Advertisement

ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೇಲಿ ಪಾಸ್, ರಾಜ್ಯಸಭೆಯಲ್ಲಿ ಶಾ ಲೆಕ್ಕಚಾರ ಹೇಗಿದೆ ಗೊತ್ತಾ?

10:05 AM Dec 11, 2019 | Nagendra Trasi |

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ಸತತ 7ಗಂಟೆಗಳ ಕಾಲ ಸುದೀರ್ಘ ಚರ್ಚೆಯ ನಂತರ ಲೋಕಸಭೆಯಲ್ಲಿ ಸೋಮವಾರ ತಡರಾತ್ರಿ ಅಂಗೀಕಾರಗೊಂಡಿದೆ. ಇದೀಗ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಬುಧವಾರ ಅಂಗೀಕಾರಗೊಳ್ಳುವ ನಿರೀಕ್ಷೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರದ್ದಾಗಿದೆ.

Advertisement

ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಬಹುಮತದೊಂದಿಗೆ ಅಂಗೀಕಾರಗೊಂಡಿತ್ತು. ಅದೇ ರೀತಿ ಮೇಲ್ಮನೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಳ್ಳಲು ಎನ್ ಡಿಎ ಸರ್ಕಾರಕ್ಕೆ ದೊಡ್ಡ ಸಮಸ್ಯೆ ಎದುರಾಗಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವಾಗಿದೆ.

ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಜೆಡಿಯು, ಶಿವಸೇನಾ, ಬಿಜೆಪಿ ಹಾಗೂ ಈಶಾನ್ಯ ರಾಜ್ಯದ ಕೆಲವು ಪಕ್ಷಗಳು ಬೆಂಬಲ ನೀಡಿದ್ದರಿಂದ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು. 311 ಸಂಸದರು ಮಸೂದೆ ಪರವಾಗಿ ಹಾಗೂ 80 ಸಂಸದರು ಮಸೂದೆ ವಿರುದ್ಧವಾಗಿ ಮತ ಚಲಾಯಿಸಿದ್ದರು. ಏತನ್ಮಧ್ಯೆ ರಾಜ್ಯಸಭೆಯಲ್ಲಿ ಮಸೂದೆ ಏನಾಗಲಿದೆ ಎಂಬುದು ಎಲ್ಲರ ಚಿತ್ತ ನೆಟ್ಟಿದೆ.

ಕಳೆದ ಎರಡು ವರ್ಷಗಳಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿ ಮತ್ತು ಎನ್ ಡಿಎ ತನ್ನ ಸಂಖ್ಯಾಬಲವನ್ನು ವೃದ್ಧಿಸಿಕೊಂಡಿದೆ. 245 ಸದಸ್ಯಬಲ ಹೊಂದಿರುವ ರಾಜ್ಯಸಭೆಯಲ್ಲಿ ಐದು ಸ್ಥಾನಗಳು ಖಾಲಿಯಾಗಿವೆ. ಇದರೊಂದಿಗೆ ರಾಜ್ಯಸಭೆ ಒಟ್ಟು ಸದಸ್ಯ ಬಲ ಈಗ 240. ಒಂದು ವೇಳೆ ರಾಜ್ಯಸಭೆಯಲ್ಲಿಯೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗಬೇಕಾದರೆ 121 ಮತಗಳ ಅಗತ್ಯವಿದೆ.

ರಾಜ್ಯಸಭೆಯಲ್ಲಿ ಮೋದಿ ಸರ್ಕಾರದ ಸಂಖ್ಯಾಬಲ ಎಷ್ಟು?

Advertisement

ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗಬೇಕಾದರೆ ಶಾಗೆ 121 ಸದಸ್ಯರ ಬೆಂಬಲದ ಅಗತ್ಯವಿದೆ. ಮೇಲ್ಮನೆಯಲ್ಲಿ ಬಿಜೆಪಿಯ 83, ಬಿಜೆಡಿ 07, ಎಐಎಡಿಎಂಕೆ 11, ಅಕಾಲಿ ದಳ್ 03, ಶಿವಸೇನಾ 03, ಜೆಡಿಯು 06, ವೈಎಸ್ ಆರ್ 2, ಎಲ್ ಜೆಪಿ 01, ಆರ್ ಪಿಐ 01 ಹಾಗೂ ನಾಲ್ವರು ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರು ಸೇರಿ ಒಟ್ಟು 121 ಸದಸ್ಯರ ಬೆಂಬಲ ಸರಳವಾಗಿ ಪಡೆಯಬಹುದಾಗಿದೆ.

ಮತ್ತೊಂದೆಡೆ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸುತ್ತಿರುವ ಪ್ರತಿಪಕ್ಷಗಳಿಗೆ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗುವುದನ್ನು ತಡೆಯಲು ಸಾಧ್ಯವಿಲ್ಲ. ಮೇಲ್ಮನೆಯಲ್ಲಿ ಕಾಂಗ್ರೆಸ್ 46, ಟಿಎಂಸಿ 13, ಸಮಾಜವಾದಿ 09, ಎಡಪಕ್ಷ 06, ಡಿಎಂಕೆ 05, ಆರ್ ಜೆಡಿ , ಎನ್ ಸಿಪಿ, ಬಿಎಸ್ಪಿ ಸೇರಿ 04, ಟಿಡಿಪಿ 02, ಮುಸ್ಲಿಂ ಲೀಗ್ 2, ಪಿಡಿಪಿ 01, ಜೆಡಿಎಸ್ 01, ಕೇರಳ ಕಾಂಗ್ರೆಸ್ 01, ಟಿಆರ್ ಎಸ್ 6 ಸೇರಿ ಒಟ್ಟು 100 ಮಂದಿ ಸದಸ್ಯ ಬಲ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next