Advertisement

ಅರುಣಾಚಲದ 2 ನಿರಾಶ್ರಿತ ಪಂಗಡಕ್ಕೆ ಪೌರತ್ವ ನೀಡಿಕೆ 

08:05 AM Sep 14, 2017 | |

ನವದೆಹಲಿ: ನೆರೆಯ ದೇಶ ಮ್ಯಾನ್ಮಾರ್‌ನಲ್ಲಿರುವ ರೊಹಿಂಗ್ಯಾ ಮುಸ್ಲಿಮ್‌ ನಿರಾಶ್ರಿತರ ವಿಚಾರ ಭಾರತದಲ್ಲಿಯೂ ನಿಧಾನವಾಗಿ ಚರ್ಚಾರ್ಹ ವಿಚಾರವಾಗುತ್ತಿದೆ. ಅದಕ್ಕೆ ಪೂರಕವಾಗಿ ಈಶಾನ್ಯ ರಾಜ್ಯದಲ್ಲಿ ವಾಸವಾಗಿರುವ ಚಕಾ¾ ಮತ್ತು ಹಜಾಂಗ್‌ ನಿರಾಶ್ರಿತರಿಗೆ ದೇಶದ ಪೌರತ್ವ ನೀಡುವ ಬಗ್ಗೆ ನಿರ್ಧಾರ ಕೈಗೊಂಡಿದೆ ಕೇಂದ್ರ ಸರ್ಕಾರ. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಮತ್ತು ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು ನೇತೃತ್ವದಲ್ಲಿ ಈ ಬಗ್ಗೆ ಸಭೆ ನಡೆದಿದೆ. 2015ರಲ್ಲಿ ಸುಪ್ರೀಂಕೋರ್ಟ್‌ ನೀಡಿದ ಆದೇಶದನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿರಣ್‌ ರಿಜಿಜು. 

Advertisement

ರೊಹಿಂಗ್ಯಾ ಮುಸ್ಲಿಮ್‌ ನಿರಾಶ್ರಿತರ ಬಗ್ಗೆ ಮಾತನಾಡಿದ ರಿಜಿಜು ಕಾಂಗ್ರೆಸ್‌ ಆಡಳಿತವೇ ಪರಿಸ್ಥಿತಿ ಕೈಮೀರಿ ಹೋಗುವಂತೆ ಮಾಡಿತ್ತು ಎಂದು ದೂರಿದರು. ಚಕಾ¾ ಮತ್ತು ಹಜಾಂಗ್‌ ನಿರಾಶ್ರಿತರನ್ನೂ ಹಿಂದಿನ ಸರ್ಕಾರ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅರುಣಾಚಲದಲ್ಲಿ ನೆಲೆಯೂರಲು ಅವಕಾಶ ಮಾಡಿಕೊಟ್ಟಿತೆಂದರು. ವಿಶ್ವಸಂಸ್ಥೆ ನಿರಾಶ್ರಿತರ ವಿಚಾರದಲ್ಲಿ ಕೈಗೊಂಡ ನಿಲುವಿನ ಹಿಂದೆ ಷಡ್ಯಂತ್ರವಿದೆ ಎಂದಿದ್ದಾರೆ.

ಇದೇ ವೇಳೆ ಬಿಎಸ್‌ಪಿ ನಾಯಕಿ ಮಾಯಾವತಿ ಮಾತ ನಾಡಿ ಕೇಂದ್ರ ಸರ್ಕಾರ ಅವರ ಪರ ಮೃದು ಧೋರಣೆ ತಳೆಯಬೇಕೆಂದಿದ್ದಾರೆ. ಮಣಿಪುರದಲ್ಲಿ ನಿರಾಶ್ರಿತರ ಪ್ರವೇಶ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ವಿಶ್ವಸಂಸ್ಥೆ ಸಭೆಗೆ ಗೈರು: ಈ ನಡುವೆ ಮ್ಯಾನ್ಮಾರ್‌ ರಾಖೀನೆ ಪ್ರಾಂತ್ಯದಲ್ಲಿ ರೊಹಿಂಗ್ಯಾಗಳ ವಿರುದ್ಧ ಅಲ್ಲಿನ ಸೇನೆಯ ಕಾರ್ಯಚರಣೆಗೆ ವಿಶ್ವಾದ್ಯಂತ ಟೀಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಅಲ್ಲಿನ ನಾಯಕಿ ಆ್ಯಂಗ್‌ ಸಾನ್‌ ಸೂಕಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next