Advertisement

ಪೌರತ್ವ ವಿಧೇಯಕ: ವಿಚಾರ, ವಿವಾದ, ವಾಸ್ತವ

10:09 AM Dec 12, 2019 | mahesh |

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವ್ಯವಸ್ಥೆಯನ್ನು ಅಸ್ಸಾಂನಲ್ಲಿ ಜಾರಿಗೊಳಿಸಿರುವಂತೆಯೇ ಕೇಂದ್ರ ಸರ್ಕಾರ ಪೌರತ್ವ (ತಿದ್ದುಪಡಿ) ವಿಧೇಯಕನ್ನು ಸಂಸತ್‌ನಲ್ಲಿ ಮಂಡಿಸಿದೆ. ಲೋಕಸಭೆಯಲ್ಲಿ ಸರ್ಕಾರಕ್ಕೆ ಬಹುಮತ ಇರುವುದರಿಂದ ಸಲೀಸಾಗಿ ಅಂಗೀಕಾರ ಸಿಕ್ಕಿದೆ. ಆದರೆ ರಾಜ್ಯಸಭೆಯಲ್ಲಿ ಅದು ಬುಧವಾರ ಮಂಡನೆಯಾಗಲಿದೆ. ಜೋರಾಗಿ ಸುದ್ದಿ ಮಾಡಿರುವ ವಿಧೇಯಕದತ್ತ ಒಂದು ಸುತ್ತು

Advertisement

ಏನಿದು ವಿಧೇಯಕ?
ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಇರುವ ಹಿಂದೂ, ಸಿಖ್‌, ಪಾರ್ಸಿ, ಬೌದ್ಧ, ಜೈನ, ಕ್ರಿಶ್ಚಿಯನ್‌ ಸಮುದಾಯಗಳು ಅಲ್ಲಿಂದ ಧಾರ್ಮಿಕ ಕಾರಣಗಳಿಗಾಗಿ ಶಿಕ್ಷೆಗೆ ಒಳಗಾಗಿ ಭಾರತಕ್ಕೆ ಓಡಿ ಬಂದವರಿಗೆ ಪೌರತ್ವ ನೀಡುವ ಬಗ್ಗೆ ವಿಧೇಯಕ. ಅದಕ್ಕಾಗಿ ಪೌರತ್ವ ಕಾಯ್ದೆ 1956ಕ್ಕೆ ತಿದ್ದುಪಡಿ ತರಲಾಗಿದೆ. ತಿದ್ದುಪಡಿ ತರುವುದಕ್ಕಿಂತ ಮೊದಲು ದೇಶದಲ್ಲಿ 12 ವರ್ಷಗಳ ಕಾಲ ಯಾವುದೇ ರೀತಿಯ ದಾಖಲೆ ಇಲ್ಲದೇ ಇರುವ ಐದು ಸಮುದಾಯದವರು ಪ್ರಸ್ತಾವಿತ ಕಾಯ್ದೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ವಿಧೇಯಕದಲ್ಲಿ 12 ವರ್ಷ ನಿಯಮವನ್ನು ಆರು ವರ್ಷಕ್ಕೆ ಇಳಿಕೆ ಮಾಡಲಾಗಿದೆ. 2014 ಡಿ.31ನ್ನು ಕಾಲಮಿತಿ ಎಂದು ನಿಗದಿ ಮಾಡಲಾಗಿದೆ. ಈ ಅವಧಿ ವರೆಗೆ ದೇಶದ ಎಲ್ಲಿಯೇ ಆಗಲಿ ವಾಸಿಸುತ್ತಿದ್ದವರು ಕೇಂದ್ರ ಸರ್ಕಾರದ ಹೊಸ ವ್ಯವಸ್ಥೆಯಡಿ ಲಾಭ ಪಡೆಯಲು ಅರ್ಹರು.

