Advertisement
ಓಟಿಟಿ, ಪ್ಯಾನ್ ಇಂಡಿಯಾ ಜಮಾನ ಬಂದ ಬಳಿಕ ಈಗೀಗ ಮೊದಲಿನ ಹಾಗೆ ಸ್ಟಾರ್ ನಟರ ಸಿನಿಮಾಗಳು ತಿಂಗಳಿಗೊಮ್ಮೆ ಅಥವಾ ವಾರದಲ್ಲಿ ಒಂದಾದರೂ ಬರುವುದಿಲ್ಲ. ಸ್ಟಾರ್ ನಟರು ಪ್ಯಾನ್ ಇಂಡಿಯಾ ರಿಲೀಸ್ ಗಾಗಿ ವರ್ಷದಲ್ಲಿ ಅಥವಾ ಎರಡು ವರ್ಷಕ್ಕೊಂದು ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಆ ಸಿನಿಮಾಗಳು ರಿಲೀಸ್ ಆದ ವೇಳೆ ಹೆಚ್ಚಾಗಿ ಮಲ್ಟಿಫ್ಲೆಕ್ಸ್ ಗಳೇ ಹೌಸ್ ಫುಲ್ ಆಗುತ್ತದೆ ವಿನಃ ಸಿಂಗಲ್ ಸ್ಕ್ರೀನ್ ಗಳತ್ತ ಜನ ಬರುವುದೇ ಕಡಿಮೆ.
Related Articles
Advertisement
ಕಳೆದ ಕೆಲ ವಾರಗಳಿಂದ ಟಾಲಿವುಡ್ ನಲ್ಲಿ ಯಾವ ಪ್ರಮುಖ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ರಿಲೀಸ್ ಆದರೂ ಅದಕ್ಕೆ ಪ್ರೇಕ್ಷಕರು ಬರುವುದು ಕಡಿಮೆಯಾಗಿದೆ. ಪ್ರತಿ ವರ್ಷ ಏಪ್ರಿಲ್ – ಮೇ ತಿಂಗಳಿನಲ್ಲಿ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗುತ್ತಿತ್ತು. ಈ ಬಾರಿ ಐಪಿಎಲ್ ಹಾಗೂ ಎಲೆಕ್ಷನ್ ಜೊತೆಯಾಗಿ ಬಂದಿರುವುದರಿಂದ ಹತ್ತಾರು ಚಿತ್ರತಂಡಗಳು ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡುವ ಸಾಹಸಕ್ಕೆ ಮುಂದಾಗುತ್ತಿಲ್ಲ.
ತೆಲಂಗಾಣದಲ್ಲಿ ಸುಮಾರು 400 ಕ್ಕೂ ಅಧಿಕ ಥಿಯೇಟರ್ ಗಳಿವೆ. ಇದೇ ಶುಕ್ರವಾರ(ಮೇ.17 ರಿಂದ) ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳನ್ನು ಬಂದ್ ಮಾಡಲಾಗುತ್ತಿದೆ. ಸದ್ಯ ರಿಲೀಸ್ ಆಗಿರುವ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಬರುತ್ತಿಲ್ಲ ಹಾಗಾಗಿ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.
ಥಿಯೇಟರ್ ನಲ್ಲಿ ದುಡಿಯುವ ಕೆಲಸಗಾರರಿಗೆ ಸಂಬಳ, ಕರೆಂಟ್ ಬಿಲ್ ಗೆ ಸೇರಿದಂತೆ ಪ್ರತಿಯೊಂದಕ್ಕೂ ಹಣ ವ್ಯಯಿಸಬೇಕಿದೆ. ಇದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟವಾಗುತ್ತಿರುವುದರಿಂದ ಸಿಂಗಲ್ ಸ್ಕ್ರೀನ್ ಥಿಯೇಟರ್ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಮೇ.17 ರಿಂದ 25 ರವರೆಗೆ ಥಿಯೇಟರ್ ಗಳನ್ನು ಬಂದ್ ಮಾಡಲಾಗುತ್ತಿದೆ. ಮೇ.26 ರಂದು ಥಿಯೇಟರ್ ಓಪನ್ ಆಗಲಿದೆ. “ಲವ್ ಮಿ,” “ಗ್ಯಾಂಗ್ಸ್ ಆಫ್ ಗೋದಾವರಿ”, “ಹರೋಮ್ ಹರಾ,”, “ಸತ್ಯಭಾಮಾ” ಸೇರಿದಂತೆ ತಿಂಗಳಾಂತ್ಯದಲ್ಲಿ ಕೆಲ ಸಿನಿಮಾಗಳು ರಿಲೀಸ್ ಆಗಲಿದೆ.