Advertisement

ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ

10:27 AM May 23, 2019 | Suhan S |

ಹಾಸನ: ಅಂಗನವಾಡಿ, ಬಿಸಿ ಊಟ, ಅಶಾ ಕಾರ್ಯಕರ್ತೆಯರನ್ನು ಕನಿಷ್ಠ ಕೂಲಿ ವ್ಯಾಪ್ತಿಗೆ ಒಳಪಡಿಸಬೇಕು. ಗ್ರಾಪಂ, ಪ್ಲಾಂಟೇಷನ್‌, ಮುನಿಸಿ ಪಾಲಿಟಿ, ಆಸ್ಪತ್ರೆ ಮತ್ತು ಹಾಸ್ಟೆಲ್ಗಳ ನೌಕರರಿಗೆ ಶಾಸನಾತ್ಮಕ ಕನಿಷ್ಠ ವೇತನ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ನಗರದಲ್ಲಿ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Advertisement

ಕರ್ನಾಟಕದ ಉಚ್ಛ ನ್ಯಾಯಾಲಯದ ತೀರ್ಪಿನಂತೆ 37 ಅನುಸೂಚಿತ ಉದ್ದಿಮೆ ಗಳಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು. ಉಚ್ಛ ನ್ಯಾಯಾಲಯವು 37 ವಿವಿಧ ಶೆಡ್ಯೂಲ್ ಕೈಗಾರಿಕೆಗಳಿಗೆ ರಾಜ್ಯ ಸರ್ಕಾರ ನಿಗದಿಗೊಳಿಸಿರುವ ಕನಿಷ್ಠ ವೇತನ ಅಧಿಸೂಚನೆ ಎತ್ತಿ ಹಿಡಿದಿದೆ. ಅಧಿಸೂಚನೆಯ ದಿನಾಂಕದಿಂದಲೇ ಕಾರ್ಮಿಕರಿಗೆ ಶೇ.6ರಷ್ಟು ಬಡ್ಡಿ ಯೊಂದಿಗೆ ಬಾಕಿಯನ್ನು 8 ವಾರದೊಳಗೆ ಸಂದಾಯ ಮಾಡುವಂತೆಯೂ ಆದೇಶಿಸಿದೆ.

ಹಾಗಾಗಿ 37 ಅನುಸೂಚಿತ ಉದ್ದಿಮೆ ಗಳಲ್ಲಿ ವಿವಿಧ ಕೆಲಸಗಳಲ್ಲಿ ತೊಡಗಿರುವ‌ ಕಾರ್ಮಿಕರ ಮೂಲ ವೇತನ ಹೆಚ್ಚಳ ವಾಗಿದೆ. ಈ ಕನಿಷ್ಠ ವೇತನ ಅಧಿಸೂಚನೆ ಗಿಂತ ಕಡಿಮೆ ಕೂಲಿ ನೀಡುತ್ತಿರುವ ಆಡಳಿತ ಮಂಡಳಿಗಳ – ಮಾಲೀಕರು ಈ ತಕ್ಷಣದಲ್ಲಿ ಬಾಕಿ ಸಮೇತ ಕನಿಷ್ಠ ಕೂಲಿ ನೀಡಬೇಕೆಂದು ಪ್ರತಿಭಟನಾ ಕಾರರು ಆಗ್ರಹಿಸಿದರು.

