Advertisement

ಕ್ಷತ್ರಿಯ ಆಹಾರಕ್ಕೆ ಮಾರು ಹೋದ ನಾಗಕರಿಕರು

11:51 AM Jul 17, 2017 | |

ಬೆಂಗಳೂರು: “ಮಾಂಸಪ್ರಿಯರ ಬಾಯಲ್ಲಿ  ನೀರೂರಿಸುವ ಏಡಿ ಗೊಜ್ಜು..ಹೆಸರು ಕೇಳಿದಾಕ್ಷಣ ಸವಿಯಬೇಕು ಎನ್ನುವ ನಾಟಿ ಕೋಳಿ ಸಾಂಬಾರ್‌ನ ಘಮಲು.. ಸವಿದೇ ನೋಡಬೇಕೆನ್ನುವ ವಿವಿಧ ಬಗೆಯ “ಮತ್ಸ’ಗಳ  ಖಾದ್ಯ… ಅಷ್ಟೇ ಅಲ್ಲ, ಸಸ್ಯಹಾರ ಪ್ರಿಯರಿಗೆ ವಿಶೇಷ ಭೂರಿ ಭೋಜನಗಳ ಆಯ್ಕೆ…ತುಮಕೂರು ರಸ್ತೆಯ ನೀಲಕಂಠ ಕನ್ವೆನನ್‌ ಸೆಂಟರ್‌ನಲ್ಲಿ ಭಾನುವಾರ ನಡೆದ ಕ್ಷತ್ರಿಯ “ಫ‌ುಡ್‌ಮೇಳ’ದಲ್ಲಿ ಆಹಾರ ಪ್ರಿಯರಿಗೆ  ಮಾಂಸಾಹಾರ ಹಾಗೂ ಸಸ್ಯಹಾರ ಪ್ರಿಯರಿಗೆ ಸಿದ್ಧಪಡಿಸಲಾಗಿದ್ದ ಖಾದ್ಯಗಳಿವು. 

Advertisement

ವಿಶ್ವ ಕ್ಷತ್ರಿಯ ಮಹಾಸಂಸ್ಥಾನ ಆಯೋಜಿಸಿದ್ದ ಈ ಆಹಾರ ಮೇಳದಲ್ಲಿ ಪಾಲ್ಗೊಂಡಿದ್ದ 10 ಸಾವಿರಕ್ಕೂ ಅಧಿಕ ಮಂದಿ, ತಮಗಿಷ್ಟವಾದ ಬಗೆಬಗೆಯ ಮಾಂಸಾಹಾರ ಖಾದ್ಯಗಳ ರುಚಿಗೆ ಮಾರುಹೋದರು. ಫ‌ುಡ್‌ಮೇಳದಲ್ಲಿ ಭಾಗವಹಿಸಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ ಬಿ.ಜೆ.ಪುಟ್ಟಸ್ವಾಮಿ, “ಹಳೆಯ ಕಾಲದಲ್ಲಿ ಕ್ಷತ್ರಿಯರು ಸವಿಯುತ್ತಿದ್ದ ಸಾಂಪ್ರದಾಯಿಕ ಆಹಾರ ಖಾದ್ಯಗಳ ಮೇಳವನ್ನು ನೆನಪಿಸುವ ಈ ಮೇಳ ಉತ್ತಮವಾಗಿದೆ.

ನಮ್ಮ ಹಿಂದಿನ ಆಹಾರ ಸಂಸ್ಕೃತಿಯನ್ನು ಅರಿಯಲು ಇಂತಹ ಆಹಾರ ಮೇಳಗಳನ್ನು ಆಯೋಜಿಸುವ ಅಗತ್ಯವಿದೆ,’ ಎಂದರು. ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಮಾತನಾಡಿ, “ಕ್ಷತ್ರಿಯರ ಆಹಾರದಲ್ಲಿ ಮಾಂಸಾಹಾರ ಮಾತ್ರವಲ್ಲದೆ, ಸಸ್ಯಾಹಾರವೂ ಇತ್ತು.

ಇವುಗಳಿಂದಲೂ ಹಿಂದಿನ ಕಾಲದಲ್ಲಿ ಸೈನಿಕರು ಬಲಿಷ್ಠರಾಗಿರಲು ಸಾಧ್ಯವಾಗಿತ್ತು. ಕ್ಷತ್ರಿಯರ ಆಹಾರ ಪದ್ಧತಿ ಜನರಿಗೆ ಮುಟ್ಟಿಸುವ ಸಲುವಾಗಿ ಆಯೋಜನೆಗೊಂಡಿರುವ ಈ ಮೇಳ ಮಾದರಿಯಾಗಿದೆ,’ ಎಂದರು. ವಿಶ್ವ ಕ್ಷತ್ರಿಯ ಮಹಾ ಸಂಸ್ಥಾನದ ಅಧ್ಯಕ್ಷ ಎಂ.ಡಿ. ಪ್ರಕಾಶ್‌, ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next