ಉಡುಪಿ: ಮರಳು ಸಮಸ್ಯೆ ಕೂಡಲೇ ಬಗೆಹರಿಸಬೇಕು. ಬೆಲೆ ಏರಿಕೆ ನಿಯಂತ್ರಿಸಬೇಕು. ಕಲ್ಯಾಣ ಮಂಡಳಿ ಸಮಸ್ಯೆ ತತ್‌ಕ್ಷಣ ಪರಿಹಾರವಾಗಬೇಕು. ಆನ್ ಲೈನ್ ನೋಂದಾವಣಿ ಸಮಸ್ಯೆ ಬಗೆಹರಿಬೇಕು.
ಕೇಂದ್ರ ಕಾರ್ಮಿಕ ಸಂಘಗಳ ಪ್ರಾತಿನಿಧ್ಯಕ್ಕೆ ಸಹಕರಿಸಬೇಕು ಹಾಗೂ ಮುಖ್ಯಮಂತ್ರಿಗಳು ಘೋಷಿಸಿರುವ ವಸತಿ ಸಹಿತ ಭವಿಷ್ಯ ನಿಧಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕೆಂದು ಪ್ರಮುಖ ಬೇಡಿಕೆಗಳನ್ನು ಮುಂದಿಸಿರಿಕೊಂಡು ಜು. 26ರಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ಜರಗಿತು.
ಮರಳುಗಾರಿಕೆ ವಿಷಯ ಟ್ರಿಬ್ಯುನಲ್ ನಲ್ಲಿದೆ. ಕಾನೂನು ಬದ್ಧವಾಗಿ ಅನುಮತಿ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಉಡುಪಿ ಜಿಲ್ಲೆಯ ಮರಳು ಉಡುಪಿಗೇ ಸಿಗಬೇಕು. ಮರಳಗಾರಿಕೆಯಲ್ಲಿ ಸ್ಥಳೀಯ ಕಾರ್ಮಿಕರಾಗಿ ದುಡಿಯಬೇಕೆಂದು ತಾವು ಶರತ್ತುಗಳು ಹಾಕಿದ್ದೇವೆ. ಮರಳುಗಾರಿಕೆ ನಡೆಯುವ ಮಾರ್ಗ ಸಮರ್ಪಕವಾಗಿರಲಿ 407ವಾಹವನ್ನೇ ಬಳಸಬೇಕೆಂದು ಉಡುಪಿಯಲ್ಲಿ ಜರಗಿದ ಸಭೆಯಲ್ಲಿ ತಿಳಿಸಾಲಗಿದೆ. ಪ್ರಾಯಃ ಮುಂದಿನ ತಿಂಗಳು ಮರಳುಗಾರಿಕೆಗೆ ಅನುಮತಿ ನೀಡುವಂತೆ ಅಧಿಕಾರಿಗಳು ತಿಳಿಸಾಲಗಿದೆ ಎಂದು ಸಿಐಟಿಯು ಸದಸ್ಯರು ನಡೆಸುತ್ತಿದ್ದ ಪ್ರತಿಭಟನಾ ಸಭೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಆಶ್ವಾಸನೆ ನೀಡಿದರು.
ಇದರಿಂದಾಗಿ ಸಿಐಟಿಯು ಆಯೋಜಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ ಮುತ್ತಿಗೆ ಕಾರ್ಯಕ್ರಮ ನಿಂತುಹೋಯಿತು.
ಸಂಘದ ಮುಖಂಡರುಗಳಾದ ದಯಾನಂದ ಕೋಟ್ಯಾನ್, ಶೇಖರ್ ಬಂಗೇರ, ಬಾಲಕೃಷ್ಣ ಶೆಟ್ಟಿ, ಗಣೇಶ್ ನಾಯ್ಕ, ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಸಂಘದ ಮುಖಂಡರುಗಳಾದ ಯು. ದಾಸು ಭಂಡಾರಿ, ಸುರೇಶ್ ಕಲ್ಲಾಗಾರ ಹಾಗೂ ಜಗದೀಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.