Advertisement
85ರ ವಯೋಮಿತಿಯ ಹಿರಿಯರಿಂದ ಆರಂಭವಾಗಿ 35ರ ಹರೆಯದವರೆಗಿನವರಿಗೆ ಕೂಟದಲ್ಲಿ ಪಾಲ್ಗೊಳ್ಳಬಹುದು. ಬಹುತೇಕ 50 ವರ್ಷಕ್ಕಿಂತ ಮೇಲ್ಪಟ್ಟವರು ಈ ಕೂಟದಲ್ಲಿ ಭಾಗವಹಿಸುವುದು ವಿಶೇಷ.
ಎ. 12ರಂದು ಬೆಳಗ್ಗೆ 9 ಗಂಟೆಗೆ ಕರಾವಳಿ ಮೈದಾನದಿಂದ ಕ್ರೀಡಾತಂಡಗಳ ಪಥಸಂಚಲನ ಪ್ರಾರಂಭವಾಗಲಿದೆ. ಬಳಿಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಬಳಿಕ ಸತತ ನಾಲ್ಕು ದಿನಗಳಲ್ಲಿ 30ರಿಂದ 85 ವಯೋಮಿತಿಯ ವಿವಿಧ ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧೆಯು ನಡೆಯಲಿದೆ. ವಿಜೇತರಾದವರಿಗೆ ಪ್ರಥಮ ಮೂರು ಸ್ಥಾನದ ಸರ್ಟಿಫಿಕೇಟ್ ಹಾಗೂ ಪದಕ ಪ್ರದಾನ ಮಾಡಲಾಗುತ್ತದೆ.
Related Articles
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಎಲ್ಲ ಕ್ರೀಡಾಳುಗಳಿಗೆ ಆಯೋಜಕರು ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ಸಂಜೆ ಕಾಫಿ/ ಟೀ ವ್ಯವಸ್ಥೆ ಆಯೋಜಿಸಿದ್ದಾರೆ. ಈಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಈ ಎಲ್ಲ ಚಟುವಟಿಕೆಗಳ ಬಗ್ಗೆ ಆಯೋಗವು ಗಮನಹರಿಸಲಿರುವುದು ಈ ಕ್ರೀಡಾಕೂಟದ ಇನ್ನೊಂದು ವಿಶೇಷ. ಬೇರೆ ರಾಜ್ಯದಿಂದ ಆಗಮಿಸುವ ಕ್ರೀಡಾಳುಗಳಿಗೆ ಮಂಗಳೂರಿನ ಹೊಟೇಲ್‌ನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.
Advertisement
ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು..!ನಾಲ್ಕು ದಿನಗಳಲ್ಲಿ ಬರೋಬ್ಬರಿ 350 ಸ್ಪರ್ಧೆಗಳು ನಡೆಯಲಿವೆ. 35ರಿಂದ 40ರ ವಯೋಮಿತಿ, 40ರಿಂದ 45 ಹೀಗೆ 5 ವರ್ಷದ ಮಧ್ಯೆ ಅಂತರವಿರಿಸಿ ವಿಭಾಗಗಳನ್ನು ಮಾಡಿ ಸ್ಪರ್ಧೆ ಆಯೋಜಿಸಲಾಗಿದೆ. ಬಿಸಿಲು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಉತ್ತರ ಭಾರತೀಯರಿಗೆ ಹಾಗೂ ಹಿರಿಯರಿಗೆ ಬಿಸಲಿನ ತಾಪ ಸಹಿಸಲು ಕಷ್ಟವಾಗಬಹುದು ಎಂಬ ಹಿನ್ನೆಲೆಯಲ್ಲಿ ಆಟೋಟದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಇದರಂತೆ ಮುಂಜಾನೆ 6.30ರಿಂದ 11.30ರ ವರೆಗೆ ಆಟೋಟ ನಡೆದು ಆ ಬಳಿಕ ಅಪರಾಹ್ನ 3ರಿಂದ ಸಂಜೆ 6ರ ವರೆಗೆ ಸ್ಪರ್ಧೆ ನಡೆಯಲಿದೆ. 18 ರಾಜ್ಯದ 1,600 ಕ್ರೀಡಾಳುಗಳು
ದೇಶದ 18 ರಾಜ್ಯಗಳ ಕ್ರೀಡಾ ತಂಡಗಳ ಸುಮಾರು 1,600ರಷ್ಟು ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಘಡ್, ಹರಿಯಾಣ, ಚಂಡೀಗಢ, ಪಂಜಾಬ್, ಕಾಶ್ಮೀರ, ಉತ್ತರ ಪ್ರದೇಶ, ಉತ್ತರಾಖಂಡ್, ಒರಿಸ್ಸಾ, ಹಿಮಾಚಲ ಪ್ರದೇಶ ಹಾಗೂ ಅಸ್ಸಾಂನ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ. 100 ಕ್ರೀಡಾ ತೀರ್ಪುಗಾರರು ಭಾಗವಹಿಸಲಿದ್ದಾರೆ. ಶ್ರೀಲಂಕಾದಿಂದಲೂ ಹಿರಿಯ ಕ್ರೀಡಾಳುಗಳು!
ರಾಷ್ಟ್ರೀಯ ಹಿರಿಯರ ಆ್ಯತ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬೇರೆ ಬೇರೆ ರಾಜ್ಯದ ಕ್ರೀಡಾಳುಗಳು ಭಾಗವಹಿಸುವ ಜತೆಗೆ ಶ್ರೀಲಂಕಾದಿಂದಲೂ ಹಿರಿಯ ಕ್ರೀಡಾಳುಗಳು ಮಂಗಳೂರು ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ 52 ಕ್ರೀಡಾಳುಗಳು ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಪ್ರಶಸ್ತಿ ವಿಭಾಗಗಳನ್ನು ನಿಯುಕ್ತಿಗೊಳಿಸಲಾಗಿದೆ.