ಮಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅ. 7 ಹಾಗೂ 8ರಂದು ಮಂಗಳೂರಿಗೆ ಆಗಮಿಸಲಿದ್ದು, ಈ ಸಂದರ್ಭ ಅವರು ವಾಸ್ತವ್ಯಕ್ಕೆ ಕದ್ರಿಯ ಸರ್ಕೀಟ್ ಹೌಸ್ ಸಜ್ಜುಗೊಳ್ಳುತ್ತಿದೆ.
ಲೋಕೋಪಯೋಗಿ ಇಲಾಖೆಗೆ ಸೇರಿರುವ ನೂತನ ಸರ್ಕೀಟ್ ಹೌಸನ್ನು ರಾಷ್ಟ್ರಪತಿಯವರ ವಾಸ್ತವ್ಯಕ್ಕೆ ಈಗಾಗಲೇ ಸಂಪೂರ್ಣ ಮೀಸಲಿರಿಸಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಪೈಂಟಿಂಗ್ ನಡೆಸಿ ಸಿಂಗರಿಸಲಾಗುತ್ತಿದ್ದು ಸಿದ್ಧತಾ ಕಾರ್ಯಗಳು ಸಂಪೂರ್ಣ ಗೊಂಡ ಬಳಿಕ ಸ್ಯಾನಿಟೈಸೇಶನ್ ಮಾಡಲಾಗುತ್ತದೆ. ಪೀಠೊಪಕರಣ, ಕರ್ಟನ್, ಅಡುಗೆ ಕೋಣೆ ಸೇರಿದಂತೆ ಎಲ್ಲೆಡೆ ಸುಸಜ್ಜಿತಗೊಳಿಸುವ ಕಾರ್ಯ ನಡೆಯುತ್ತಿದೆ. ಪರಿಸರದಲ್ಲಿ ಬೆಳೆದಿರುವ ಹುಲ್ಲು, ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಲಾಗುತ್ತಿದೆ. ಇವೆಲ್ಲವೂ ಇನ್ನೆರಡು ದಿನಗಳಲ್ಲಿ ಮುಗಿದು ಭದ್ರತಾ ವ್ಯವಸ್ಥೆಗಳಿಗಾಗಿ ಭದ್ರತಾ ಇಲಾಖೆಗೆ ಹಸ್ತಾಂತರಗೊಳ್ಳಲಿದೆ.
ಇದನ್ನೂ ಓದಿ:ಯುಎಇಗಿಂತ ಮುನ್ನ ಭಾರತದಲ್ಲಿ ಹೈಪರ್‌ಲೂಪ್? ಸುಲ್ತಾನ್ ಅಹ್ಮದ್ ಸುಳಿವು
ರಾಷ್ಟ್ರಪತಿಯವರು ವಿಮಾನ ನಿಲ್ದಾಣದಿಂದ ನಗರಕ್ಕೆ ಆಗಮಿಸುವ ರಸ್ತೆಯ ಹೊಂಡಗಳನ್ನು ಮುಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಭದ್ರತಾ ವ್ಯವಸ್ಥೆಗೆ ಪೂರಕ ಸಿದ್ಧತೆಗಳು ನಡೆಯುತ್ತಿವೆ.