Advertisement
ಬೆಸ್ಕಾಂ ವ್ಯಾಪ್ತಿಗೆ ಹಂಚಿಕೆಯ ವಿದ್ಯುತ್‌ನಲ್ಲಿ 500 ಮೆಗಾ ವ್ಯಾಟ್ ಕೊರತೆ ಸಂಭವಿಸಿದ ಪರಿಣಾಮವಾಗಿ ವಿದ್ಯುತ್ ಕೊರತೆ ಉಂಟಾಗಿದೆ. ನಗರದಲ್ಲಿ ವಿದ್ಯುತ್ ವ್ಯತ್ಯಯದ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇಲ್ಲದೇ ಇರುವುದರಿಂದ ಸಾರ್ವಜನಿಕರು, ಸಣ್ಣ ಉದ್ಯಮಿಗಳು, ಹೋಟೆಲ್, ದಿನಿಸಿ ಅಂಗಡಿ ಮೊದಲಾದ ಸ್ಥಳಗಳಲ್ಲಿ ಸಂಜೆಯ ಅಂಧಕಾರ ದಟ್ಟವಾಗಿತ್ತು.
Related Articles
Advertisement
ಐಇಎಕ್ಸ್‌ನಿಂದ ತಕ್ಷಣಕ್ಕೆ 300 ಮೆಗಾವ್ಯಾಟ್ ಖರೀದಿಸಿ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ವಿದ್ಯುತ್ ವ್ಯತ್ಯಯಕ್ಕೆ ವಿಷಾದಿಸಿರುವ ಬೆಸ್ಕಾಂ ಸಹಕರಿಸುವಂತೆ ಮನವಿ ಮಾಡಿದೆ. ಪರಿಸ್ಥಿತಿ ನಿರ್ವಹಣೆಗಾಗಿ ಇಂಡಿಯನ್ ಎನರ್ಜಿ ಎಕ್ಸ್‌ಚೇಂಜ್‌ನಿಂದ (ಐಇಎಕ್ಸ್) 300 ಮೆಗಾವ್ಯಾಟ್ ವಿದ್ಯುತ್ ಪಡೆಯಲಾಗುತ್ತಿದ್ದು, ಬುಧವಾರ ಪೂರೈಕೆ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ ಎಂದು ಬೆಸ್ಕಾಂ ತಿಳಿಸಿದೆ.
ಅಭಾವಕ್ಕೆ ಕಾರಣ: ರಾಯಚೂರು ಆರ್‌ಟಿಪಿಎಸ್ ಸ್ಥಾವರದಲ್ಲಿ ತಾಂತ್ರಿಕ ದೋಷದಿಂದ ಎರಡು ಘಟಕಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆ ಕುಸಿತ ಕಂಡಿದೆ. ಒಂದು ಘಟಕದ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ಕಾರ್ಯಾರಂಭವಾಗಲಿದೆ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.