Advertisement
ಲಿಖಿತ ದೂರುಕೇಪು ಬೀಟ್ ಪೊಲೀಸ್ ವೀರೇಶ್, ಯಾವುದೇ ಕ್ರಿಮಿನಲ್ ವಿಚಾರಕ್ಕೆ ಸಂಬಂಧಿಸಿ ಬೀಟ್ ಕರ್ತವ್ಯದ ಪೊಲೀಸ್ ಅಥವಾ ಪೊಲೀಸ್ ಠಾಣೆಗೆ ತತ್‌ಕ್ಷಣ ಮೌಖಿಕ ಮಾಹಿತಿ ನೀಡಿ, ಬಳಿಕ ಲಿಖೀತ ದೂರು ಸಲ್ಲಿಸಬೇಕು ಎಂದು ನಾಗರಿಕರ ಆರೋಪಕ್ಕೆ ಉತ್ತರಿಸಿದರು.
ಕಂದಾಯ, ಆರೋಗ್ಯ, ಕೃಷಿ, ತೋಟಗಾರಿಕೆ, ಮೆಸ್ಕಾಂ, ಆರಕ್ಷಕ ಇಲಾಖೆ ಯವರು ಮಾಹಿತಿ ನೀಡಿದರು. ಜಿ.ಪಂ. ಸದಸ್ಯೆ ಜಯಶ್ರೀ ಕೋಡಂದೂರು, ತಾ.ಪಂಚಾಯತ್ ಸದಸ್ಯೆ ಕವಿತಾ ಸುಬ್ಬ ನಾಯ್ಕ, ಉಪಾಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ, ಸದಸ್ಯರಾದ ಮಾಲತಿ ಬಿ., ಕೇಶವ ಉಪಾಧ್ಯಾಯ ಮಣಿಮುಂಡ, ಸುಮಿತ್ರಾ ಮರಕ್ಕಿಣಿ, ಅಬ್ದುಲ್ ಕರೀಂ ಕುದ್ದುಪದವು, ರತ್ನಾ ಕಲ್ಲಂಗಳ, ನಿರಂಜನ ಕೆ., ದಿವ್ಯಾ ಮೈರ, ಶಶಿಕಲಾ ಖಂಡಿಗ, ರೇಖಾ ದೇವುಮೂಲೆ, ಹರೀಶ್ ನಾಯ್ಕ ಖಂಡಿಗ, ವಿಟuಲ ನಾಯ್ಕ ಕೋಪ್ರ, ಪುಷ್ಪಾಕರ ರೈ ಚೆಲ್ಲಡ್ಕ, ಲತಾ ಎ., ದಯಾನಂದ ಬೀಜದಡ್ಕ, ಪಿಡಿಒ ನಳಿನಿ, ಪಂಚಾಯತ್ ಸಿಬಂದಿ ಉಪಸ್ಥಿತರಿದ್ದರು.
Related Articles
ಕೇರಳ ಮಾದರಿಯಲ್ಲೇ ಕೃಷಿಕರಿಗೆ ಕೃಷಿ ಇಲಾಖೆಯ ಸಹಾಯಧನ ವಿತರಣೆಯಾಗಬೇಕು. ಪವರ್‌ಮ್ಯಾನ್‌ಗಳ ನಿರ್ಲಕ್ಷéದಿಂದ ಹಲವಾರು ಕಡೆ ವಿದ್ಯುತ್ ತಂತಿಗಳ ಮೇಲೆ ಮರಗಳ ಗೆಲ್ಲುಗಳು ಆವರಿಸಿ ಅಪಾಯ ತಂದೊಡ್ಡುವ ಬಗ್ಗೆ ಗಂಭೀರವಾಗಿ ಗಮನಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಉಕ್ಕುಡ ಉಪವಿಭಾಗಾಧಿಕಾರಿ ಸರಿಪಡಿಸುವ ಭರವಸೆ ನೀಡಿದರು.
Advertisement