Advertisement
ಗುತ್ತಿಗೆದಾರ ಚೆಲುವರಾಜು ಜತೆ ಮಾತನಾಡಿರುವ ಆಡಿಯೋದಲ್ಲಿರುವುದು ಶಾಸಕ ಮುನಿರತ್ನ ಅವರದೇ ಧ್ವನಿ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಮುನಿರತ್ನ ಸಾರ್ವ ಜನಿಕವಾಗಿ ಜಾತಿನಿಂದನೆ ಮಾಡಿರುವುದು, ಸಾಕ್ಷಿದಾರರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿರುವುದು ಮತ್ತು ಜಾತಿ ಜಾತಿಗಳ ನಡುವೆ ವೈಷಮ್ಯ ಉಂಟು ಮಾಡಿರುವುದು ಸಾಬೀತಾಗಿದೆ ಎಂದು ಆರೋಪಪಟ್ಟಿಯಲ್ಲಿದೆ.
ಗುತ್ತಿಗೆದಾರ ಚೆಲುವರಾಜು ಜತೆ ಮುನಿರತ್ನ ಮಾತನಾಡು ವಾಗ ಮತ್ತೂಬ್ಬ ಗುತ್ತಿಗೆದಾರ ವೇಲುನಾಯ್ಕರ್ ಅವರ ಜಾತಿಯ ಬಗ್ಗೆ ಕೀಳಾಗಿ ಮಾತನಾಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯಕ್ಷ ಸಾಕ್ಷಿ ಚೆಲುವರಾಜು ಸೇರಿ ಮೂವರು ನ್ಯಾಯಾಧೀಶರ ಮುಂದೆಯೇ 164 ಅಡಿ ನೀಡಿರುವ ಹೇಳಿಕೆ, 53 ಮಂದಿಯ ಸಾಕ್ಷಿಗಳ ಹೇಳಿಕೆ ಹಾಗೂ ತಾಂತ್ರಿಕ ಸಾಕ್ಷ್ಯ ಸೇರಿ 157 ದಾಖಲೆಗಳು ಸೇರಿ 590 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ. ಏನಿದು ಪ್ರಕರಣ?
ಚೆಲುವರಾಜು ಜತೆ ಮಾತನಾಡುವ ವೇಳೆ ಶಾಸಕ ಮುನಿರತ್ನ ಜೀವ ಬೆದರಿಕೆ ಒಡ್ಡಿದ್ದಲ್ಲದೆ ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ವೇಲು ನಾಯ್ಕರ್ ಸೆ. 13ರಂದು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಮುನಿರತ್ನ ನಿಂದನೆ ಮಾಡಿದ್ದ ಆಡಿಯೋವನ್ನು ಪೊಲೀಸರಿಗೆ ನೀಡಿದ್ದರು. ಪ್ರಕರಣದ ಸಂಬಂಧ ಸೆ. 14ರಂದು ಪೊಲೀಸರು ಕೋಲಾರ ಸಮೀಪದಲ್ಲಿ ಮುನಿರತ್ನ ಅವರನ್ನು ಬಂಧಿಸಿದ್ದರು.
Related Articles
ಗುತ್ತಿಗೆದಾರನ ಜತೆ ಮಾತನಾಡಿದ್ದ ಆಡಿಯೋದಲ್ಲಿ ಇರುವುದು ಮುನಿರತ್ನ ಧ್ವನಿ ಎಂಬುದು ಸಾಬೀತು
ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಇದು ದೃಢಪಟ್ಟ ಬಗ್ಗೆ ಉಲ್ಲೇಖ
ಮುನಿರತ್ನ ಸಾರ್ವಜನಿಕವಾಗಿ ಜಾತಿನಿಂದನೆ ಮಾಡಿದ್ದು ಸಾಬೀತು
ಸಾಕ್ಷಿದಾರರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿರುವ ಬಗ್ಗೆ ವರದಿ
ಜಾತಿ ಜಾತಿಗಳ ನಡುವೆ ವೈಷಮ್ಯ ಉಂಟು ಮಾಡಿರುವುದು ಸಾಬೀತು: ತನಿಖಾಧಿಕಾರಿಗಳು
ಮತ್ತೊಬ್ಬ ಗುತ್ತಿಗೆದಾರ ವೇಲುನಾಯ್ಕರ್ ಅವರ ಜಾತಿ ಬಗ್ಗೆ ಕೀಳಾಗಿ ಮಾತನಾಡಿರುವುದು ಸಾಬೀತು
Advertisement