ ಸಂಭವವಿದೆ. ಮೇ 10ರಿಂದ 24ರ ವರೆಗೆ ಕೆಲಸ ಇರುವುದಿಲ್ಲವಾದರೂ ಗ್ರಾ.ಪಂ.ಗಳು ಜನ ರಿಂದ ಕೆಲಸದ ಬೇಡಿಕೆಯ ಅರ್ಜಿ ಸ್ವೀಕರಿಸಬೇಕು. ಈಗ ಸ್ವೀಕರಿಸಿದರೂ ಮೇ 25ರ ಅನಂತರ ಕೆಲಸ ನೀಡಲು ಅನುಕೂಲವಾಗುತ್ತದೆ ಎಂದು ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next