ಸದ್ಯ ಏನಿದೆ?
ಹಾಲಿ ಇರುವ ಕಾಯ್ದೆಯ ಪ್ರಕಾರ ಭಾರತದಲ್ಲಿಯೇ ಜನಿಸಿದವರಿಗೆ ಸಹಜವಾಗಿಯೇ ಪೌರತ್ವ ಬರುತ್ತದೆ. ಇತರರಿಗೆ ಹನ್ನೆರಡು ವರ್ಷಗಳ ಕಾಲ ದೇಶದಲ್ಲಿ ವಾಸಿಸುವರಿಗೆ ಪೌರತ್ವ ನೀಡಲಾಗುತ್ತದೆ. ಹೊಸ ವಿಧೇಯಕದಲ್ಲಿ ಹಾಲಿ ಕಾಯ್ದೆಯ ಉಪ ನಿಬಂಧನೆ ಡಿ ಯಿಂದ ಸೆಕ್ಷನ್‌ 7ರಲ್ಲಿ ಉಲ್ಲೇಖವಾಗಿರುವಂತೆ ಸಾಗರೋತ್ತರ ಭಾರತೀಯ ಪೌರತ್ವ ಕಾರ್ಡ್‌ (ಒಸಿಐ) ಹೊಂದಿರುವ ವ್ಯಕ್ತಿ ಕಾನೂನುಗಳನ್ನು ಉಲ್ಲಂ ಘನೆ ಮಾಡಿದರೆ, ಆತ ಹೊಂದಿರುವ ಒಸಿಐ ಕಾರ್ಡ್‌ ಅನ್ನು ರದ್ದು ಮಾಡುವ ಅಂಶ ಸೇರಿಸಿಕೊಳ್ಳಲಾಗಿದೆ.

ಸರ್ಕಾರದ ವಾದವೇನು?
2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಗ್ಗೆ ವಾಗ್ಧಾನ ಮಾಡಿತ್ತು. ಮುಸ್ಲಿಂ ಬಾಹುಳ್ಯವಿರುವ ರಾಷ್ಟ್ರಗಳಿಂದ ಧಾರ್ಮಿಕ ಕಾರಣಗಳಿಗಾಗಿ ಶಿಕ್ಷೆಯ ಭೀತಿಯಿಂದ ಆಶ್ರಯ ಕೋರಿ ಬಂದಿರುವ ಆರು ಸಮುದಾಯಗಳ ಜನರಿಗೆ ರಕ್ಷಣೆ ನೀಡುವುದು ಪ್ರಧಾನ ಆದ್ಯತೆ

ವಿನಾಯಿತಿ ಇದೆಯೇ?
ಸಂವಿಧಾನದ ಆರನೇ ಷೆಡ್ನೂಲ್‌ನಲ್ಲಿ ಉಲ್ಲೇಖಗೊಂಡಿರುವ ಮಿಜೋರಾಮ್‌, ಮೇಘಾಲಯ, ಅಸ್ಸಾಂ ಮತ್ತು ತ್ರಿಪುರಾಗಳಲ್ಲಿ ಬುಡಕಟ್ಟು ಜನಾಂಗದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಈ ನಿಯಮ ಜಾರಿಗೆ ಬರುವುದಿಲ್ಲ. ತ್ರಿಪುರಾದಲ್ಲಿ ತ್ರಿಪುರಾ ಬಡುಕಟ್ಟು ಪ್ರದೇಶದ ಸ್ವಾಯತ್ತ ಅಭಿವೃದ್ಧಿ ಮಂಡಳಿ, ಅಸ್ಸಾಂನ ದಿಮಾ ಹಸಾವೋ, ಕರ್ಬಿ ಅಂಗ್ಲಾಂಗ್‌ ಮತ್ತು ಬೋಡೋ ಪ್ರಾದೇಶಿಕ ವ್ಯಾಪ್ತಿಯ ಜಿಲ್ಲೆಗಳಿಗೆ ವಿನಾಯಿತಿ.

