Advertisement

ಸಹೋದ್ಯೋಗಿಗಳಿಗೆ ಗುಂಡೆಸೆದ ಸಿಐಎಸ್‌ಎಫ್ ಜವಾನ; 3 ಸಾವು

03:18 PM Jan 12, 2017 | Team Udayavani |

ಪಟ್ನಾ : ಬಿಹಾರದ ಔರಂಗಾಬಾದ್‌ ಜಿಲ್ಲೆಯ ನಬೀನಗರ್‌ ಪವರ್‌ ಜನರೇಶನ್‌ ಕಂಪೆನಿ ಲಿಮಿಟೆಡ್‌ (ಎನ್‌ಪಿಜಿಸಿಎಲ್‌)ನ ಘಟಕದಲ್ಲಿ  ಕರ್ತವ್ಯದಲ್ಲಿದ್ದ ಸಿಐಎಸ್‌ಎಫ್ ಜವಾನನೋರ್ವ ತನ್ನ  ಸಹೋದ್ಯೋಗಿಗಳ ಮೇಲೆ ಗುಂಡು ಹಾರಾಟ ನಡೆಸಿ ಮೂವರನ್ನು ಕೊಂದು ಇನ್ನೋರ್ವನನ್ನು ಗಂಭೀರವಾಗಿ ಗಾಯಗೊಳಿಸಿದ ಆಘಾತಕಾರಿ ಘಟನೆ ವರದಿಯಾಗಿದೆ.

Advertisement

ಆರೋಪಿ ಜವನಾನನ್ನು ಕಾನ್‌ಸ್ಟೆಬಲ್‌ ಬಲವೀರ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಆಲಿಗಢದವನು. ಈತನು ಹಾರಿಸಿದ ಗುಂಡಿಗೆ ಮೃತಪಟ್ಟವರು ಓರ್ವ ಹೆಡ್‌ ಕಾನ್‌ಸ್ಟೆಬಲ್‌, ಓರ್ವ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌  ಮತ್ತು  ಓರ್ವ ಕಾನ್‌ಸ್ಟೆಬಲ್‌. ಗಂಭೀರವಾಗಿ ಗಾಯಗೊಂಡಿರುವ ಇನ್ನೋರ್ವರು ಹೆಡ್‌ ಕಾನ್‌ಸ್ಟೆಬಲ್‌.

ರಜೆಗೆ ಸಂಬಂಧಿಸಿ ವಿವಾದದಲ್ಲಿ ತನ್ನ ಸಹನೆ ಕಳೆದುಕೊಂಡ ಜವಾನ ಸಹೋದ್ಯೋಗಿಗಳ ಮೇಲೆ ತನ್ನ ಸರ್ವಿಸ್‌ ರೈಫ‌ಲ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ಸತ್ಯಪ್ರಕಾಶ್‌ ತಿಳಿಸಿದ್ದಾರೆ.  

ಆರೋಪಿ ಜವಾನನ್ನು ಬಂಧಿಸಲಾಗಿದೆ. ಎರಡು ತಿಂಗಳ ಯೋಗ ಕೋರ್ಸ್‌ ಮುಗಿಸಿ ಕರ್ತವ್ಯಕ್ಕೆ ಮರಳಿದ್ದ ಬಲವೀರ್‌ಗೆ ರಜೆಗೆ ಸಂಬಂಧಿಸಿದಂತೆ ಕೆಲವೊಂದು ಸಮಸ್ಯೆಗಳಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next