Advertisement

ವೆಬ್‌ಸೈಟಲ್ಲಿ ಆರ್‌ಟಿಇ ಪ್ರವೇಶ ಸುತ್ತೋಲೆ ಎಡವಟ್ಟು!

03:45 AM Feb 03, 2017 | |

ಗಂಗಾವತಿ: ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನಡಿಯಲ್ಲಿ 2017-18ನೇ ಸಾಲಿನ ಆರ್‌ಟಿಇ ಪ್ರವೇಶ ಅರ್ಜಿ ಸ್ವೀಕಾರಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ದಾಖಲಾತಿಗಳ ಸಮೇತ
ಅರ್ಜಿ ಸಲ್ಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿದರೆ, ಇನ್ನೂ ಆದೇಶ ಬಂದಿಲ್ಲ ಎಂಬ ಉತ್ತರದಿಂದ ಪಾಲಕರು ಗೊಂದಲಕ್ಕೆ ಸಿಲುಕಿದ್ದಾರೆ.

Advertisement

ಇಲಾಖೆಯ ವೆಬ್‌ಸೈಟ್‌ನಲ್ಲಿ ಕಳೆದ ಜ. 12ರಂದು ಸುತ್ತೋಲೆ ಹೊರಡಿಸಿ ಆರ್‌ಟಿಇ ಯೋಜನೆಯಡಿ ಬರುವ ಶಾಲೆಗಳು ಹಾಗೂ ಸೀಟುಗಳ ಹಂಚಿಕೆ ಕುರಿತು ಶಿಕ್ಷಣ ಇಲಾಖೆ ಸುತ್ತೋಲೆ ಪ್ರಕಾರ ಜ. 20ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ ಎಂದು  ತಿಳಿಸಲಾಗಿದೆ. ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗೆ ಮಕ್ಕಳನ್ನು ದಾಖಲು ಮಾಡಲು ಪಾಲಕರು ಜಾತಿ, ವಾಸಸ್ಥಳ ಸೇರಿ ಅಗತ್ಯ ದಾಖಲಾತಿಗಳ ಸಮೇತ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿ ವಿಚಾರಿಸಿದರೆ, “ಇನ್ನೂ ಸರ್ಕಾರದ ಆದೇಶ ಬಂದಿಲ್ಲ’ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ.

ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುತ್ತೋಲೆ ಆಧರಿಸಿ ಕಂಪ್ಯೂಟರ್‌ ಸೇವಾ ಕೇಂದ್ರಗಳು ಸೂಚನಾ ಫಲಕದಲ್ಲಿ ಆರ್‌ಟಿಇ ಪ್ರವೇಶಕ್ಕೆ ಅರ್ಜಿ ಕರೆಯಲಾಗಿದೆ ಎಂದು ಪ್ರಕಟಣೆ ಹಾಕುವ ಮೂಲಕ ಪಾಲಕರನ್ನು ಗೊಂದಲಕ್ಕೀಡು ಮಾಡಿದ್ದಾರೆ.

ಆಧಾರ್‌ ಕಡ್ಡಾಯ: ಈ ಸಲ ಆರ್‌ಟಿಇ ಪ್ರವೇಶಕ್ಕೆ ಮಕ್ಕಳ ಆಧಾರ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲು ಮಾಡಲು ಸರಕಾರದ ಸುತ್ತೋಲೆಯಲ್ಲಿ ತಿಳಿಸಿದೆ. ಆಧಾರ ಸಂಖ್ಯೆ ಇಲ್ಲದಿದ್ದಲ್ಲಿ ಅದನ್ನು ಪಡೆಯಲು ಕಂದಾಯ ಇಲಾಖೆಯ ಆಧಾರ ನೋಂದಣಿ ಕೇಂದ್ರದ
ವಿಳಾಸವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನ ವೆಬ್‌ ಸೈಟ್‌ನಲ್ಲಿ ಪ್ರಕಟಿಸಿದೆ. ನಿಗದಿತ ವೇಳೆ ಆಧಾರ್‌ ಸಂಖ್ಯೆ ದೊರಕದಿದ್ದರೆ ತಂದೆ ಅಥವಾ ತಾಯಿಯ ಆಧಾರ ಸಂಖ್ಯೆ ಮಗುವಿಗೆ ನೀಡಿ, ಆನಂತರ ತಿದ್ದುಪಡಿ ಮೂಲಕ ಮಗುವಿನ ಸಂಖ್ಯೆ ದಾಖಲು ಮಾಡಲು ಸೂಚನೆಯಲ್ಲಿ ತಿಳಿಸಲಾಗಿದೆ.

ಆರಂಭವಾಗದ ಮಾಹಿತಿ ಕೇಂದ್ರ ಪ್ರತಿ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಯಲ್ಲಿ ಆರ್‌ಟಿಇ ಪ್ರವೇಶ ಮತ್ತು ಮಾಹಿತಿ ನೀಡಲು ಕೇಂದ್ರ
ಆರಂಭ ಮಾಡಲು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ. ಆದರೆ ಬಿಇಒ ಕಚೇರಿಯಲ್ಲಿ ಆರ್‌ಟಿಇ ಮಾಹಿತಿ ನೀಡುವ ಕೇಂದ್ರ
ಆರಂಭವಾಗಿಲ್ಲ. 

Advertisement

ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಆರ್‌ಟಿಇ ಪ್ರವೇಶ ಪ್ರಕ್ರಿಯೆ ಜ.20ರಿಂದ ಆರಂಭವಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು ಬಿಇಒ ಕಚೇರಿಗೆ ಆಗಮಿಸಿದರೆ ಇನ್ನೂ ದಿನಾಂಕ ಬಂದಿಲ್ಲ ಎಂಬ ಸಿಬ್ಬಂದಿ ಉತ್ತರದಿಂದ ನಿರಾಸೆಯಾಗಿದೆ. ಇಲಾಖೆ ಈ ರೀತಿ ಗೊಂದಲ ಸೃಷ್ಟಿಸಬಾರದು. 
ಯಮನೂರಪ್ಪ, ಪಾಲಕ, ಗಂಗಾವತಿ

ಆರ್‌ಟಿಇ ಯೋಜನೆಯಲ್ಲಿ ಮಕ್ಕಳ ದಾಖಲು ಸಂಬಂಧಪಟ್ಟಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಇನ್ನೂ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ. ಇಲಾಖೆಯ ವೆಬ್‌ಸೈಟ್‌ನಲ್ಲಿರುವ ಮಾಹಿತಿ ನಮಗೆ ತಿಳಿಯದು. ಆರ್‌ಟಿಇ ಯೋಜನೆಗೆ ಸಿದಟಛಿತೆ ನಡೆದಿದ್ದು, ಶೀಘ್ರ ಪ್ರಕ್ರಿಯೆ ಆರಂಭಿಸಲಾಗುತ್ತದೆ. ವೆಬ್‌ಸೈಟ್‌ನಲ್ಲಿರುವ ಸುತ್ತೋಲೆ ಕುರಿತು ಪರಿಶೀಲನೆ ಮಾಡಲಾಗುತ್ತದೆ.
ಕೆ. ಆನಂದ, ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ (ಪ್ರಾಥಮಿಕ ಶಿಕ್ಷಣ), ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next