Advertisement

ಈಶಾನ್ಯ ರಾಜ್ಯಗಳಲ್ಲಿ ವಿರೋಧವೇಕೆ?
ಈಶಾನ್ಯ ರಾಜ್ಯಗಳಾಗಿರುವ ಮಣಿಪುರ, ಮೇಘಾಲಯ, ತ್ರಿಪುರಾ, ಮಿಜೋರಾಮ್‌, ಅಸ್ಸಾಂನಲ್ಲಿ ವಿರೋಧಕ್ಕೆ ಕಾರಣವಾಗಿದೆ. ಆರು ಸಮುದಾಯದವರಿಗೆ ಪೌರತ್ವ ನೀಡಿದರೆ ಸ್ಥಳೀಯವಾಗಿ ಇರುವ ಮೂಲ ಅಸ್ಸಾಮಿಗಳ ಜನಸಂಖ್ಯೆ, ಭಾಷೆ, ಸಾಂಸ್ಕೃತಿಕ ವಲಯಗಳಿಗೆ ಮುಂದಿನ ದಿನಗಳಲ್ಲಿ ಧಕ್ಕೆ ಎಂಬ ಭಾವನೆ. ಮಣಿಪುರ, ಮೇಘಾಲಯ, ತ್ರಿಪುರಾ, ಮಿಜೋರಾಮ್‌ನ ಬುಡಕಟ್ಟು ಪ್ರದೇಶಗಳು ಮತ್ತು ಆಂತರಿಕ ಪರವಾನಗಿ ವ್ಯವಸ್ಥೆ (ಇನ್ನರ್‌ ಲೈನ್‌ ಪರ್ಮಿಟ್‌) ಇರುವ ಸ್ಥಳಗಳಲ್ಲಿಯೂ ಕೂಡ ವಿರೋಧ. ಸ್ಥಳೀಯವಾಗಿರುವವರ ಹಿತಾಸಕ್ತಿಗೆ ಧಕ್ಕೆಯಾದೀತು ಎಂಬ ಭಾವನೆ. ಸದ್ಯ ಆಂತರಿಕ ಪರವಾನಗಿ ವ್ಯವಸ್ಥೆ ಇರುವ ಪ್ರದೇಶ ಮತ್ತು ಬುಡಟ್ಟು ಜನಾಂಗದವರ ಮಂಡಳಿ ಇರುವ ಪ್ರದೇಶಗಳನ್ನು ವಿಧೇಯಕ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿದೆ.

ಏನಿದು ಆಂತರಿಕ ಪರವಾನಗಿ ವ್ಯವಸ್ಥೆ (ಐಎಲ್‌ಪಿ)
ಸ್ವಾತಂತ್ರ್ಯ ಪೂರ್ವದಲ್ಲಿ ಈಶಾನ್ಯ ಭಾಗದಲ್ಲಿ ವಾಸಿಸುತ್ತಿದ್ದ ಬ್ರಿಟಿಷ್‌ ರಾಜಪ್ರಭೌತ್ವದ ಹಿತಾಸಕ್ತಿ ಕಾಪಿಡಲು ಬೆಂಗಾಲ್‌ ಈಸ್ಟರ್ನ್ ಫ್ರಾಂಟಿಯರ್‌ ರೆಗ್ಯುಲೇಷನ್‌ 1873 ಎಂಬ ಕಾಯ್ದೆ ಜಾರಿಗೊಳಿಸಲಾಗಿತ್ತು. ಅದನ್ನೇ ಈಗಿನ ಕಾಲಕ್ಕೂ ಮುಂದುವರಿಸಲಾಗಿದೆ. ಹೇಗೆ ಎಂದರೆ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌, ಮಿಜೋರಾಮ್‌ ರಾಜ್ಯಗಳಿಗೆ ದೇಶದ ಇತರ ರಾಜ್ಯದವರು ಪ್ರವೇಶ ಮಾಡಬೇಕೆಂದಿದ್ದರೆ ಅನುಮತಿ ಪಡೆಯಬೇಕು. ಈ ನಿಯಮದ ಅನ್ವಯ ಮೂರು ರಾಜ್ಯಗಳ ಆಯಾ ಸ್ಥಳೀಯ ಪ್ರದೇಶದಲ್ಲಿ ಉದ್ಯೋಗ, ಜಮೀನು ಖರೀದಿಗೆ ವಾಸ್ತವಕ್ಕೆ ಸ್ಥಳೀಯರಿಗೆ ಮಾತ್ರ ಅರ್ಹತೆ.

