Advertisement

ಕೈಗಾರಿಕೆಗಳಿಗೆ ಸಿಐಎಸ್‌ : ಕೇಂದ್ರೀಕೃತ ಪರಿವೀಕ್ಷಣೆ ಜಾರಿಗೆ ನಿರ್ಧಾರ

12:22 AM Feb 26, 2021 | Team Udayavani |

ಬೆಂಗಳೂರು: ಕೈಗಾರಿಕೆಗಳ ಕಾರ್ಯನಿರ್ವಹಣೆ, ನಿಯಮ ಪಾಲನೆಯ ತಪಾಸಣೆ, ಮೇಲ್ವಿಚಾರಣೆಗಾಗಿ ವಿವಿಧ ಇಲಾಖೆಗಳು ಪ್ರತ್ಯೇಕ ತಪಾಸಣೆ ನಡೆಸುವುದನ್ನು ತಪ್ಪಿಸಲು ಮತ್ತು ಪಾರ ದರ್ಶಕ ಪರಿಶೀಲನೆಗಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಸೆಂಟ್ರಲ್‌ ಇನ್‌ಸ್ಪೆಕ್ಷನ್‌ ಸಿಸ್ಟಮ್‌ ಜಾರಿಗೆ ಮುಂದಾಗಿದೆ.

Advertisement

ವಿವಿಧ ಇಲಾಖೆಗಳ ಅಧಿಕಾರಿ ತಂಡಗಳು ಪ್ರತ್ಯೇಕವಾಗಿ ಭೇಟಿ ನೀಡು ವುದರಿಂದ ವರ್ಷವಿಡೀ ತಪಾಸಣೆ ನಡೆಯುತ್ತದೆ. ಇದಕ್ಕೆಲ್ಲ ಕಡಿವಾಣ ಹಾಕು ವಂತೆ ಸಿಐಎಸ್‌ ರೂಪುಗೊಂಡಿದೆ.

ಹೊಸ ವ್ಯವಸ್ಥೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಚರ್ಚಿಸಿ ಜಂಟಿ ತಪಾಸಣೆಗೆ ಆದ್ಯತೆ ನೀಡಬೇಕು. ಈ ಬಗ್ಗೆ ಕೈಗಾರಿಕೆಗಳಿಗೆ ಮುಂಚಿತ ಮಾಹಿತಿ ನೀಡುವಂತಿಲ್ಲ. ತಪಾಸಣಾಧಿಕಾರಿಯನ್ನು ಗಣಕೀಕೃತ ವ್ಯವಸ್ಥೆ ಆಯ್ಕೆ ಮಾಡು ವುದರಿಂದ ಒಬ್ಬರೇ ಅಧಿಕಾರಿ 2 ಬಾರಿ ಒಂದೇ ಕೈಗಾರಿಕೆಯಲ್ಲಿ ತಪಾಸಣೆ ನಡೆಸಲು ಅವಕಾಶವಿರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next