ಕೃಷಿ ಅಧಿಕಾರಿಗಳು ಹಾಗೂ ಸಿಬಂದಿ ತಮಗೇನೂ ಗೊತ್ತಿಲ್ಲ. ಯಾರಿಂದಲೂ ನಮಗೆ ಲಂಚಕ್ಕಾಗಿ ಒತ್ತಡ ಬಂದಿಲ್ಲ. ದೂರಿನ ಪತ್ರದಲ್ಲಿರುವ ಸಹಿಗಳು ನಮ್ಮದಲ್ಲ ಎಂದು ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ.
Advertisement
ಇದರಿಂದ ಸಿಐಡಿ ಅಧಿ ಕಾರಿಗಳಿಗೆ ಕೃಷಿ ಇಲಾಖೆಯಲ್ಲಿರುವವರೇ ಅಧಿಕಾರಿಗಳ ಹೆಸರಿನಲ್ಲಿ ಪತ್ರ ಬರೆದಿರುವ ಶಂಕೆ ವ್ಯಕ್ತವಾಗಿದೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಇತ್ತೀಚೆಗೆ ವರ್ಗಾವಣೆಗೊಂಡ ಸಹಾಯಕ ಕೃಷಿ ನಿರ್ದೇಶಕರ ಮೇಲೂ ಶಂಕಿಸಲಾಗಿದೆ. ಮಂಡ್ಯದಿಂದ ಮತ್ತೂಂದು ಜಿಲ್ಲೆಗೆ ವರ್ಗಾವಣೆಯಾಗಿರುವ ಕೃಷಿ ಅ ಧಿಕಾರಿಗಳ ಮೇಲೆ ಸಂಶಯ ಬಂದಿದ್ದು, ವಿಚಾರಣೆಗೊಳಪಡಿಸಲು ಸಜ್ಜಾಗಿದ್ದಾರೆ. ಮಾಜಿ ಶಾಸಕರೊಬ್ಬರ ಆಪ್ತ ಸಹಾಯಕರಾಗಿದ್ದ ಅ ಧಿಕಾರಿಯೊಬ್ಬರ ಮೇಲೂ ಅನುಮಾನ ವ್ಯಕ್ತಪಡಿಸಿದ್ದು, ಅವರನ್ನು ವಿಚಾರಣೆ ನಡೆಸಲು ಸಿಐಡಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.