ಆಗಿರುವ ಲೋಪ ಸರಿಪಡಿ: ಬೆಲೆ ಏರಿಕೆ ಸೂಚ್ಯಂಕದಲ್ಲಿ ಆಗಿರುವ ಲೋಪ ವನ್ನು ಸರಿಪಡಿಸಬೇಕು. ಕನಿಷ್ಠ ಕೂಲಿ ಯನ್ನು ಲೆಕ್ಕ ಹಾಕುವಾಗ ಸರ್ಕಾರ ಅನು ಸರಿಸುತ್ತಿರುವ ಮೂರು ಘಟಕಗಳ ಪದ್ದತಿಗೆ ಬದಲಾಗಿ ತಂದೆ-ತಾಯಿಯರ ಪಾಲನೆ ಪೋಷಣೆಯನ್ನು ಮಕ್ಕಳ ಮೇಲೆ ಕಡ್ಡಾಯಗೊಳಿಸಿರುವ ಕಾನೂ ನಿನ ಹಿನ್ನೆಲೆಯಲ್ಲಿ ಐದು ಘಟಕಗಳ ಆಧಾರದಲ್ಲಿ ಕನಿಷ್ಠ ಕೂಲಿಯನ್ನು ನಿಗದಿಗೊಳಿಸಬೇಕು. ಅಂಗನವಾಡಿ, ಬಿಸಿಯೂಟ, ಆಶಾ ಮತ್ತಿತರೆ ನೌಕರ ರನ್ನು ಕನಿಷ್ಠ ವೇತನ ಕಾಯ್ದೆಯಡಿಯಲ್ಲಿ ತರಬೇಕೆಂದೂ ಪ್ರತಿಭಟನಾಕಾರರು ಮನವಿ ಮಾಡಿದರು

ಚಿಲ್ಲರೆ ಮಾರುಕಟ್ಟೆ ಬೆಲೆ ಪರಿಗಣಿಸಿ: 10 ರೂ.ಗಳಿದ್ದ ಕಾರ್ಮಿಕ ಸಂಘದ ನೋಂದಣಿ ಶುಲ್ಕವನ್ನು ಒಂದು ಸಾವಿರ ರೂ.ಗೆ ಏರಿಸಿರುವ ಸರ್ಕಾರದ ಕ್ರಮ ಖಂಡನೀಯ. ಇದರಿಂದ ಕಾರ್ಮಿಕ ಸಂಘಗಳ ನೊಂದಣಿಗೆ ತೊಡಕಾಗಿ ಕಾರ್ಮಿಕರ ಹಕ್ಕುಗಳ ಉಲ್ಲಂಘನೆ ಯಾಗಲಿದೆ. ಸರ್ಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು.ಪ್ರತೀ ವರ್ಷ ಏರಿಳಿತದ ತುಟ್ಟಿಭತ್ಯೆ ನೀಡಲು ಬೆಲೆ ಏರಿಕೆ ಲೆಕ್ಕ ಹಾಕುವಾಗ ಸಗಟು ಮಾರುಕಟ್ಟೆಯ ಬೆಲೆಗಳನ್ನಾಧರಿ ಸದೆ ಕಾರ್ಮಿಕರ ದಿನನಿತ್ಯ ಕೊಳ್ಳುವ ಚಿಲ್ಲರೆ ಮಾರುಕಟ್ಟೆಯ ಬೆಲೆಗಳನ್ನು ಪರಿಗಣಿಸ ಬೇಕು ಎಂದು ಆಗ್ರಹಿಸಿದರು.

Advertisement

ಸ್ಮಾರ್ಟ್‌ಕಾರ್ಡ್‌ ನೀಡಿ: ರಾಜ್ಯ ಸರ್ಕಾರ ಅಸಂಘಟಿತ ಕಾುರ್ಕರಿಗೆ ಸಾಮಾಜಿಕ ಭದ್ರತಾ ಮಂಡಳಿ ಅಂಬೇಡ್ಕರ್‌ ಸಹಾಯ ಹಸ್ತ ಯೋಜನೆ ಯಡಿಯಲ್ಲಿ ಮನೆಗೆಲ ಸಗಾರರು, ಟೈಲರ್‌ಗಳು, ಮೆಕಾನಿಕ್‌ಗಳು, ಹಮಾ ಲರು, ಕ್ಷೌರಿಕರು, ಚಿಂದಿ ಆಯುವವರು ಹಾಗೂ ಚಾಲಕರಿಗೆ ಸ್ಮಾರ್ಟ್‌ಕಾರ್ಡ್‌ ನೀಡುವುದಾಗಿ ಅರ್ಜಿ ಪಡೆದು ಒಂದು ವರ್ಷವಾದರೂ ಇನ್ನೂ ಸ್ಮಾರ್ಟ್‌ ಕಾರ್ಡ್‌ಗಳನ್ನು ನೀಡಿಲ್ಲ. ಕೂಡಲೆ ಸ್ಮಾರ್ಟ್‌ಕಾರ್ಡ್‌ಗಳನ್ನು ನೀಡ ಬೇಕೆಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next