Advertisement

ಚಿತ್ರರಂಗದ ಚಟುವಟಿಕೆಗಳಿಗೆ ಮಾರ್ಗಸೂಚಿ

10:50 AM Mar 20, 2020 | Suhan S |

ಬೆಂಗಳೂರು: ಕೋವಿಡ್ 19 ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ಮಾ.31ರ ವರೆಗೆ ಬಹುತೇಕ ಎಲ್ಲಾ ಚಟುವಟಿಕೆ ಬಂದ್‌ ಮಾಡಲು ಸೂಚಿಸಿ ರುವುದರಿಂದ, ಈ ಸೂಚನೆಯನ್ನು ಯಥಾವತ್ತಾಗಿ ಪಾಲಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ. ವಾಣಿಜ್ಯ ಮಂಡಳಿ

Advertisement

ಸದಸ್ಯರು ಮತ್ತು ಪದಾಧಿಕಾರಿಗಳು ಗುರುವಾರ ಈ ಬಗ್ಗೆ ಚರ್ಚಿಸಲು ಸಭೆ ಸೇರಿದ್ದರು. ಸರ್ಕಾರದ ಸೂಚನೆಯಂತೆ, ಮಾ.31ರವರೆಗೆ ಚಿತ್ರಗಳ ಪ್ರದರ್ಶನ, ಚಿತ್ರೀಕರಣ ಸೇರಿ ಚಿತ್ರರಂಗದ ಬಹುತೇಕ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮಾ.31ರ ನಂತರ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರಕ್ಕೆ ಬರಲು ನಿರ್ಧರಿಸಲಾಗಿದೆ. ಪರಿಸ್ಥಿತಿ ನಿರ್ವಹಿಸಲು ಏಕಾಏಕಿ ದೊಡ್ಡ ಚಿತ್ರ ಗಳನ್ನು ಬಿಡುಗಡೆ ಮಾಡದೆ, ಈಗಾಗಲೇ ಬಿಡುಗಡೆಯಾಗಿರುವ ಕೆಲ ಚಿತ್ರಗಳಿಗೆ ಪ್ರದರ್ಶನ ಮುಂದುವರಿಸಲು ಅವಕಾಶ ಮಾಡಿಕೊಡಲು, ಪ್ರದರ್ಶಕರು ಮತ್ತು ವಿತರಕರ ಜತೆ ಮಾತುಕತೆ ನಡೆಸಲಾಗಿದ್ದು, ಎಲ್ಲರೂ ಇದಕ್ಕೆ ಸಮ್ಮತಿಸಿದ್ದಾರೆ.

ಹೋಟೆಲ್‌ಗ‌ಳಿಗೂ ನಿರ್ಬಂಧ?: ಹೋಟೆಲ್‌ ಗಳಿಗೆ ಜನರ ಓಡಾಟ ಹೆಚ್ಚಿದ್ದು, ಬಹಳ ಸಮಯ ಅಲ್ಲಿಯೇ ಕುಳಿತುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಹೋಟೆಲ್‌ ಗೂ ನಿರ್ಬಂಧ ಹೇರುವ ವಿಚಾರವಾಗಿ ಚರ್ಚೆ ನಡೆದಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ಕಿರುತೆರೆಯೂ ಶಟ್‌ಡೌನ್‌ :  ಕಿರುತೆರೆ ಕೂಡಾ ಸಂಪೂರ್ಣ ಚಿತ್ರೀಕರಣ ನಿಲ್ಲಿಸಲು ನಿರ್ಧರಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌ ಮಾ.22 ರಿಂದ ಮಾ.31ರವರೆಗೆ ಎಲ್ಲಾ ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣವನ್ನು ನಿಲ್ಲಿಸಲು ತೀರ್ಮಾನಿಸಲಾಗಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next