Advertisement

ಪೌರತ್ವ ತಿದ್ದುಪಡಿ ಮಸೂದೆಗೆ ಲೋಕಸಭೆ ಅಂಗೀಕಾರ

09:44 AM Dec 10, 2019 | Hari Prasad |

ನವದೆಹಲಿ: ನೆರೆದೇಶಗಳಿಂದ ಭಾರತಕ್ಕೆ ವಲಸೆ ಬಂದು ಇಲ್ಲಿ ನೆಲೆಸಿರುವ ಮುಸ್ಲಿಮೇತರರಿಗೆ ಭಾರತದ ಪೌರತ್ವವನ್ನು ನೀಡಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ತಿದ್ದುಪಡಿಗೆ ಉದ್ದೇಶಿಸಿರುವ ಬಹುಚರ್ಚಿತ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ತಡರಾತ್ರಿವರೆಗೂ ಗಂಭೀರ ಚರ್ಚೆ ನಡೆಯಿತು.

Advertisement

ಮೊದಲಿಗೆ ಈ ತಿದ್ದುಪಡಿ ಮಸೂದೆಗೆ ಕೆಲವೊಂದು ಬದಲಾವಣೆಗಳನ್ನು ಸೂಚಿಸಿ ವಿಪಕ್ಷ ಸದಸ್ಯರು ಮಂಡಿಸಿದ್ದ ಪ್ರಸ್ತಾಪಗಳನ್ನು ಧ್ವನಿಮತಕ್ಕೆ ಹಾಕಲಾಯಿತು. ಬಳಿಕ ತಿದ್ದುಪಡಿ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ತಿದ್ದುಪಡಿ ಪರವಾಗಿ 311 ಮತಗಳು ಬಿದ್ದರೆ ಮಸೂದೆಯನ್ನು ವಿರೋಧಿಸಿ 80 ಮತಗಳು ಬಿದ್ದವು. ಈ ಮೂಲಕ ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕೃತಗೊಂಡಿದೆ ಎಂದು ಲೋಕಸಭಾಧ್ಯಕ್ಷರು ಘೋಷಿಸಿದರು.

ಇನ್ನು ಈ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next