ಮಹಾನಗರ: ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿ ಮಾಡುವ ಉದ್ದೇಶದಿಂದ ಬಸ್‌ಗಳ ಒಳಗೆ ಸಿಸಿ ಕೆಮರಾ ಅಳವಡಿಸಬೇಕು ಎಂಬ ಒತ್ತಾಯ ಪ್ರಯಾಣಿಕರಿಂದ ಕೇಳಿ ಬರುತ್ತಿದೆ. ಇದಕ್ಕೆ ಸ್ಪಂದಿಸಿರುವ ಪೊಲೀಸ್ ಇಲಾಖೆ ಸದ್ಯದಲ್ಲೇ ಬಸ್ ಮಾಲಕರ ಸಭೆ ಕರೆದು ಈ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರಲು ನಿರ್ಧರಿಸಿದೆ.
ಬೆಂಗಳೂರಿನಲ್ಲಿನ ಹೆಚ್ಚಿನ ಬಿಎಂಟಿಸಿ ಸಿಟಿ ಬಸ್‌ಗಳಲ್ಲಿ ಸಿಸಿ ಕೆಮ ರಾವನ್ನು ಹಂತ ಹಂತವಾಗಿ ಅಳವಡಿಸಲಾಗಿದೆ. ಇದರಿಂದ ಅಪಘಾತ ಪ್ರಮಾಣ, ಚಾಲಕ-ನಿರ್ವಾಹಕನ ನಿರ್ಲಕ್ಷ್ಯ ಕಡಿಮೆಯಾಗಿದೆ. ಜತೆಗೆ ಪ್ರಯಾಣಿಕರ ಜತೆ ನಿರ್ವಾಹಕರ ನಡವಳಿಕೆ ಕೂಡ ಸುಧಾರಿಸಿದೆ ಎನ್ನುತ್ತದೆ ನಿಗಮ. ಈ ನಿಟ್ಟಿನಲ್ಲಿ ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಿಗೂ ಹಂತ ಹಂತವಾಗಿ ಸಿಸಿ ಕೆಮ ರಾ ಅಳವಡಿಸಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕೆಲ ದಿನಗಳ ಹಿಂದೆ ದೇರಳಕಟ್ಟೆಯಿಂದ ಪಂಪ್‌ವೆಲ್ ಕಡೆಬರುತ್ತಿರುವ ಖಾಸಗಿ ಬಸ್‌ನಲ್ಲಿ ಸಹ ಪ್ರಯಾಣಿಕನೋರ್ವ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ತೊಂದರೆಗೊಳಗಾದ ಯುವತಿ ಸಾಮಾಜಿಕ ಜಾಲತಾಣದಲ್ಲಿ ದೂರಿ ಕೊಂಡಿದ್ದು ಇದು ವೈರಲ್ ಆಗಿತ್ತು. ಅದೇ ರೀತಿ ಬಸ್ ಟ್ರಿಪ್ ಸಮಯದ ವಿಚಾರವಾಗಿಯೂ ಖಾಸಗಿ ಬಸ್ ಚಾಲಕರ ನಡುವೆ ಮಾತಿನ ಚಕಮಕಿಗೆ ಕಾರಣವಾಗ ವೀಡಿಯೋ ಕೂಡ ವೈರಲ್ ಆಗಿತ್ತು. ಈ ರೀತಿಯ ಸನ್ನಿವೇಶಗಳನ್ನು ತಡೆಯುವ ನಿಟ್ಟಿನಲ್ಲಿಯೂ ಸಿಸಿ ಕೆಮ ರಾ ಸಹಕಾರಿಯಾಗಲಿದೆ.
ನಗರದಲ್ಲಿನ ಸಿಟಿ ಬಸ್‌ಗಳಲ್ಲಿ ಹಣ ಕೊಟ್ಟರೂ, ಟಿಕೆಟ್ ನೀಡುತ್ತಿಲ್ಲ ಎಂಬ ದೂರು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಪೊಲೀಸ್ ಫೋನ್ ಇನ್ ಕಾರ್ಯ ಕ್ರಮಗಳಲ್ಲಿಯೂ ಹತ್ತಾರು ಕರೆಗಳು ಬಂದಿದ್ದವು. ಈ ಬಗ್ಗೆ “ಸುದಿನ’ ಕೂಡ ಅನೇಕ ಬಾರಿ ವಿಸ್ತೃತ ವಿಶೇಷ ವರದಿ ಪ್ರಕಟಿಸಿತ್ತು. ಟ್ರಾಫಿಕ್ ಪೊಲೀಸರು ಮತ್ತು ಸಾರಿಗೆ ಇಲಾಖೆ ಕೆಲವು ಕಡೆಗಳಲ್ಲಿ ಕಾರ್ಯಚರಣೆ ನಡೆಸಿ ದಂಡ ವಿಧಿಸಿತ್ತು. ಇನ್ನು, ಸಾಮಾನ್ಯವಾಗಿ ಶಾಲಾ-ಕಾಲೇಜು ವಿದ್ಯಾ ರ್ಥಿಗಳು ಬಸ್‌ನ ಫುಟ್‌ಬೋರ್ಡ್‌ನಲ್ಲಿ ನೇತಾಡುವ ಪ್ರಮೇಯ ಕೂಡ ನಗರದಲ್ಲಿ ಇರುತ್ತದೆ ಹೀಗೆಲ್ಲಾ ಇರುವಾಗ ಬಸ್‌ಗಳಲ್ಲಿ ಸಿಸಿ ಕೆಮ ರಾ ಅಳವಡಿಸಿದರೆ ಇದನ್ನು ಕೊಂಚ ಮಟ್ಟಿಗಾದರೂ ತಡೆಯಲು ಸಾಧ್ಯವಾದೀತು.
ಖಾಸಗಿ ಬಸ್‌ಗಳ ಸಿಬಂದಿ ತಪ್ಪು ಮಾಡಿದರೆ ಬಸ್‌ಗಳ ಮಾಲಕರು ಕೂಡ ಜವಾಬ್ದಾರರು. ಕೂಡಲೇ ಬಸ್ ಮಾಲಕರ ಸಭೆ ಕರೆದು ಮಹಿಳೆಯರು ಸಹಿತ ಸಾರ್ವಜನಿಕರ ಸುರಕ್ಷತೆಗಾಗಿ ಸರಕಾರ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗುವುದು. ಬಸ್‌ಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಬಗ್ಗೆಯೂ ಸೂಚಿಸಲಾಗುವುದು. –
ಎನ್. ಶಶಿಕುಮಾರ್, ಮಂಗಳೂರು ಪೊಲೀಸ್ ಆಯುಕ್ತ
ನಗರದ ಕೆಲವು ಖಾಸಗಿ ಬಸ್‌ಗಳಲ್ಲಿ ಮಾಲಕರು ಸ್ವಂತ ಆಸಕ್ತಿಯಲ್ಲಿ ತಮ್ಮ ಬಸ್‌ಗಳಲ್ಲಿ ಸಿಸಿ ಕೆಮ ರಾ ಅಳವಡಿಸಿದ್ದಾರೆ. ಇದೀಗ ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಆಸಕ್ತಿ ವಹಿಸಿದ್ದು, ನಮ್ಮ ಬಸ್ ಮಾಲಕರ ಅಭಿಪ್ರಾಯ ತೆಗೆದು ಕೊಂಡು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ.
–ದಿಲ್‌ರಾಜ್ ಆಳ್ವ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