Advertisement

KEA Exam: ಕೆಇಎ ಪರೀಕ್ಷಾ ಆಕ್ರಮ ಪ್ರಕರಣ… 8 ದಿನ ಆರ್.ಡಿ.ಪಾಟೀಲ್ ಸಿಐಡಿ ವಶಕ್ಕೆ

03:28 PM Nov 15, 2023 | sudhir |

ಕಲಬುರಗಿ: ಕೆ ಇ ಎ ಪರೀಕ್ಷಾ ಅಕ್ರಮದ ರೂವಾರಿ ಎಂದು ಕರೆಯಲಾಗಿರುವ ಆರ್ ಡಿ ಪಾಟೀಲ್ ಅಲಿಯಾಸ್ ರುದ್ರಗೌಡ ಪಾಟೀಲ್ ನನ್ನು ಮೊದಲ ಬಾರಿಗೆ ಸಿಐಡಿ ವಶಕ್ಕೆ ಪಡೆದಿದೆ. ಮುಂದಿನ 8 ದಿನಗಳ ಕಾಲ ಸಿಐಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಡಿ ಪಾಟೀಲ್ ನನ್ನು ವಿಚಾರಣೆ ಮಾಡಲಾಗಿದೆ.

Advertisement

ಇದೇ ವೇಳೆ ನಗರದ ಅಶೋಕ್ ನಗರ ಪೊಲೀಸ್ ಠಾಣೆ, ಗುಲ್ಬರ್ಗ ಯುನಿವರ್ಸಿಟಿ ಪೊಲೀಸ್ ಠಾಣೆ, ಅಫಜಲಪುರ ಪೊಲೀಸ್ ಠಾಣೆ ಇಂದ ಬಂದಿಸಲ್ಪಟ್ಟಿರುವ ಎಲ್ಲಾ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಸಿಐಡಿ ಇಂದು ತನ್ನ ವಶಕ್ಕೆ ಪಡೆದಿದೆ.

ಸಿಐಡಿ ಮೊದಲ ಬೇಟೆ
ಇದೇ ವೇಳೆ ಸಿಐಡಿ ಅಧಿಕಾರಿಗಳು ಪ್ರಕರಣ ತಮ್ಮ ವಶಕ್ಕೆ ಬಂದ ಬಳಿಕ ಓರ್ವ ಪರೀಕ್ಷಾ ಅಭ್ಯರ್ಥಿಯನ್ನು ಬುಧವಾರ ಬಂಧಿಸಿದ್ದಾರೆ

ಬಂಧಿಸಿದ ವ್ಯಕ್ತಿಯ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಸಿಐಡಿ ಹೆಚ್ಚುವರಿ ಎಸ್ಪಿ ಹೆಗಡೆ ನೇತೃತ್ವದಲ್ಲಿ ಡಿವೈಎಸ್ಪಿ ಗಳಾದ ಶಂಕರ್ ಗೌಡ ಪಾಟೀಲ್, ತನ್ವೀರ್ ಹಾಗೂ ಇತರರ ನೇತೃತ್ವದಲ್ಲಿ ಪಾಟೀಲ್ ನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ನಗರದ ಸೆಂಟ್ರಲ್ ಜೈಲಿನಿಂದ ಪಾಟೀಲ್ ನನ್ನು ಬೆಳಗ್ಗೆ ನಗರದ ಐವನ್ ಶಾಹಿಯಲ್ಲಿರುವ ಸಿಐಡಿ ಕಚೇರಿಗೆ ಕರೆತರಲಾಯಿತು.

Advertisement

ಈ ವೇಳೆ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಇದನ್ನೂ ಓದಿ: Tragedy: ಕಂದಕಕ್ಕೆ ಬಿದ್ದ ಬಸ್… 30 ಮಂದಿ ಮೃತ್ಯು, ಹಲವರ ಸ್ಥಿತಿ ಗಂಭೀರ

Advertisement

Udayavani is now on Telegram. Click here to join our channel and stay updated with the latest news.

Next