Advertisement

ಆನ್‌ಲೈನ್‌ನಲ್ಲಿ ಸಿನಿಮಾ ಕಾರ್ಯಾಗಾರ

12:05 PM Apr 10, 2020 | Suhan S |

ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮಾಡಲಾಗಿದೆ. ಈ ಸಮಯದಲ್ಲಿ ಪ್ರತಿಯೊಬ್ಬರೂ ಮನೆಯಲ್ಲೇ ಇದ್ದಾರೆ. ಸಿನಿಮಾರಂಗದ ಹಲವರು ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಇನ್ನು ಕೆಲವರು ತಮ್ಮ ಸಿನಿಮಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಅಂತೆಯೇ, ನಿರ್ದೇಶಕ ಶ್ರೀನಿ ಕೂಡ ಈ ವೇಳೆ ಸಿಕ್ಕಿರುವ ಸಮಯವನ್ನು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

Advertisement

ಹೌದು, ಅವರು ಈ ಸಮಯವನ್ನು ಆನ್‌ಲೈನ್‌ನಲ್ಲಿ ಸಿನಿಮಾ ಮೇಕಿಂಗ್‌ ಕುರಿತು ವರ್ಕ್ ಶಾಪ್‌ ನಡೆಸಲು ಮುಂದಾಗಿದ್ದಾರೆ. ತಮ್ಮ ಇನ್‌ ಸ್ಟಾಗ್ರಾಂನಲ್ಲಿ ಪ್ರತಿ ದಿನ ಆರು ಗಂಟೆಗೆ ಬರುವ ಶ್ರೀನಿ, ಕೇವಲ ಅರ್ಧಗಂಟೆಯಲ್ಲಿ ಸಿನಿಮಾ ಮೇಕಿಂಗ್‌ ಕುರಿತು ವರ್ಕ್‌ಶಾಪ್‌ ಮಾಡುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದಲೂ ಅವರು ಈ ಆನ್‌ ಲೈನ್‌ ಸಿನಿಮಾ ಮೇಕಿಂಗ್‌ ಪಾಠ ಶುರು ಮಾಡಿದ್ದು, ಪ್ರತಿ ದಿನ ಅರ್ಧ ಗಂಟೆ ಸಿನಿಮಾದ ವಿವಿಧ ವಿಭಾಗಗಳ ಕುರಿತು ಕಾರ್ಯಾಗಾರ ನಡೆಸುತ್ತಿದ್ದಾರೆ. ಈ ಆನ್‌ಲೈನ್‌ ಸಿನಿಮಾ ಕಾರ್ಯಾಗಾರದಲ್ಲಿ ಕಥೆ, ಚಿತ್ರಕಥೆ ಬಗ್ಗೆ ವಿವರಿಸಿದ್ದಾರೆ.

ಅಂತೆಯೇ ಸಿನಿಮಾ ಬಜೆಟ್‌ ಬಗ್ಗೆಯೂ ಹೇಳಿದ್ದಾರೆ. ಉಳಿದ ಕಾರ್ಯಾಗಾರದ ಸಂದರ್ಭದಲ್ಲಿ ಸಂಕಲನ, ಛಾಯಾಗ್ರಹಣ ಹಾಗು ನಟನೆ ಕುರಿತು ವಿವರಿಸಲಿದ್ದಾರೆ. ಅವರು ಪ್ರತಿದಿನ ಕೊಡುವ ಆನ್‌ ಲೈನ್‌ನಲ್ಲಿ ಸುಮಾರು 300 ಕ್ಕೂ ಹೆಚ್ಚು ಜನ ಪಾಠ ಕೇಳುತ್ತಿದ್ದಾರಂತೆ. ಎಲ್ಲಾ ಸರಿ, ಶ್ರೀನಿ ಅವರಿಗೆ ಇಂಥದ್ದೊಂದು ಯೋಚನೆ ಬಂದಿದ್ದು ಯಾಕೆ? ಈ ಪ್ರಶ್ನೆಗೆ ಉತ್ತರ, ಸಿನಿಮಾ ಮೇಕಿಂಗ್‌ ಬಗ್ಗೆ ತುಂಬಾ ಜನರಿಗೆ ಆಸಕ್ತಿ ಇದ್ದೇ ಇರುತ್ತದೆ. ಆದರೆ, ಕಾರಣಾಂತರದಿಂದ ಕಲಿಯಲು ಆಗುವುದಿಲ್ಲ. ಶ್ರೀನಿ ಕೂಡ ಆನ್‌ ಲೈನ್‌ನಲ್ಲೇ ಸಿನಿಮಾ ಮಾಡುವುದನ್ನು ಕಲಿತಿದ್ದಾರೆ. ಆ ಅನುಭವ ಈಗ ಲೈವ್‌ ಕಾರ್ಯಗಾರದಲ್ಲಿ ಹಂಚಿಕೊಳ್ಳಲಾಗುತ್ತಿದೆಯಂತೆ.  15 ನಿಮಿಷ ಅವರು ಪ್ರತಿ ವಿಷಯ ಕುರಿತು ಶ್ರೀನಿ ಪಾಠ ಮಾಡಿದರೆ, ಉಳಿದ 15 ನಿಮಿಷಗಳ ಕಾಲ ಆ ವಿಷಯಕ್ಕೆ ಸಂಬಂಧಿಸಿದ ನುರಿತ ತಂತ್ರಜ್ಞರು ಮಾತನಾಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next