Advertisement
ಟೋಲನಾಕಾ, ವಿವೇಕಾನಂದ ನಗರ, ಲಕೀನಗರ, ವಿದ್ಯಾಗಿರಿ, ರಜತಗಿರಿ, ಸತ್ತೂರ ಕಾಲನಿ, ಗಾಂ ಧಿನಗರ, ಶೆಟ್ಟರ ಕಾಲನಿಯ ನಿವಾಸಿಗಳು ಹು-ಧಾ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು. ರಸ್ತೆ ಅಗಲೀಕರಣ ಹೆಸರಿನಲ್ಲಿ ಕಂಪನಿಯವರು ರಸ್ತೆ ಅಗೆದ ಕಾರಣದಿಂದ ಒಳಚರಂಡಿ, ರಸ್ತೆ, ಗಟಾರು ಹಾಳಾಗಿವೆ. ರಸ್ತೆ ಅಗೆಯವ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್‌ಗೆ ಚರಂಡಿ ನೀರು ಸೇರಿ ಮನೆಗಳಿಗೆ ಹೊಲಸು ನೀರು ಬರುತ್ತಿವೆ.
Related Articles
Advertisement
ಸುದ್ದಿ ತಿಳಿದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಆರ್‌ಟಿಎಸ್ ಅಧಿಕಾರಿ ಬಸವರಾಜ ಕೆರಿ ಅವರ ಎದುರು ಅಳಲು ತೋಡಿಕೊಂಡ ನಿವಾಸಿಗಳು, ಈ ಸಮಸ್ಯೆಗಳಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಮೂರು ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆ ದೊರೆತ ಬಳಿಕ ಪ್ರತಿಭಟನೆ ಹಿಂಪಡೆದರು.
ಅರ್ಧ ತಾಸಿಗೂ ಹೆಚ್ಚು ಸಮಯ ರಸ್ತೆತಡೆ ನಡೆಸಿದ್ದರಿಂದ ಸಂಚಾರದಲ್ಲಿ ವ್ಯತ್ಯಯ ಆಗಿದ್ದು, ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಪ್ರತಿಭಟನೆಯಲ್ಲಿ ಮೋಹನ ಅರ್ಕಸಾಲಿ, ಸಂತೋಷ ಪಟ್ಟಣಶೆಟ್ಟಿ, ಮಧು ಸತ್ತೂರ, ಶಂಕರ ದೇವರೆಡ್ಡಿ, ಇಸಬೆಲ್ಲಾದಾಸ, ರಘು ಲಕ್ಕನ್ನವರ, ಶೈಲಾ ಕಾಮರೆಡ್ಡಿ, ಅರುಣ, ಮನೋಜ ಸಂಗೊಳ್ಳಿ,
-ಕಿರಣ ಹಿರೇಮಠ, ದೀಪಕ ಗಾಂವಕರ, ಶೈಲಜಾ ಗುಡ್ಡದ, ರೂಪಾ ಇರೇಶನವರ, ಪುಷ್ಪಾ ನಾಯಕ, ಅನಂತ ಕೃಷ್ಣ ಕಿಡಿಯೂರ, ತುರಮರಿ, ಸಂತೋಷ ತಳವಾಯಿ, ಕುಮಾರ ಚಿನಿವಾಳ, ವೀರಭದ್ರ ಭರಣಿ ಮತ್ತನವರ, ಮಂಜುನಾಥ ಕಲ್ಲೂರಮಠ, ರಮೇಶ ಶೆಟ್ಟಿ, ರಾಜು ಇಟಗಿ ಸೇರಿದಂತೆ ಹಲವರು ಇದ್ದರು.