Advertisement
ಏನಿದು ಸ್ಕೈಬ್ರಿಡ್ಜ್ ?ನಗರದಲ್ಲಿ ನಿರ್ಮಿಸಲಾಗಿರುವ ಎರಡು ಬಹುಮಹಡಿ ಅಥವಾ ಬಹು ಅಂತಸ್ತಿನ ಕಟ್ಟಡಗಳ ನಡುವೆ ಸಂಪರ್ಕಕ್ಕಾಗಿ ಸೇತುವೆ ನಿರ್ಮಿಸುವುದೇ ಸ್ಕೈಬ್ರಿಡ್ಜ್ . ದೂರದಲ್ಲಿರುವ ಎರಡು ಬಹುಮಹಡಿ ಕಟ್ಟಡಗಳ ನಡುವೆ ಸಂಪರ್ಕ ಸಾಧಿಸಲು ಇದರಿಂದ ಅನುಕೂಲ. ಸಮಯ ಉಳಿಸಬಹುದಲ್ಲದೇ ಮಿಕ್ಸ್ಡ್ ಯೂಸ್ಡ್ಬಿ ಲ್ಡಿಂಗ್ ಪರಿಕಲ್ಪನೆಗೆ ಇದು ಸಾಕಾರವಾಗಬಹುದು. ಕಟ್ಟಡಗಳ ನಡುವೆ ಸ್ಕೈಬ್ರಿಡ್ಜ್ ನಿರ್ಮಾಣದಲ್ಲಿ ಭಾರತ ದೇಶವೂ ಅಷ್ಟೇನೂ ಕಾಳಜಿ ವಹಿಸದಿರುವುದು ಇನ್ನೂ ಅಚ್ಚರಿ. ಆದರೆ ಈ ವಿಚಾರಕ್ಕೆ ಬಂದರೆ ಸಿಂಗಾಪುರ, ಅಮೆರಿಕ ದೇಶಗಳಲ್ಲಿ ಬಹುಮಹಡಿ ಕಟ್ಟಡಗಳ ನಡುವೆ ಸ್ಕೈಬ್ರಿಡ್ಜ್ ನ್ನು ಪರಿಣಾಮಕಾರಿಯೇ ನಿರ್ಮಿಸಲಾಗುತ್ತಿದೆ.
ಈ ಕಲ್ಪನೆಯೂ ಹಳೆಯ ಮಾದರಿಯಾದರೂ ಇದು ಇಂದು ತುಂಬಾ ಪ್ರಸ್ತುತತೆ ಪಡೆದುಕೊಳ್ಳುತ್ತಿದೆ. ನಗರೀಕರಣ ಕ್ರಾಂತಿಯಿಂದಾಗಿ ಅನೇಕ ಹೊಸ ಮಾದರಿಯ ಕಲ್ಪನೆಗಳು ಮರು ಜೀವ ಪಡೆದುಕೊಂಡಂತೆ, ಸ್ಕೈಬ್ರಿಡ್ಜ್ ಮಾದರಿಯೂ ತಾಂತ್ರಿಕ ನೆರೆವಿನಿಂದಾಗಿ ಅತ್ಯಾಧುನಿಕವಾಗಿ ನಿರ್ಮಿಸಲಾಗುತ್ತಿದೆ. ಎರಡು ಬಹು ಮಹಡಿ ಕಟ್ಟಡಗಳ ನಡುವೆ ಇದನ್ನು ನಿರ್ಮಿಸುವುದರಿಂದಾಗಿ ನಗರದ ಸೌಂದರ್ಯ ಹೆಚ್ಚುತ್ತದೆ. ಇದನ್ನು ಕೂಡ ಪ್ರವಾಸೋದ್ಯಮಕ್ಕೆ ಪೂರಕವಾಗಿ ಬಳಸಿಕೊಳ್ಳಬಹುದು. ಅಲ್ಲದೇ ಭವಿಷ್ಯದ ನಗರೀಕರಣ ಮಾದರಿಗಳಿಗೆ ಇದು ಭದ್ರ ಬುನಾದಿಯಾಗಲಿದೆ ಎಂಬುದು ಕೂಡ ಗಮನಾರ್ಹ ಅಂಶ. ಅಮೆರಿಕ ಹಾಗೂ ಸಿಂಗಾಪುರದಂತಹ ದೇಶಗಳೂ ಈ ವಿನ್ಯಾಸವನ್ನು ಅಳವಡಿಸಿಕೊಂಡಿರುವಾಗ ಭಾರತವೂ ಕೂಡ ಈ ಅತ್ಯಾಧುನಿಕ ತಾಂತ್ರಿಕತೆಯನ್ನು ಬಳಸಿಕೊಳ್ಳುವುದು ಕೂಡ ಅಗತ್ಯವೆನಿಸುತ್ತದೆ. ಮುಂಬಯಿ, ಬೆಂಗಳೂರು, ದೆಹಲಿ ಹಾಗೂ ಮಂಗಳೂರಿನಂತಹ ಮಹಾನಗರಗಳಲ್ಲಿ ಎತ್ತ ನೋಡಿದರೆ ಅಕಾಶ ಮುಟ್ಟುವಂತೆ ಇರುವ ಗಗನ ಚುಂಬಿ ಕಟ್ಟಡಗಳನ್ನು ನಿರ್ಮಿಸಿರುವಾಗ, ಎರಡು ಮಾದರಿಯ ಕಟ್ಟಡಗಳ ಸಂಪರ್ಕಕ್ಕಾಗಿ ಸ್ಕೈಬ್ರಿಡ್ಜ್ ನಿರ್ಮಾಣ ಅಗತ್ಯವೆನಿಸುತ್ತದೆ.
Related Articles
ಸಿಂಗಾಪುರ ದೇಶದ ಮರೀನಾ ಬೇ ಸ್ಯಾಂಡ್ಸ್ ಎಂಬ ರೆಸಾರ್ಟ್ ನಲ್ಲಿ ಅತ್ಯಾಧುನಿಕವಾದ ಸ್ಕೈಬ್ರಿಡ್ಜ್ ನಿರ್ಮಿಸಲಾಗಿದೆ. ಇದು ಸುಮಾರು 340 ಮೀಟರ್ ಉದ್ದವಾಗಿದ್ದು, 4,000 ಮಂದಿ ಓಡಾಡಬಹುದಾಗಿದೆ. ಸಂಚಾರಕ್ಕೆ ಕೂಡ ಅನುಕೂಲವಾಗಿದೆ. ಅಮೆರಿಕದ ನ್ಯೂಯಾರ್ಕ್ ನಗರದ ಕೂಪರ್ ಬಿಲ್ಡಿಂಗ್ಸ್ ನಡುವೆ ಕೂಡ ದೊಡ್ಡದಾದ ಸಂಪರ್ಕ ಸೇತುವೆಯಾಗಿ ಇದನ್ನು ನಿರ್ಮಿಸಲಾಗಿದೆ.
Advertisement
ಶಿವ ಸ್ಥಾವರಮಠ