ಎನ್‌ಆರ್‌ಸಿ ಮತ್ತು ಸಿಎಬಿ ನಡುವಿನ ವ್ಯತ್ಯಾಸ
ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ (ವಿಧೇಯಕ) ತಿದ್ದುಪಡಿ (ಸಿಎಬಿ) ನಡುವೆ ವ್ಯತ್ಯಾಸ ಇದೆ. ಅಸ್ಸಾಂನಲ್ಲಿ 1971 ಮಾ.24ರ ಬಳಿಕ ಅಕ್ರಮವಾಗಿ ನೆಲೆಸಿರುವವರನ್ನು ದೇಶದಿಂದ ಹೊರಹಾಕಲು ಎನ್‌ಆರ್‌ಸಿ ಜಾರಿಗೆ ತರಲಾಗುತ್ತಿದೆ. ಸದ್ಯ ಅದನ್ನು ದೇಶಾದ್ಯಂತ ಜಾರಿ ಮಾಡುವ ಇರಾದೆ ಕೇಂದ್ರದ್ದು. ಸಿಎಬಿಯಲ್ಲಿ ಮೂರು ರಾಷ್ಟ್ರಗಳಿಂದ 2014 ಡಿ.31ರ ಒಳಗೆ ದೇಶಕ್ಕೆ ಯಾವುದೇ ರೀತಿಯ ದಾಖಲೆ ಇಲ್ಲದೆ ಬಂದು ವಾಸಿಸುವ ಆರು ಸಮುದಾಯದ ಜನಾಂಗಕ್ಕೆ ಪೌರತ್ವ ನೀಡುವ ಪ್ರಸ್ತಾಪ.

ಲಿಯಾಖತ್‌ ಪ್ರಸ್ತಾಪ
ಗೃಹ ಸಚಿವ ಅಮಿತ್‌ ಶಾ ಸೋಮವಾರ ಲೋಕಸಭೆಯಲ್ಲಿ ಮಾತನಾಡುವ ವೇಳೆ ಜವಾಹರ್‌ಲಾಲ್‌ ನೆಹರೂ ಮತ್ತು ಲಿಯಾಖತ್‌ ಅಲಿ ಖಾನ್‌ ನಡುವಿನ ಒಪ್ಪಂದ ಪ್ರಸ್ತಾಪಿಸಿದ್ದರು. 1950 ಏ.8ರಂದು ಎರಡೂ ದೇಶಗಳಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆಗಾಗಿ ಭಾರತ ಮತ್ತು ಪಾಕಿಸ್ತಾನದ ನಾಯಕತ್ವ ಕಾರ್ಯವೆಸಗುವ ಬಗೆಗಿನ ಒಪ್ಪಂದವಿದು. ಅದರ ಪ್ರಕಾರ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳಿಗೆ, ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರಿಗೆ ಪೌರತ್ವದ ಹಕ್ಕು, ಜೀವಕ್ಕೆ ಮತ್ತು ಆಸ್ತಿಗೆ ಭದ್ರತೆ ನೀಡುವ ಬಗ್ಗೆ ಸಹಮತ ಹೊಂದಲಾಗಿತ್ತು. ವಿಳಂಬ ಧೋರಣೆ ಅನುಸರಿಸದೆ ಸಮಸ್ಯೆ ಇತ್ಯರ್ಥಕ್ಕೆ ಸಲಹೆ ಮಾಡಲಾಗಿತ್ತು. 1950ರಲ್ಲಿ ಸಹಿ ಮಾಡಲಾಗಿದ್ದ ಒಪ್ಪದ ಸರಿಯಾಗಿ ಆರು ವರ್ಷಗಳ ಬಳಿಕ ಅಂದರೆ 1956ರಲ್ಲಿ ಪಾಕಿಸ್ತಾನ ಸರ್ಕಾರ “ಪಾಕಿಸ್ತಾನ ಇಸ್ಲಾಮಿಕ್‌ ರಾಷ್ಟ್ರ’ ಎಂದು ಘೋಷಣೆ ಮಾಡಿಕೊಂಡಿತು. ಜತೆಗೆ 1949ರಲ್ಲಿ ಖಾನ್‌ ಸಲಹೆ ಮಾಡಿದ್ದಂತೆ ಸಂವಿಧಾನ ರಚನಾ ಸಭೆಯಿಂದ ಮುಸ್ಲಿಮೇತರರಿಗೆ ಅವಕಾಶ ಇಲ್ಲ ಎಂಬ ನಿರ್ಣಯ ಅಂಗೀಕರಿಸಲಾಗಿತ್ತು.

