ಕಾಬೂಲ್: ಕಳೆದ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ಥಾನವನ್ನು ವಶಪಡಿಸಿಕೊಂಡ ನಂತರ ಒಂದು ವರ್ಷದ ವಿರಾಮದ ನಂತರ, ದೇಶದ ಚಿತ್ರಮಂದಿರಗಳು ಚಲನಚಿತ್ರಗಳನ್ನು ಪ್ರದರ್ಶಿಸಲು ಸಿದ್ಧವಾಗಿವೆ ಆದರೆ ಮಹಿಳಾ ಕಲಾವಿದರ ಪಾತ್ರಗಳು ಸೀಮಿತವಾಗಿರ ಬೇಕು ಎಂದು ಷರತ್ತು ಹಾಕಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮುಚ್ಚಿದ ಒಂದು ವರ್ಷದ ನಂತರ ಆಫ್ಘನ್ ಚಿತ್ರಮಂದಿರಗಳು ಮತ್ತೆ ತೆರೆಯುತ್ತಿರುವ ಕುರಿತು ಹಲವರು ಸಂತೋಷಪಡುತ್ತಿದ್ದರೆ, ಇತರರು ಈ ಪ್ರಕ್ರಿಯೆಯಲ್ಲಿ ಮಹಿಳೆಯರ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
37 ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲು ಅಣಿಯಾಗಿದ್ದು, ಆದರೆ ಇತ್ತೀಚೆಗೆ ನಿರ್ಮಿಸಲಾದ ಈ ಚಲನಚಿತ್ರಗಳಲ್ಲಿ ಒಂದು ಪಾತ್ರವನ್ನು ನಿರ್ವಹಿಸಿದ ಏಕೈಕ ಮಹಿಳಾ ನಟಿ ಅತಿಫಾ ಮೊಹಮ್ಮದಿ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.
ಕಾಬೂಲ್‌ನ ನಿವಾಸಿ ಜಹ್ರಾ ಮುರ್ತಝಾವಿ ಅವರು ಮಹತ್ವದ ಸಂದೇಶವನ್ನು ನೀಡುತ್ತಾ, “ಈ ಕ್ಷೇತ್ರದಲ್ಲಿ ಮಹಿಳೆಯರನ್ನು ನಿಷೇಧಿಸಬಾರದು ಏಕೆಂದರೆ ಇದು ಮಹಿಳೆಯರ ಹಕ್ಕು, ಮಹಿಳೆಯರ ಉಪಸ್ಥಿತಿಯಿಲ್ಲದೆ ಚಲನಚಿತ್ರವು ಉತ್ತಮವಾಗಿ ಧ್ವನಿಸುತ್ತದೆ ಎಂದು ನಾನು ಭಾವಿಸುವುದಿಲ್ಲ.”ಎಂದಿದ್ದಾರೆ.
ತಾಲಿಬಾನ್ ಕಳೆದ ತಿಂಗಳು ಮಹಿಳೆಯರು ಮತ್ತು ಹುಡುಗಿಯರು ಅಗತ್ಯವಿಲ್ಲದಿದ್ದರೆ ತಮ್ಮ ಮನೆಯಿಂದ ಹೊರಬರಬಾರದು ಮತ್ತು ಮುಖವನ್ನು ಒಳಗೊಂಡಂತೆ ಅವರ ಸಂಪೂರ್ಣ ದೇಹವನ್ನುಮುಚ್ಚಬೇಕು ಎಂದು ಘೋಷಿಸಿತ್ತು.