Advertisement

ಮೋದಿ ಪ್ರಮಾಣ ವಚನಕ್ಕೆ ತೆರಳುವುದಿಲ್ಲ; ಮಮತಾ ಮನಸ್ಸು ಬದಲು

09:51 AM May 30, 2019 | Vishnu Das |

ಕೋಲ್ಕತಾ : ಮೇ 30 ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಲು ಸಿದ್ದವಾಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನಸ್ಸು ಬದಲಾಯಿಸಿ ಸಮಾರಂಭದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ.

Advertisement

ಬುಧವಾರ ಟ್ವೀಟ್‌ ಮಾಡಿರುವ ಮಮತಾ , ಅಭಿನಂದನೆಗಳು ಪ್ರಧಾನಿ ನರೇಂದ್ರ ಮೋದಿ ಅವರೇ, ನಾನು ಸಾಂವಿಧಾನಿಕ ಆಮಂತ್ರಣವನ್ನುಸ್ವೀಕರಿಸಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದುಕೊಂಡಿದ್ದೆ. ಆದರೆ, ಕಳೆದ1 ಗಂಟೆಗಳಿಂದ ಮಾಧ್ಯಮಗಳ ವರದಿ ನೋಡುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ 54 ರಾಜಕೀಯ ಹತ್ಯೆಗಳು ನಡೆದಿವೆ ಎಂದು ಬಿಜೆಪಿ ಆರೋಪಿಸುತ್ತಿದೆ. ಇದು ಸಂಪೂರ್ಣ ತಪ್ಪುವರದಿ. ಬಂಗಾಳದಲ್ಲಿ ಯಾವುದೇ ರಾಜಕೀಯ ಹತ್ಯೆಗಳು ನಡೆದಿಲ್ಲ. ವೈಯಕ್ತಿಕ ವೈರತ್ವ, ಕುಟುಂಬ ಕಲಹ ಮತ್ತು ಇತರ ವಿವಾದಗಳಿಂದ ಹತ್ಯೆಗಳು ನಡೆದಿವೆ. ಯಾವುದೂ ರಾಜಕೀಯ ಹತ್ಯೆಗಳಲ್ಲ.ನಮ್ಮ ಬಳಿ ಆ ರೀತಿಯ ದಾಖಲೆಗಳು ಇಲ್ಲ.

ಕ್ಷಮಿಸಿ ನರೇಂದ್ರ ಮೋದಿ ಜಿ, ಈ ವಿಚಾರಗಳು ನನ್ನನ್ನು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಡೆದಿವೆ ಎಂದು ಬರೆದಿದ್ದಾರೆ.

ಸಮಾರಂಭವು ಪ್ರಜಾಪ್ರಭುತ್ವ ಉತ್ಸವವನ್ನು ಆಚರಿಸಲು ಒಂದು ಸಂದರ್ಭವಾಗಿದೆ, ಯಾವುದೇ ರಾಜಕೀಯ ಪಕ್ಷ ರಾಜಕೀಯ ಲಾಭ ಗಳಿಸಲು ಅವಕಾಶವನ್ನು ಬಳಸಿಕೊಳ್ಳುವಂತಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next