ಸರ್ಕಾರ VS ಪ್ರತಿಪಕ್ಷಗಳು
ಸಂವಿಧಾನದ 13ನೇ ವಿಧಿ
ಮೂಲಭೂತ ಹಕ್ಕುಗಳ ಮೇಲೆ ನಿಯಂತ್ರಣ ಹೇರುವ ಅಥವಾ ರದ್ದು ಮಾಡುವ ಯಾವುದೇ ಕಾನೂನನ್ನು ಸರ್ಕಾರ ಮಾಡುವಂತಿಲ್ಲ

ಪ್ರತಿಪಕ್ಷಗಳು: ಯಾವುದೇ ಧರ್ಮ ವನ್ನು ಅನುಸರಿಸುವ ಮೂಲಭೂತ ಹಕ್ಕನ್ನು ¤ ಕಾನೂನಿನ ಮುಂದೆ ಸಮಾನ ಅವಕಾಶ ಎನ್ನುವುದನ್ನು ವಿಧೇಯಕ ಉಲ್ಲಂ ಸುತ್ತದೆ.

ಸರ್ಕಾರ: ವಿಧೇಯಕದಲ್ಲಿ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವ ಯಾವುದೇ ಅಂಶವಿಲ್ಲ. ಹೀಗಾಗಿ ಸಂವಿಧಾನದ 13ನೇ ವಿಧಿಯ ಪ್ರಶ್ನೆಯೇ ಬರುವುದಿಲ್ಲ.

ಸಂವಿಧಾನದ 14ನೇ ವಿಧಿ
ಭಾರತದ ಭೂ ಭಾಗದ ವ್ಯಾಪ್ತಿಯಲ್ಲಿ ಯಾವೊಬ್ಬ ವ್ಯಕ್ತಿಗೂ ಕಾನೂನಿನ ಮುಂದೆ ಸಮಾನ ಅವಕಾಶ ಅಥವಾ ಸಮಾನ ರೀತಿಯಲ್ಲಿ ರಕ್ಷಣೆ ಪಡೆದುಕೊಳ್ಳುವ ಅವಕಾಶ ಪಡೆದುಕೊಳ್ಳುವುದನ್ನು ನಿರಾಕರಿಸುವಂತೆ ಇಲ್ಲ

ಪ್ರತಿಪಕ್ಷಗಳು: ವಿಧೇಯಕ ಮುಸ್ಲಿಮರ ವಿರುದ್ಧ ಇದೆ. ಹೀಗಾಗಿ ಕಾನೂನಿನ
ಮುಂದೆ ಅವರಿಗೆ ಸಮಾನ ಅವಕಾಶಗಳು ಇಲ್ಲ.

ಸರ್ಕಾರ: ನಿಯಮಗಳನ್ನು ರಚನೆ ಮಾಡುವು ದರಲ್ಲಿ 14ನೇ ವಿಧಿ ಬರುವುದೇ ಇಲ್ಲ. ಇಂದಿರಾ ಗಾಂಧಿ 1971ರಲ್ಲಿ ಬಾಂಗ್ಲಾದೇಶದಿಂದ ಬಂದವ ರಿಗೆ ಪೌರತ್ವ ನೀಡುವುದಕ್ಕೆ ನಿರ್ಧರಿಸಿದ್ದರು. ಅವರು ಆ ವ್ಯವಸ್ಥೆಯನ್ನು ಪಾಕಿಸ್ತಾನದವರಿಗೆ ವಿಸ್ತರಿಸಲಿಲ್ಲ.

ಸಂವಿಧಾನದ 15ನೇ ವಿಧಿ
ಧರ್ಮ, ಕುಲ, ಜಾತಿ, ಲಿಂಗ ಅಥವಾ ಹುಟ್ಟಿದ ಸ್ಥಳದ ಆಧಾರದಲ್ಲಿ ಯಾರ
ವಿರುದ್ಧವೂ ತಾರತಮ್ಯ ಎಸಗುವಂತೆ ಇಲ್ಲ.

