Advertisement
ಮಳೆ ಕೊರತೆಯಿಂದ ಹಲಗೂರಿನ ಕೆರೆ ಕಳೆದ 25 ವರ್ಷಗಳಿಂದ ತುಂಬಿಲ್ಲ. ಅಭಿವೃದ್ಧಿಯಿಂದಲೂ ಸಂಪೂರ್ಣ ವಂಚಿತವಾಗಿದೆ. ಉತ್ತಮ ಮಳೆಯಾಗಿ ಎಲ್ಲೆಡೆ ಹಸಿರು ನೆಲೆಸಿ, ರೈತರು ಬೆಳೆ ಕೈಗೆತ್ತಿಕೊಂಡಿದ್ದರೆ ಹಲಗೂರು ದೊಡ್ಡಕೆರೆ ವ್ಯಾಪ್ತಿಯ ರೈತರು ಮಾತ್ರ ನೀರಿಲ್ಲದೆ ಒಣಗುವ ಬೆಳೆಗಳನ್ನು ಕಂಡು ಕಂಗಾಲಾಗಿದ್ದಾರೆ.
Related Articles
Advertisement
ಈ ಬಾರಿ ಭೀಮನಕಿಂಡಿ ಬೆಟ್ಟದಲ್ಲಿ ಸಮೃದ್ಧ ಮಳೆಯಾಗಿದ್ದರೂ ಕೆರೆಗೆ ಮಾತ್ರ ನೀರು ಹರಿದುಬಂದಿಲ್ಲ. ಏಕೆಂದರೆ, ಕೆರೆಗೆ ನೀರು ಹರಿದುಬರುವ ಮಾರ್ಗದ ಎಲ್ಲಾ ಹಳ್ಳ-ಕೊಳ್ಳಗಳು ಮುಚ್ಚಿ ಹೋಗಿವೆ. ನೀರು ಅಲ್ಲಿಂದ ಇಲ್ಲಿಗೆ ಬರುವುದಕ್ಕೆ ಸಾಧ್ಯವಾಗದಂತಾಗಿದೆ ಎನ್ನುವುದು ಸ್ಥಳೀಯರು ಹೇಳುವ ಮಾತು.
ನೀರು ತುಂಬಿಸಿ: ಈ ಕೆರೆಗೆ ನೀರು ತುಂಬಿಸಲು ಶಿಂಷಾ ನದಿಯಿಂದ ನೀರು ತರಬೇಕು ಅಥವಾ ಇಗ್ಗಲೂರು ಡ್ಯಾಂನಿಂದ ಪೈಪ್ ಮುಖಾಂತರ ನೀರು ತಂದು ತುಂಬಿಸಬಹುದು ಹಾಗೂ ತೊರೆಕಾಡನಹಳ್ಳಿ ಗ್ರಾಮದಲ್ಲಿರುವ ಶಿಂಷಾ ನದಿಯಿಂದ ಸಾತನೂರಿಗೆ ಹಲಗೂರು ಮಾರ್ಗವಾಗಿ ಪೈಪ್‌ಲೈನ್ ಮುಖಾಂತರ ಶುದ್ಧಿಕರಿಸದೆ ಇರುವ ನೀರನ್ನು ಕೊಂಡೊಯ್ಯಲಾಗುತ್ತಿದೆ. ಅದೇ ಮಾರ್ಗದ ಪೈಪ್‌ಗೆ ಒಂದು ಗೇಟ್‌ವಾಲ್ ಅಳವಡಿಸಿ ಹಲಗೂರು ಕೆರೆಯಲ್ಲೇ ಹಾದು ಹೋಗಿರುವ ಪೈಪ್‌ನಿಂದಲೇ ಕೆರೆಗೆ ನೀರು ಹರಿಸಿ ಭರ್ತಿ ಮಾಡಬಹುದು.
500 ಎಕರೆ ಪ್ರದೇಶದ ರೈತರಿಗೆ ಸಂಕಷ್ಠ: ಈ ಕೆರೆ ಸುಮಾರು 50 ರಿಂದ 60 ಎಕರೆ ಪ್ರದೇಶವಿದ್ದು, ಈ ಕೆರೆ ಭರ್ತಿಯಾದರೆ ಸುಮಾರು 500 ರಿಂದ 600 ಎಕರೆಗೆ ನೀರು ಸಿಗುತ್ತದೆ. ಗ್ರಾಮದಲ್ಲಿರುವ ಮನೆಗಳ ಬೋರ್‌ವೆಲ್‌ಗಳಲ್ಲಿ ಸಮೃದ್ಧಿಯಾಗಿ ನೀರು ಬರುತ್ತದೆ. ಹೊಸದಾಗಿ ಬೋರ್‌ವೆಲ್ ಹಾಕಿಸಿದರೆ ಕೇವಲ 50-60 ಅಡಿಗೆ ನೀರು ಬರುವಂತಹ ಪರಿಸ್ಥಿತಿ ಇದೆ. ಕೆರೆಯ ಕೆಳಭಾಗದಲ್ಲಿರುವ ಗದ್ದೆಗಳಲ್ಲಿ ರೈತರು ಭತ್ತ ಬೆಳೆಯಬಹುದು. ಸುಮಾರು ವರ್ಷಗಳ ಹಿಂದೆ ಈ ಕೆರೆಯ ನೀರಿನಿಂದ ರೈತರು 2 ಬಾರಿ ಭತ್ತ ಬೆಳೆಯುತ್ತಿದ್ದರು. ಈಗ ನೀರು ಇಲ್ಲದ ಕಾರಣ ವ್ಯವಸಾಯ ಮಾಡುವುದನ್ನೆ ನಿಲ್ಲಿಸಿ ಸಂಕಷ್ಟದಲ್ಲಿ ಮುಳುಗಿದ್ದಾರೆ.
ಕೆಲವು ಕಡೆ ಭರ್ತಿಯಾಗಿರುವ ಕೆರೆಗಳಿಗೆ ಶಾಸಕರು ಬಾಗಿನ ಅರ್ಪಿಸುತ್ತಿರುವ ರೀತಿ ಹಲಗೂರು ಕೆರೆಗೆ ನೀರು ತುಂಬಿಸುವಯೋಜನೆ ರೂಪಿಸಿ ನೀರು ತುಂಬಿಸಬೇಕಿದೆ. ಇನ್ನಾದರೂ ಶಾಸಕರು ಅಥವಾ ಈ ಭಾಗದ ಜನಪ್ರತಿನಿಧಿಗಳು ಹೆಚ್ಚಿನ ಅನುದಾನ ನೀಡಿ ಅಭಿವೃದ್ದಿ ಮಾಡುವರೇ ಎಂಬುದನ್ನು ಕಾದು ನೋಡಬೇಕಿ¨ ಪ್ರಭಾಕರ್