Advertisement

ನಗರದ ಬೀದಿದೀಪಗಳ ದುರಸ್ತಿ !

10:05 AM Jul 10, 2018 | Team Udayavani |

ಮಹಾನಗರ: ನಗರ ವ್ಯಾಪ್ತಿಯ ಹಲವು ಭಾಗದಲ್ಲಿ ಬೀದಿ ದೀಪ ಉರಿಯದೆ ಸಮಸ್ಯೆ ಆಗುತ್ತಿರುವುದನ್ನು ಕೊನೆಗೂ ಗಮನಿಸಿದ ಮಹಾನಗರ ಪಾಲಿಕೆ ಈಗ ರಿಪೇರಿಗೆ ಮುಂದಾಗಿದೆ. ಜೂ. 9ರಂದು ಉದಯವಾಣಿ ಸುದಿನದಲ್ಲಿ ಪ್ರಕಟವಾದ ವರದಿಯಿಂದ ಎಚ್ಚೆತ್ತ ಪಾಲಿಕೆ ಬೀದಿ ದೀಪಗಳನ್ನು ಸರಿಪಡಿಸಲು ಆರಂಭಿಸಿದೆ. ನಗರದ ಎಂ.ಜಿ.ರಸ್ತೆ ವ್ಯಾಪ್ತಿಯಲ್ಲಿ ಹಾಳಾಗಿರುವ ಬೀದಿದೀಪಗಳನ್ನು ಸೋಮವಾರ ಬೆಳಗ್ಗೆಯೇ ಪಾಲಿಕೆ ತಂಡ ಸರಿಪಡಿಸಿದೆ. ಬೃಹತ್‌ ವಾಹನದ ಮೂಲಕ ಹಳೆಯ ದೀಪ ತೆರವುಗೊಳಿಸಿ ಹೊಸ ದೀಪಗಳನ್ನು ಅಳವಡಿಸಲಾಯಿತು.

Advertisement

ಮಳೆ ಬರುವುದಕ್ಕೂ ಮುಂಚಿತವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯುತ್‌ ನಿರ್ವಹಣೆ ಕಾಮಗಾರಿ ನಡೆಸಬೇಕಿತ್ತು. ಆದರೆ ಇದು ಸಮರ್ಪಕವಾಗಿ ನಡೆಯಲಿಲ್ಲ. ಈ ಕಾರಣಕ್ಕೆ ಮೇ ತಿಂಗಳ ಕೊನೆಯ ವಾರದಲ್ಲಿ ಬಂದಂತಹ ಭಾರೀ ಮಳೆಗೆ ಇಲ್ಲಿನ ಸುಮಾರು 250 ಮೀಟರ್‌ ನಷ್ಟು ವಿದ್ಯುತ್‌ ಕೇಬಲ್‌ಗ‌ಳಿಗೆ ಹಾನಿಯಾಗಿದೆ. ಇದರಿಂದಾಗಿ ಹೆಚ್ಚಿನ ಬೀದಿ ದೀಪಗಳು ಉರಿಯುವುದಿಲ್ಲ ಎಂಬುದು ಪಾಲಿಕೆ ಮೂಲಗಳ ಅಭಿಪ್ರಾಯ.

ಮಳೆ, ಗಾಳಿ ಬಂದರೆ ಸಾಕು. ನಗರದ ಎಲ್ಲ ಭಾಗಗಳಲ್ಲಿ ಬೀದಿ ದೀಪಗಳು ಕೆಟ್ಟು ಹೋಗುತ್ತಿವೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಜನರು ಪಾಲಿಕೆಯನ್ನು ಪ್ರಶ್ನಿಸಿದ್ದರು. ಕೊನೆಗೂ ಎಚ್ಚೆತ್ತುಕೊಂಡ ಪಾಲಿಕೆ ಬೀದಿದೀಪಗಳ ಸಮರ್ಪಕ ನಿರ್ವಹಣೆಗೆ ಮುಂದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next