ಪ್ರತಿಪಕ್ಷಗಳು: ವಿಧೇಯಕದಲ್ಲಿ ಕೆಲ ಸಮುದಾಯಗಳಿಗೆ ಪೌರತ್ವ ನೀಡುವುದಕ್ಕೆ ಅವಕಾಶ ನೀಡಲಾಗಿಲ್ಲ. ಹೀಗಾಗಿ ಅದು ಸಂವಿಧಾನದ 15ನೇ ವಿಧಿಯನ್ನು ಉಲ್ಲಂ ಸುತ್ತದೆ

ಸರ್ಕಾರ: ನೆರೆಯ ರಾಷ್ಟ್ರಗಳಲ್ಲಿ ಧಾರ್ಮಿಕ ಕಾರಣ ಗಳಿಗಾಗಿ ಶಿಕ್ಷೆಗೆ ಒಳಪಟ್ಟವರಿಗೆ ರಕ್ಷಣೆ ನೀಡುವುದು ಉದ್ದೇಶ. ಜಾತಿ ಆಧಾರಿತ ಮೀಸಲು ವ್ಯವಸ್ಥೆ ಅದನ್ನು ಉಲ್ಲಂ ಸುವುದಿಲ್ಲ ಎಂದಾದರೆ, ಪೌರತ್ವ ವಿಧೇಯಕದಲ್ಲಿ ಯಾವುದೇ ಸಮಸ್ಯೆ ಇಲ್ಲ.

ಸಂವಿಧಾನದ 21ನೇ ವಿಧಿ
ಸಂಸ್ಥಾಪಿತಗೊಂಡ ಕಾನೂನು ಮತ್ತು ನಿಯಮದ ಹೊರತಾಗಿ ಯಾರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜೀವನ ಕ್ರಮವನ್ನು ಕಿತ್ತುಕೊಳ್ಳುವಂತೆ ಇಲ್ಲ.

ಪ್ರತಿಪಕ್ಷಗಳು: ಮುಸ್ಲಿಂ ವಲಸೆಗಾರರಿಗೆ ವಿಧೇಯಕದಲ್ಲಿ ಸ್ವಾತಂತ್ರ್ಯ ಮತ್ತು ಜೀವನದ ಹಕ್ಕು ನಿರಾಕರಿಸಲಾಗಿದೆ.

ಸರ್ಕಾರ: ಯಾವುದೇ ಸಮುದಾಯವನ್ನು ಗುರಿಯಾಗಿರಿಸಿಕೊಂಡು ವಿಧೇಯಕ ಇಲ್ಲ ಮತ್ತು ಯಾರ ಸ್ವಾತಂತ್ರ್ಯವನ್ನೂ ಕಿತ್ತುಕೊಳ್ಳಲಾಗುತ್ತಿಲ್ಲ. ವಿದೇಶಿ ವ್ಯಕ್ತಿಗೆ ಭಾರತದಲ್ಲಿ ವಾಸಿಸಲು ಅವಕಾಶ ಮಾಡಿಕೊಡುವುದಿಲ್ಲ.

ಸಂವಿಧಾನದ 24ನೇ ವಿಧಿ
ಎಲ್ಲರಿಗೂ ಸಮಾನ ರೀತಿಯಲ್ಲಿ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ಅವರವರಿಗೆ ಬೇಕಾದ ಧರ್ಮ ಅನುಸರಿಸಲು, ಬೋಧಿಸಲು, ಆಚರಿಸಲು ಅವಕಾಶ ಕಲ್ಪಿಸಿಕೊಡಬೇಕು.

ಪ್ರತಿಪಕ್ಷಗಳು: ವಿಧೇಯಕದಿಂದ ಮುಸ್ಲಿಂ ಸಮುದಾಯವನ್ನು ಹೊರಗಿಡುವ ಮೂಲಕ ಧರ್ಮವನ್ನು ಅನುಸರಿಸುವ ಹಕ್ಕನ್ನು ಉಲ್ಲಂ ಸಿದಂತಾಗುತ್ತದೆ.

ಸರ್ಕಾರ: ವಿಧೇಯಕದಿಂದಾಗಿ ಯಾರ ಧರ್ಮದ ಹಕ್ಕು ಮತ್ತು ಯಾರ ಹಕ್ಕನ್ನೂ ಕಿತ್ತು ಕೊಂಡಂತೆ ಆಗುವುದಿಲ್ಲ. ಇತರ ದೇಶಗಳಲ್ಲಿ ಶಿಕ್ಷೆಗೆ ಒಳಗಾದ ಅಲ್ಪಸಂಖ್ಯಾತರಿಗೆ ನೆರವು ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next